ಬೆಂಗಳೂರು:ಹೆಣ್ಣು ಕೊಟ್ಟ ಅತ್ತೆಗೆ ಅಳಿಯನೊಬ್ಬ ಚಾಕು ಇರಿದಿರುವ ಅಮಾನುಷ ಘಟನೆ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ.
ಗೀತಾ ಚಾಕು ಇರಿತಕ್ಕೊಳಾಗದ ಅತ್ತೆ. ಮನೋಜ್ ಚಾಕು ಇರಿದ ಅಳಿಯ. ಆರೋಪಿ ಮನೋಜ್ ತನ್ನ ಪತ್ನಿ ವರ್ಷಿತಾಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಗಂಡನ ದೌರ್ಜನ್ಯ ಸಹಿಸದೇ ಮನನೊಂದು ವರ್ಷಿತಾ ತವರು ಮನೆ ಸೇರಿದ್ದಳು.
ಇದನ್ನೂ ಓದಿ:ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕೊಲೆ-ಪತ್ನಿ, ಪ್ರಿಯಕರನ ಬಂಧನ
ತವರಿನಲ್ಲಿದ್ದ ಪತ್ನಿಯನ್ನು ಕರೆತರಲು ಹೋಗಿದ್ದ ಮನೋಜ್, ಅತ್ತೆ ಮನೆಗೆ ಹೋಗಿದ್ದ. ಈ ವೇಳೆ ಅತ್ತೆ ಮತ್ತು ಅಳಿಯ ನಡುವೆ ಗಲಾಟೆ ನಡೆದಿತ್ತು. ಜಗಳ ತಾರಕ್ಕೇರಿದಾಗ ತಾಳ್ಮೆ ಕಳೆದುಕೊಂಡ ಮನೋಜ್​, ಅತ್ತೆ ಗೀತಾ ಹೊಟ್ಟೆಗೆ ಚಾಕು ಇರಿದು ಪರಿಯಾಗಿದ್ದ.
ಘಟನೆ ಬಳಿಕ ಅತ್ತೆ ಗೀತಾ ಅಳಿಯನ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಆರೋಪಿ ಅಳಿಯ ಮನೋಜ್​ನನ್ನು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಪಾಕಿಸ್ತಾನಿ ಯೂಟ್ಯೂಬರ್​ನಿಂದ ಭಾರತ ಪ್ರವಾಸ: ಭಾರತೀಯರ ಆತಿಥ್ಯಕ್ಕೆ ಪಾಕ್​ ವ್ಲಾಗರ್​ ಫಿದಾ!

ಅಂಗನವಾಡಿಗಳಿನ್ನು ಸ್ಮಾರ್ಟ್: ಮಕ್ಕಳು, ವೃದ್ಧರಿಗಾಗಿ ವಿಶಿಷ್ಟ ಯೋಜನೆ; ಲಕ್ಷ್ಮೀ ಹೆಬ್ಬಾಳ್ಕರ್ ಕನಸು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:three × 2 =
Remember me
