ಬಳ್ಳಾರಿ:ಜನಾರ್ದನ ರೆಡ್ಡಿ ಹಾಗೂ ಸೋದರ ಸೋಮಶೇಖರ ರೆಡ್ಡಿ ನಡುವೆ ರಾಜಕೀಯ ಬಿರುಕಿದೆ ಎನ್ನುವುದು ಎಲ್ಲರಿಗೂ ತಿಳಿದದ್ದೇ . ಇದೀಗ ಚುನಾವಣೆ ಮುಗಿದ ನಂತರ ಜನಾರ್ದನ ರೆಡ್ಡಿ ಮೇಲೆ ವಾಗ್ದಾಳಿ ನಡೆಸಿರುವ ಸೋಮಶೇಖರ ರೆಡ್ಡಿ, ತಮ್ಮ ಸೋದರನನ್ನು ರಿಯಲ್ ಹೇಡಿ ಎಂದು ಕರೆದಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಸೋಮಶೇಖರ ರೆಡ್ಡಿ “ಅವನು ನಮ್ಮನ್ನ ಬಳಸಿಕೊಂಡು ಬೇಳೆ ಬೇಯಿಸಿಕೊಂಡ. ಜನಾರ್ದನರೆಡ್ಡಿ ಹಿಂದೆ ಎಲ್ಲರನ್ನೂ ಖರೀದಿ ಮಾಡಿ ಕರುಣಾಕರರೆಡ್ಡಿಯನ್ನ ಗೆಲ್ಲಿಸಿದ. ಈ ಬಾರಿ ಕಾಂಗ್ರೆಸ್, ಬಿಜೆಪಿಯಲ್ಲಿ ಇರುವವರನ್ನ ಖರೀದಿ ಮಾಡಿ ಕೆಆರ್​ಪಿಪಿ ಪರವಾಗಿ ಕೆಲಸ ಮಾಡಿದ.
ಇದನ್ನೂ ಓದಿ:ಸಿದ್ದರಾಮಯ್ಯ ಸಿಎಂ ಆದರೆ ನಮ್ಮ ಪಕ್ಷದ ಬೆಂಬಲ ಕಾಂಗ್ರೆಸ್‌ಗೆ: ಜನಾರ್ದನ ರೆಡ್ಡಿ
ನಮ್ಮ ವಿರುದ್ದ ಜನಾರ್ದನರೆಡ್ಡಿ ರಣಹೇಡಿ ಅಂತ ಪದ ಬಳಸಿದ್ದಾನೆ? ನಮಗೆ ಏನ್ ಪದ ಬಳಸಿ ಏನ್ ಮಾತನಾಡಿದ್ದಾನೆ ಹೇಳಿ? ನಾನು ಬೆಳೆಸಿದ ಹೇಡಿಗಳು ಮನೆಯಲ್ಲಿದ್ದಾರೆ. ನಾನು ಸದನಕ್ಕೆ ಬಂದಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾನೆ. ನನಗೆ, ಶ್ರೀರಾಮುಲು. ಸೋಮಲಿಂಗಪ್ಪ. ಸುರೇಶಬಾಬು, ಕರುಣಾಕರ ರೆಡ್ಡಿಗೆ ಹೇಡಿ ಅಂತಾ ಕರೆದಿದ್ದಾನೆ. ನಿಜವಾದ ರಣಹೇಡಿ ಜನಾರ್ದನರೆಡ್ಡಿ, ನಾವಲ್ಲ” ಎಂದು ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್​​!
ಇದೇ ಸಂದರ್ಭದಲ್ಲಿ ಅವರು, “ಅವನು ನಮ್ಮನ್ನ ಬಳಸಿಕೊಂಡು  ಬೇಳೆ ಬೇಯಿಸಿಕೊಂಡ. ನಮ್ಮನ್ನ ಬಳಸಿಕೊಂಡು ಜನಾರ್ದನರೆಡ್ಡಿ ಅಕ್ರಮವಾಗಿ ಹಣ ಗಳಿಸಿದ. ನಿಜವಾದ ರಣಹೇಡಿ ನಾವಲ್ಲ. ಜನಾರ್ದನ ರೆಡ್ಡಿ ರಣಹೇಡಿ. ಜನಾರ್ದನರೆಡ್ಡಿಗೆ ಚಿಕ್ಕದಿನಿಂದ ಒಂದು ಗುಣ ಇದೆ. ಯಾರೇ ಆಗಲಿ. ಅವನಿಗೆ ಅವನ ಕೆಳಗೆ ಇರಬೇಕು. ಅವನು ಹೇಳಿದ್ದು ಕೇಳಲಿಲ್ಲ ಅಂದ್ರೆ ಎಲ್ಲರನ್ನೂ ಡೆಮಾಲಿಷ್ ಮಾಡುತ್ತಾನೆ. ನಾವೆಲ್ಲಾ ಒಂದಾಗಿದ್ದೇವೆ, ನಾವೂ ಜನಾರ್ದನ ರೆಡ್ಡಿಯನ್ನು ಎದುರಿಸುತ್ತೇವೆ. ಸಂಸತ್ ಚುನಾವಣೆಯಲ್ಲಿ ನಮ್ಮ ಬಲ ತೋರಿಸುತ್ತೇವೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
