ತುಮಕೂರು:ಕಳೆದ ಕೆಲ ದಿನಗಳಿಂದ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ವಿ. ಸೋಮಣ್ಣ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೀಗ ಮತ್ತೊಮ್ಮೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಸೋಮಣ್ಣ ಕೆಲ ನಾಯಿ-ನರಿಗಳಿಂದ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಈ ಕುರಿತು ಮಾತನಾಡಿದ ಸೋಮಣ್ಣ ಕೆಲವು ಸಂದರ್ಭಗಳಲ್ಲಿ ನನ್ನ ದುರಹಂಕಾರ ನನ್ನನ್ನು ತೊಂದರೆ ಕೊಟ್ಟಿದೆ. ಮೇಲೆ ಆಕಾಶವಿದೆ ಎಂದು ತಿಳಿಯದೆ ಅತ್ತ ಕಡೆ ಉಗುಳಿದ್ದೇನೆ. ಅದು ನನ್ನ ಮುಖದ ಮೇಲೆ ಬಿದ್ದಿದ್ದು, ಒರೆಸಿಕೊಂಡು ಮುಂದೆ ಹೋಗುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ನಾನು ಹೇಳುವುದನ್ನೆಲ್ಲಾ 6ನೇ ತಾರೀಕಿನ ಬಳಿಕ ಹೇಳುತ್ತೇನೆ ಎಂದಿದ್ದೇನೆ. ಹೈಕಮಾಂಡ್‌ ಪ್ರತಿಕ್ರಿಯೆಗೆ ಇನ್ನು ಎರಡ್ಮೂರು ದಿನ ಕಾಯುತ್ತೇನೆ. ಆಮೇಲೆ ಮಾತನಾಡುತ್ತೇನೆ. 45 ವರ್ಷ ನಾನು ಸಂಪೂರ್ಣವಾಗಿ ಸಿದ್ಧಗಂಗಾ ಮಠದಲ್ಲಿ ತೊಡಗಿಸಿಕೊಂಡಿದ್ದೇನೆ, ಹತ್ತಾರು ಕಾರ್ಯಕ್ರಮ ಮಾಡಿದ್ದೇನೆ.‌ ಪಾರ್ಟಿ-ಗೀಟಿ ನಮ್ಮ ತಲೆಯಲ್ಲಿ ಇಲ್ಲ.‌ ಕೆಲ ನಾಯಿ‌ ನರಿಗಳಿಂದ ಸ್ವಲ್ಪ ವ್ಯತ್ಯಾಸವಾಯ್ತು, ಸಿದ್ದಗಂಗಾ ಮಠವನ್ನು ಬೇರೆ ಮಠದೊಂದಿಗೆ ಹೋಲಿಕೆ ಮಾಡೋದು ಸರಿಯಲ್ಲ.
ನಾನು ಎರಡ್ಮೂರು ದಿನ ಕಾಯ್ತೇನೆ ಆಮೇಲೆ ಹೊರಗೆ ಹಾಕ್ತೀನಿ, ನನ್ನನ್ನು ನಡೆವಳಿಕೆಯನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ. ಬೆಂಗಳೂರಿನಲ್ಲಿ 14-15 ವರ್ಷ ಮಂತ್ರಿ ಆಗಿದ್ದೆ ಅನ್ನೋದಕ್ಕಿಂತ ಧ್ವನಿ ಇಲ್ಲದವರಿಗೆ ಕೆಲಸ ಮಾಡಿದ್ದೇನೆ. ನನ್ನ ನೇರ ನುಡಿಯ ಸಂಸ್ಕಾರ ಸಿದ್ದಗಂಗಾ ಮಠದಿಂದ ಬಂತು. ವರಿಷ್ಟರು ಯಾವ ರೀತಿ ನಡೆದುಕೊಳ್ಳಬೇಕು ಅಂತ ಹೇಳ್ತಾರೆ ಗೊತ್ತಿಲ್ಲ.
ಇದನ್ನೂ ಓದಿ:ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಬಡಿದಾಡಿಕೊಂಡ ಪುರುಷರು; ವಿಡಿಯೋ ವೈರಲ್
ಅರ್ಹತೆ ಗುರುತಿಸುವ ಮಾನದಂಡ ಈ ರೀತಿ ಆಗಿರಬಾರದು. ಅರ್ಹತೆ ಅವಕಾಶ ವಂಚಿತವಾಗಬಾರದು, ಅರ್ಹತೆ ಯಾರ ಮನೆಯ ಸ್ವತ್ತಲ್ಲ. ಅರ್ಹತೆ ಇಲ್ಲದವರು ಹೇಗೆ ಬೇಕಾದ್ರೂ ನಡೆಕೊಳ್ಳಬಹುದು ಅಂತಿಲ್ಲ. ನನ್ನ ವಿಚಾರದಲ್ಲಿ ಹೈಕಮಾಂಡ್‌ನಿಂದ ಆಗಿರುವ ತಪ್ಪನ್ನು ಯಾವ ರೀತಿ ಸರಿ ಪಡಿಸುತ್ತಾರೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಅನಾವಶ್ಯಕವಾಗಿ ನಮ್ಮನ್ನು ಯಾರೋ ಸಣ್ಣಪುಟ್ಟವರ ಜೊತೆಗೆ ಹೋಲಿಕೆ ಮಾಡಬೇಡಿ. ಕೆಲವು ಸಂದರ್ಭದಲ್ಲಿ ನನ್ನ ದುರಂಹಕಾರ ನಮಗೆ ತೊಂದರೆ ಕೊಟ್ಟಿದೆ. ನಾನು ಮಾಡಿದಂತಹ ತೀರ್ಮಾನ ಮೇಲೆ ಆಕಾಶವಿದೆ ಅಂತ ಆಕಾಶಕ್ಕೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಮಾಜ ಸಚಿವ ವಿ.ಸೋಮಣ್ಣ ತುಮಕೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 2 =
Remember me
