ಬೆಂಗಳೂರು:ಮಕ್ಕಳಲ್ಲಿನ ಸಣ್ಣ ಬದಲಾವಣೆಯನ್ನೂ ಅಮ್ಮ ಗುರುತು ಹಿಡಿಯುತ್ತಾಳೆ ಎಂಬ ಮಾತಿದೆ. ಅದಾಗ್ಯೂ ಇಲ್ಲೊಬ್ಬ ಮಗ ಅಮ್ಮನಿಗೆ ಗುರುತು ಸಿಗಬಾರದು ಎಂದು ವರ್ಷಗಳ ಬಳಿಕ ವಿದೇಶದಿಂದ ಬಂದು ನೇರ ಮೀನು ಮಾರ್ಕೆಟ್​ಗೆ ಹೋಗಿ ಮುಖಮುಚ್ಚಿಕೊಂಡು ತಾಯಿಯ ಬಳಿ ವ್ಯಾಪಾರಿಯ ರೀತಿ ನಡೆದುಕೊಂಡರೂ ಆಕೆ ಗುರುತು ಹಿಡಿದುಬಿಟ್ಟಿದ್ದಾಳೆ!
ಇಂಥದ್ದೊಂದು ಮಾತೃವಾತ್ಸಲ್ಯದ ಅನಾವರಣದಂಥ ಸನ್ನಿವೇಶ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಮೀನು ಮಾರ್ಕೆಟ್​ನಲ್ಲಿ ಕಂಡು ಬಂದಿದೆ. ಗಂಗೊಳ್ಳಿಯ ನಿವಾಸಿ ರೋಹಿತ್ ಎಂಬ ಯುವಕ ದುಬೈನಲ್ಲಿ ಉದ್ಯೋಗದಲ್ಲಿದ್ದು, ಮೂರು ವರ್ಷಗಳ ಬಳಿಕ ಹುಟ್ಟೂರಿಗೆ ಮರಳಿದ್ದಾನೆ. ಹೀಗೆ ಬಂದವ ತಾಯಿಗೊಂದು ಅಚ್ಚರಿ ಕೊಡಬೇಕು ಎಂದು ಯೋಜನೆಯೊಂದನ್ನು ಹಾಕಿಕೊಂಡಿದ್ದ.
ದುಬೈನಿಂದ ಮರಳಿದ ಈತ ನೇರವಾಗಿ ಮೀನು ಮಾರ್ಕೆಟ್​ಗೆ ಬಂದು, ಅಲ್ಲಿ ಮೀನು ಮಾರುತ್ತಿದ್ದ ತಾಯಿಯ ಬಳಿಗೆ ಮುಖ ಮುಚ್ಚಿಕೊಂಡು ಹೋಗಿ, ವ್ಯಾಪಾರಿಯ ರೀತಿಯಲ್ಲಿ ಮೀನು ಖರೀದಿಗೆ ಮುಂದಾಗಿದ್ದ. ತನ್ನ ತಾಯಿ ಗುರುತಿಸುತ್ತಾರೋ ಇಲ್ಲವೋ ಎಂದು ಈತ ಇವೆಲ್ಲವನ್ನೂ ವಿಡಿಯೋ ಮಾಡಿಸಿಕೊಂಡಿದ್ದ.
ಮಾಮೂಲಿಯಂತೆ ವ್ಯಾಪಾರದ ವೇಳೆ ಎಲ್ಲರಿಗೂ ಸ್ಪಂದಿಸುವಂತೆ ಈ ತಾಯಿ ಮೀನು ಆರಿಸಿಕೊಡಲು ಮುಂದಾಗಿದ್ದಾಳೆ. ಆದರೆ ಈ ಹೀಗೆ ಮಾಡುತ್ತಿದ್ದಾಗ ಈ ಹೆಂಗರುಳು ಎದುರಿಗಿರುವುದು ತನ್ನ ಮಗ ಎಂಬುದರ ಸುಳಿವು ಹಿಡಿದಿತ್ತು. ಅನುಮಾನ ಬಂದ ತಾಯಿ ಈತ ಮುಖಕ್ಕೆ ಮುಚ್ಚಿಕೊಂಡಿದ್ದ ಬಟ್ಟೆಯನ್ನು ಸರಿಸಿ ನೋಡಿದ್ದಳು. ಆಗ ಅದು ನಿಜವಾಗಿಯೂ ತನ್ನ ಮಗನೇ ಆಗಿದ್ದರಿಂದ ಈ ಅಮ್ಮ ಆತನನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದು, ಮೀನು ಮಾರ್ಕೆಟ್​​ನಲ್ಲಿ ಮಾತೃವಾತ್ಸಲ್ಯದ ಅನಾವರಣಗೊಂಡಿದೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡಲಾರಂಭಿಸಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಅರಣ್ಯದೊಳಗೆ ಟ್ರಾಲಿ ಬ್ಯಾಗ್​ನಲ್ಲಿ ಮಹಿಳೆಯ ಶವ!; 15 ದಿನಗಳ ಹಿಂದೆ ತಂದು ಹಾಕಿರುವ ಶಂಕೆ

ಒಳ ಉಡುಪಿನಲ್ಲಿತ್ತು 2 ಕೋಟಿ ರೂಪಾಯಿ ಮೌಲ್ಯದ 3.9 ಕೆ.ಜಿ. ಚಿನ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
