ಬೆಂಗಳೂರು:ಯುವತಿಯ ಬಟ್ಟೆ ಹಾಗೂ ದೇಹದ ಆಕಾರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ, ಪ್ರಶ್ನೆ ಮಾಡಿದ್ದಕ್ಕೆ ಆಕೆಯ ಜತೆಗೆ ಬಂದಿದ್ದ ಯುವಕನ ಮೇಲೆ ಪುಂಡರ ಗ್ಯಾಂಗ್​ ಹಲ್ಲೆ ಮಾಡಿರುವ ಘಟನೆ ಕೊತ್ತನೂರು ಬಳಿಯಿರುವ ಒಯಾ ಪಬ್​​ನಲ್ಲಿ ನಡೆದಿದೆ.
ತಿಲಕ್ ಹಲ್ಲೆಗೊಳಗಾದ ಯುವಕ. ಸಂಬಂಧಿ ಯುವತಿ ಸಂಧ್ಯಾ ಕುಮಾರ್ ಜತೆ ತಿಲಕ್​ ಒಯಾ ಪಬ್​ಗೆ ಭೇಟಿ ನೀಡಿದ್ದ. ಈ ವೇಳೆ ಯುವತಿಯ ಬಾಡಿ ಶೇಪ್ ಬಗ್ಗೆ ಕೇರಳ ಮೂಲದ ಯುವಕರ ಗ್ಯಾಂಗ್​ ಅಶ್ಲೀಲವಾಗಿ ಮಾತನಾಡಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯ ಶಭ್ಧಗಳಿಂದ ನಿಂದಿಸಿ, ಬಿಯರ್ ಬಾಟಲ್​ನಿಂದ ಗ್ಯಾಂಗ್​ ಹಲ್ಲೆ ಮಾಡಿದೆ.
ಇದನ್ನೂ ಓದಿ:ಅನುಚಿತ ಸ್ಪರ್ಶ, ಲೈಂಗಿಕತೆಗೆ ಒತ್ತಾಯ: WFI ಅಧ್ಯಕ್ಷರ ವಿರುದ್ಧ ದಾಖಲಾಗಿರೋ 2 FIR​, 10 ದೂರುಗಳ ವಿವರ ಇಲ್ಲಿದೆ…
ರಾಜು, ಹರಿಕೃಷ್ಣ ಹಾಗೂ ಅಜಯ್ ಎಂಬುವರು ವಿರುದ್ಧ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ವಿನಾಕಾರಣ ಎಳೆದಾಡಿ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 323, 324, 354, 504, 506ರ ಅಡಿಯಲ್ಲಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.(ದಿಗ್ವಿಜಯ ನ್ಯೂಸ್​)
VIDEO | ಬಸ್ ಸ್ಟೇರಿಂಗ್, ಬ್ರೇಕ್​ಗೆ ಮುತ್ತಿಟ್ಟು ಕಣ್ಣೀರು ಹಾಕಿದ ಬಸ್​​ ಚಾಲಕ!

ಸೂರ್ಯನ ಕಿರಣದಿಂದಾಗಿ ಚರ್ಮ ಕಪ್ಪಾಗಿದ್ದರೆ ಈ ಮನೆ ಮದ್ದು ಬಳಸಿ ತ್ವಚೆಯನ್ನು ಕಾಪಾಡಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + six =
Remember me
