ಬೆಂಗಳೂರು:100 ಕೋಟಿ ರೂ. ಆಸ್ತಿ ಒಡೆಯನ ಕೊಲೆಗೆ ಇವರ ಮಗನೇ ಸುಪಾರಿ ಕೊಟ್ಟಿದ್ದು, ಈ ಕೃತ್ಯಕ್ಕೆ ಚಿಕ್ಕಪ್ಪನೇ ಸಾಥ್​ ನೀಡಿದ್ದಾನೆ. ತಂದೆಯನ್ನು ಮುಗಿಸಲು 3 ಬಾರಿ ಹಾಕಿದ್ದ ಸ್ಕೆಚ್ ಮಿಸ್ ಆಗಿ, ನಾಲ್ಕನೇ ಬಾರಿ ಕತ್ತುಸೀಳಿ ಕೊಂದಿದ್ದಾರೆ.
ಫೆಬ್ರವರಿ 14ರಂದು ತಲಘಟ್ಟಪುರ ಠಾಣಾ ವ್ಯಾಪ್ತಿಯ ಗುಬ್ಬಲಾಳ ಬಳಿ ಗಣಿ ಉದ್ಯಮಿ ಮಾಧವ ಬರ್ಬರವಾಗಿ ಹತ್ಯೆಯಾಗಿದ್ದರು. ಮೃತ ಮಾಧವನಿಗೆ ಬಂದಿದ್ದ ಅನಾಮಧೇಯ ಫೋನ್​ ಕಾಲ್​ನ ಜಾಡು ಹಿಡಿದು ಹೊರಟ ಪೊಲೀಸರಿಗೆ ಅಚ್ಚರಿ ಕಾದಿತ್ತು.ಇದನ್ನೂ ಓದಿರಿಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!
ಬಳ್ಳಾರಿಯ ಸ್ಟೀಲ್ ಆ್ಯಂಡ್​ ಅಲೈ ಕಂಪನಿಯ ಉದ್ಯಮಿ ಮಾಧವನನ್ನು ಸುಪಾರಿ ಕೊಟ್ಟು ಕೊಲ್ಲಿಸಿದ್ದು ಅವರ ಕಿರಿಮಗ ಹರಿಕೃಷ್ಣ. ತಂದೆಗೆ ಮುಹೂರ್ತ ಇಟ್ಟ ಹರಿಕೃಷ್ಣ ಜತೆ ಚಿಕ್ಕಪ್ಪ ಶಿವರಾಂ ಪ್ರಸಾದ್(ಮಾಧವನ ತಮ್ಮ) ಕೈಜೋಡಿಸಿದ್ದ. ತಂದೆಯನ್ನು ಕೊಲ್ಲಲು ಐವರು ನಟೋರಿಯಸ್​ಗಳ ಜತೆಗೆ 25 ಲಕ್ಷ ರೂ.ಗೆ ಡೀಲ್​ ಮಾಡಿಕೊಂಡಿದ್ದ ಹರಿಕೃಷ್ಣ ಅಡ್ವಾನ್ಸ್ ಆಗಿ 7.5 ಲಕ್ಷ ರೂ. ಸುಪಾರಿ ನೀಡಿದ್ದ.
ಹರಿಕೃಷ್ಣ ತನ್ನ ಅಪ್ಪನನ್ನೇ ಕೊಲ್ಲಲು ನಿರ್ಧಾರ ಮಾಡಿದ್ದು ಆಸ್ತಿಗಾಗಿ. ಜಮೀನು‌ ಮಾರಾಟ ಮಾಡುವಂತೆ ತಂದೆಗೆ ಬೆದರಿಕೆಯನ್ನೂ ಹಾಕಿಸಿದ್ದ. ಇದ್ಯಾವುದೂ ಕೈಗೂಡದಿದ್ದಾಗ ಮಾಧವನ ಮುಗಿಸಲು ಮಗ ಮತ್ತು ಸಹೋದರನೇ ಮುಹೂರ್ತ ಫಿಕ್ಸ್​ ಮಾಡಿದ್ದರು. 3 ಬಾರಿ ಸುಪಾರಿ ಮೂಲಕ ಕೊಲೆಯತ್ನ ನಡೆಸಿದ್ರು. ನಾಲ್ಕನೇ ಬಾರಿ ಕೊಂದೇ ಬಿಟ್ಟಿರು. ಅದೂ ಕತ್ತುಸೀಳಿ..!
ಇದನ್ನೂ ಓದಿರಿಸಿಎಂ ಗೃಹ ಕಚೇರಿ ಕೃಷ್ಣಾದಲ್ಲೂ ಕರೊನಾ ಭೀತಿ!
ಕೊಲೆ ಪ್ರಕರಣ ಭೇದಿಸಿದ ತಲಘಟ್ಟಪುರ ಪೊಲೀಸರು ಸುಪಾರಿ ಪಡೆದು ಹತ್ಯೆ ಮಾಡಿದ್ದ 5 ಆರೋಪಿಗಳನ್ನು ಬಂಧಿಸಿದ್ದಾರೆ. ರಿಯಾಜ್ ಅಹಮದ್, ಶಾರುಕ್ ಖಾನ್, ಸೈಯದ್ ಸಲ್ಮಾನ್, ಆದಿಲ್ ಖಾನ್, ಶಾಬಾಜ್ ನಜೀರ್ ಬಂಧಿತರು. ಇವರು ಗೋವಾ ಮತ್ತು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು. ಪ್ರಮುಖ ಆರೋಪಿಗಳಾದ ಮಗ ಹರಿಕೃಷ್ಣ ಮತ್ತು ಒಡಹುಟ್ಟಿದ ಅಣ್ಣನ ಕೊಲೆಗೆ ಸಾಥ್ ನೀಡಿದ್ದ ಶಿವರಾಂ ಪ್ರಸಾದ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಿಸಿನೆಸ್ ಲಾಸ್ ಆಗಿ ಮಾಧವನ ಕಂಪನಿ ಮುಟ್ಟುಗೋಲು ಹಾಕಲಾಗಿತ್ತು. ಇದಕ್ಕೂ ಮುನ್ನ ಕಂಪನಿಯಿಂದ ಕೋಟಿ-ಕೋಟಿ ಲಾಭ ಪಡೆದಿದ್ದರು. ಇನ್ನೂ 2೦೦೦ ಎಕರೆ ಭೂಮಿ ಕೂಡ ಮಾಧವ್ ಹೆಸರಲ್ಲಿತ್ತು. ಮಾಧವ ಬಳ್ಳಾರಿಯಲ್ಲಿ 100 ಕೋಟಿ ರೂ. ಮೌಲ್ಯದ ಗಣಿ ಭೂಮಿ ಹೊಂದಿದ್ದರು.
ಕಂಡವರ ಹೆಂಡ್ತಿ ಜತೆ ಅವಿವಾಹಿತನ ಲವ್ವಿ ಡವ್ವಿ… ಆಕೆಯ ಮನೆಯವರಿಗೆ ತಾನೇ ಫೋಟೋ ಕಳಿಸಿ ಗುಟ್ಟನ್ನು ರಟ್ಟು ಮಾಡಿದ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:17 + 14 =
Remember me
