ಬೆಂಗಳೂರು:ನಾನು ಹುಟ್ಟಿದಾಗಿನಿಂದಲೂ ಬೆಂಗಳೂರನ್ನು ನೋಡುತ್ತಾ ಬೆಳೆದಿದ್ದೇನೆ, ಸಾಧ್ಯಾದರೇ ಬೆಂಗಳೂರು ಸಮಸ್ಯೆ ಬಗೆಹರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಪ್ರದಕ್ಷಿಣೆಗೆ ವ್ಯಂಗ್ಯವಾಡಿದ ವಿ.ಸೋಮಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ನನ್ನ ಆರೋಗ್ಯ ನೋಡಿಕೊಳ್ಳಲು ವೈದ್ಯರಿದ್ದಾರೆ. ಯೋಗ್ಯತೆ ಇದ್ದರೆ ಬೆಂಗಳೂರು ಸಮಸ್ಯೆಯನ್ನು ಬಗೆಹರಿಸಿ ಎಂದರು.
ದೇವೇಗೌಡರ ಹೆಸರಲ್ಲಿ ಹೇಗೆ ಬೆಳೆದ್ರಿ ನಮಗೆ ಗೊತ್ತಿದೆ. ಬೆಂಗಳೂರು ಬಗ್ಗೆ ನಿಮಗೆ ಪಾಠ ಮಾಡ್ತೀನಿ. ಬಿಡುವು ಇದ್ರೆ ಬನ್ನಿ ಹೇಳ್ತೀನಿ ಎಂದು ಸೋಮಣ್ಣಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.
2006 ರಲ್ಲಿ ಆಕಸ್ಮಿಕವಾಗಿ ಸಿಎಂ ಆಗಿದ್ದೆ. ಮೆಟ್ರೋ ಕಂಟ್ರಾಕ್ಟರ್ ಮುಖ ನೋಡದೇ ಕ್ಲಿಯರೆನ್ಸ್ ಕೊಟ್ಟಿದ್ದೇನೆ. ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ರೆ ಬಹಳ ವಿಚಾರ ಇದೆ ಮಾತನಾಡೊಕೆ.ಕೇಂದ್ರ ಸರ್ಕಾರದದಿಂದ ನರ್ಮ್ ಯೋಜನೆಯಲ್ಲಿ 3 ಸಂಸ್ಥೆಯಿಂದ 25 ಸಾವಿರ ಕೋಟಿ ಯಲ್ಲಿ ಬೆಂಗಳೂರು ಮತ್ತು ಮೈಸೂರು ಅಭಿವೃದ್ಧಿಗೆ ತೀರ್ಮಾನ ಮಾಡಿ ಅನುಷ್ಠಾನಕ್ಕೆ ತರಲು ಪ್ರಯತ್ನ ಪಟ್ಟೆ.ನೀವು ಆವಾಗ ಎಂಎಲ್ ಎ ಆಗಿದ್ರೋ ಏನು ಗೊತ್ತಿಲ್ಲ.ಹೌದು ಕಾಂಗ್ರೆಸ್ ಎಂಎಲ್​​ಎ ಆಗಿರಬೇಕು ಆಗ ನಿಮ್ಮಿಂದ ಏನು ಕೇಳಿಲ್ಲ ನಾನು ಎಂದು ಹೇಳಿದರು.
ಬೆಂಗಳೂರು ಸ್ಮಿಮ್ಮಿಂಗ್ ಪೂಲ್ ಆಗಿದೆ. ನಮ್ಮ ಆರೋಗ್ಯದ ಬಗ್ಗೆ ನಿಮಗ್ಯಾಕೆ ಚಿಂತೆ. ಐದು ವರ್ಷ ಏನು ಮಾಡಿದ್ದೀರಾ ಅನ್ನೋದನ್ನು ಮೊದಲು ಹೇಳಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ಜನರಿಗೆ ಬೇಕಾಗಿರೋದು ಅಕ್ಕಿ ಅಲ್ಲ, ಸ್ವಾಭಿಮಾನದ ಬದುಕು: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಗೋವಿಂದ ಕಾರಜೋಳ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eighteen =
Remember me
