ಬೆಂಗಳೂರು:ರಾಜ್ಯದಲ್ಲಿ ನಿರಂತರವಾಗಿ ಇಂಧನ ದರ ಏರಿಕೆಯಿಂದ ವಾಹನ ಸವಾರರ ಜೇಬು ಸುಡುತ್ತಿದ್ದರೆ ಇತ್ತ ಎಲ್​ಪಿಜಿ ಹಾಗೂ ವಾಣಿಜ್ಯಕ್ಕಾಗಿ ಉಪಯೋಗಿಸುವ ಸಿಲಿಂಡರ್ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಲಾಗಿದ್ದಾರೆ. ಕಳೆದ 15 ದಿನಗಳಲ್ಲಿ ಸಬ್ಸಿಡಿಯುಕ್ತ 14.2 ಕೆ.ಜಿ. ಸಿಲಿಂಡರ್ ಬೆಲೆಯಲ್ಲಿ 100 ರೂ ಹಾಗೂ 19 ಕೆ.ಜಿ. ವಾಣಿಜ್ಯಕ್ಕಾಗಿ ಬಳಸುವ ಸಿಲಿಂಡರ್ ಬೆಲೆಯಲ್ಲಿ 92 ರೂ. ಹೆಚ್ಚಿಸಲಾಗಿದೆ.
ಈ ಹಿಂದೆ 14.2 ಕೆಜಿ ಸಿಲಿಂಡರ್ 597 ರೂ. ಹಾಗೂ 19 ಕೆ.ಜಿ. ಸಿಲಿಂಡರ್ 1,290 ರೂ. ಇತ್ತು. ಆದರೆ, ಸಾರ್ವಜನಿಕರ ತೈಲ ಮಾರುಕಟ್ಟೆ ಕಂಪನಿಗಳು ಡಿ.2ರಂದು ಸದ್ದಿಲ್ಲದೆ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂ. ಹಾಗೂ ವಾಣಿಜ್ಯಕ್ಕೆ ಬಳಸುವ ಸಿಲಿಂಡರ್ ಬೆಲೆ ಮೇಲೆ 56 ರೂ. ಹೆಚ್ಚಿಸಿದ್ದವು. 2 ವಾರದ ಹಿಂದೆಷ್ಟೇ ಹೆಚ್ಚಿಸಲಾಗಿದ್ದ ಸಿಲಿಂಡರ್ ದರಲ್ಲಿ ಮತ್ತೆ ದರ ಏರಿಕೆ ಶಾಕ್ ನೀಡಿದ್ದು, ಡಿ.15ರಂದು 50 ರೂ. ಹಾಗೂ 36 ರೂ. ಹೆಚ್ಚಿಸಲಾಗಿದೆ. ಹಾಗಾಗಿ, ಬೆಂಗಳೂರಿನಲ್ಲಿ ಪ್ರಸ್ತುತ ಸಬ್ಸಿಡಿ ಸಿಲಿಂಡರ್ 697 ರೂ. ಹಾಗೂ 19 ಕೆ.ಜಿ. ಸಿಲಿಂಡರ್ 1,382 ರೂ. ಇದೆ. ಈಗಾಗಲೇ ಕರೊನಾದಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಇಂಧನ ಹಾಗೂ ಸಿಲಿಂಡರ್ ದರ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ:8 ದಿನದಲ್ಲೇ 925 ಕೋಟಿ ರೂ.ಮೌಲ್ಯದ ಮದ್ಯ ಬಿಕರಿ
ಸಬ್ಸಿಡಿ ಸ್ಥಗಿತ:ಗ್ರಾಹಕರಿಗೆ ಸಿಗುತ್ತಿದ್ದ ಅಲ್ಪಸ್ವಲ್ಪ ಗ್ಯಾಸ್ ಸಬ್ಸಿಡಿ ಹಣವೂ ಈಗ ಬರುತ್ತಿಲ್ಲ. ಮೇ, ಜೂನ್ ಹಾಗೂ ಜುಲೈ ತಿಂಗಳಿನ ಸಬ್ಸಿಡಿ ಹಣ ಬಂದಿಲ್ಲ. ಆದರೆ, ಬೇರೆ ಯಾವ ಕಾರಣಕ್ಕಾಗಿ ಕೇಂದ್ರ ಸಬ್ಸಿಡಿ ಹಣ ಸ್ಥಗಿತಗೊಳಿಸಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ಆಯಿಲ್ ಕಂಪನಿಗಳು ಹೇಳಿವೆ.
1.78 ಕೋಟಿ ಗ್ರಾಹಕರು:ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನ(ಐಒಸಿಎಲ್) 62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ(ಎಚ್‌ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್( ಬಿಪಿಸಿಎಲ್) 35.59 ಲಕ್ಷ ಸೇರಿ ಒಟ್ಟಾರೆ 1.46,07900 ಗ್ರಾಹಕರು ಎಲ್​​ಪಿಜಿ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748, ಬಿಪಿಸಿಎಲ್‌ನ 7,40,897, ಹಾಗೂ ಎಚ್‌ಪಿಸಿಎಲ್‌ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ.
ಇದನ್ನೂ ಓದಿ:ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!
ಸೆಕ್ಸ್​, ಬೆತ್ತಲೆ ಫೋಟೋ ಕದ್ದುಮುಚ್ಚಿ ನೋಡ್ತೀರಿ, ನನ್ನ ದೇಹಕ್ಕೆ ವಿವಾದ ಯಾಕೆ ಎಂದ ಮಿಲಿಂದ್​
ಏಳು ಮಕ್ಕಳಿಗೆ ಜೀವ ಕೊಟ್ಟು ಪ್ರಾಣ ಬಿಟ್ಟ ಮಗು! ಉಕ್ರೇನ್​, ರಷ್ಯಾದ ಮಕ್ಕಳಿಗೂ ಉಸಿರು ನೀಡಿದ ಬಾಲಕ
ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ…
ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದರೂ, ಗಂಡನ ಕೊಲೆ ಮಾಡಿರುವ ಶಂಕೆಯಿದ್ದರೂ ಈ ಕೇಸ್​ನಲ್ಲಿ ಆಸ್ತಿ ಸಿಗುತ್ತೆ…



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 15 =
Remember me
