ಬೆಂಗಳೂರು:ಶಾಲೆ ಆರಂಭ ಇನ್ನೂ ಅನಿಶ್ಚಿತತೆಯಿಂದ ಕೂಡಿರುವುದರಿಂದ ಶೇ.30 ಪಠ್ಯ ಕಡಿತ ಮಾಡಲು ಮುಂದಾಗಿದ್ದ ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ ಶೇ.15 ಸೇರಿಸಿ ಒಟ್ಟಾರೆ ಶೇ.45 ಪ್ರಮಾಣದ ಪಠ್ಯ ಕಡಿತ ಮಾಡಲು ನಿರ್ಧರಿಸಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ಮತ್ತು ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘ (ಕೆಟಿಬಿಎಸ್) ಜಂಟಿಯಾಗಿ ಈ ಮೊದಲು ಆರು ತಿಂಗಳಿಗೆ ಲೆಕ್ಕ ಹಾಕಿ ಶೇ.30 ಪಠ್ಯ ಕಡಿತ ಮಾಡಿ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು.
ಆದರೆ, 2020-21ನೇ ಸಾಲಿನಲ್ಲಿ ಶೈಕ್ಷಣಿಕ ಅವಧಿಗಳು ಎಷ್ಟು ದೊರೆಯುತ್ತವೆ ಎಂಬುದು ಇನ್ನೂ ಖಚಿತವಾಗಿಲ್ಲದೇ ಇರುವುದರಿಂದ ಒಂದು ವೇಳೆ ಜನವರಿಯಲ್ಲಿ ಆರಂಭವಾದರೂ ದೊರೆಯಬಹುದಾದ ಶೈಕ್ಷಣಿಕ ಅವಧಿಗೆ ಲೆಕ್ಕಚಾರ ಮಾಡಿ ಶೇ.45 ಪಠ್ಯಕ್ರಮ ಕಡಿತ ಮಾಡುವುದು ಸೂಕ್ತ ಎಂದು ಡಿಎಸ್​ಇಆರ್​ಟಿ ಮತ್ತು ಕೆಟಿಬಿಎಸ್ ಆಲೋಚಿಸಿವೆ.
ಸದ್ಯಕ್ಕೆ ರಾಜ್ಯ ಸರ್ಕಾರ ಪ್ರೌಢ ಶಾಲೆ ಮತ್ತು ಪಿಯು ತರಗತಿಗಳನ್ನು ಆರಂಭಿಸುವ ಕಡೆ ಆಲೋಚನೆ ನಡೆಸುತ್ತಿದೆ. ಸಾಧ್ಯವಾದಷ್ಟು ಬೇಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮುಖ್ಯಮಂತ್ರಿ ಬಳಿ ರ್ಚಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಈಗಾಗಲೆ ತಿಳಿಸಿದ್ದಾರೆ. ಡಿಎಸ್​ಇಆರ್​ಟಿ ಮತ್ತು ಕೆಟಿಬಿಎಸ್ ಪಠ್ಯ ಕಡಿತ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಅನುಮೋದನೆ ಸಿಕ್ಕಿಲ್ಲ. ಅನುಮೋದನೆ ಸಿಕ್ಕ ಬಳಿಕ ಶಿಕ್ಷಕರು ಬೋಧಿಸಬೇಕಾದ ಪಠ್ಯವನ್ನು ತಿಳಿಸಲಾಗುವುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಖಾಸಗಿ ಶಾಲೆಗಳು ಈಗಾಗಲೆ ಆನ್​ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಮಧ್ಯವಾರ್ಷಿಕ ಪರೀಕ್ಷೆಯನ್ನು ಸಹ ಮಾಡಿ ಮುಗಿಸಿದ್ದಾರೆ. ಸರ್ಕಾರಿ ಮಕ್ಕಳಿಗೆ ಯಾವುದೇ ಪರೀಕ್ಷೆ ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಬೇಗ ಪಠ್ಯಕಡಿತ ಮಾಡಿ ಬೋಧನೆ ಮಾಡಬೇಕಾದ ಪಠ್ಯಕ್ರಮವನ್ನು ತಿಳಿಸಿದರೆ ಮಕ್ಕಳು ಅಭ್ಯಾಸ ನಡೆಸಲು ಅನುಕೂಲವಾಗುತ್ತದೆ. ಸರ್ಕಾರ ಈ ವಿಚಾರದ ಬಗ್ಗೆ ರ್ಚಚಿಸಿ ಬೇಗ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಖಾಸಗಿ ಶಾಲೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಪ್ರತಿವರ್ಷ ಜನರನ್ನು ಬಾಧಿಸುತ್ತಿದ್ದ ಡೆಂಘೆ ಹಾಗೂ ಚಿಕೂನ್​ಗುನ್ಯಾ ಜ್ವರಗಳು ಕೋವಿಡ್ ಅಲೆಯಿಂದ ನಿಯಂತ್ರಣಕ್ಕೆ ಬಂದಿದ್ದು, ಈ ಬಾರಿ 3,502 ಡೆಂಘ ಹಾಗೂ 1,181 ಚಿಕೂನ್​ಗುನ್ಯಾ ಪ್ರಕರಣಗಳು ವರದಿಯಾಗಿವೆ. ಯಾವುದೇ ಸಾವು ಸಂಭವಿಸಿಲ್ಲ. ಕರೊನಾ ಸೋಂಕು ನಿಯಂತ್ರಣಕ್ಕಾಗಿ ಇಲಾಖೆ ಕೈಗೊಂಡ ಎಚ್ಚರಿಕೆ ಕ್ರಮಗಳು ಹಾಗು ಜನರ ಸ್ವಯಂ ಜಾಗೃತಿಯಿಂದ ಡೆಂಘ ಹಾಗೂ ಚಿಕೂನ್​ಗುನ್ಯಾ ಪ್ರಕರಣ ಇಳಿಕೆಯಾಗಿವೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಕರೋನಾ ಹತೋಟಿ ಯಲ್ಲಿದ್ದು, ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ವರ್ಷದೊಳಗೆ ಸಂಪೂರ್ಣ ನಿಮೂಲನೆಯಾಗಲಿದೆ. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ.
|ಡಾ.ಸುಧಾಕರ್ಆರೋಗ್ಯ ಸಚಿವ
ರಾಜ್ಯದಲ್ಲಿ ಕರೊನಾ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 5,076 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಗುಣಮುಖರ ಸಂಖ್ಯೆ 8.66 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,206ಕ್ಕೆ ಇಳಿಕೆಯಾಗಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ 258ಕ್ಕೆ ಕುಸಿದಿದೆ. 12 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 11,912 ಆಗಿದೆ. 1,238 ಹೊಸ ಪ್ರಕರಣ ವರದಿಯಾಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
