ಹುಬ್ಬಳ್ಳಿ:ತಾಯಿ ಮೃತಪಟ್ಟ ವಿಷಯ ತಿಳಿದರೂ ಚೆನ್ನೈದಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರು ಲಾಕ್​ಡೌನ್ ಕಾರಣಕ್ಕೆ ಸಕಾಲದಲ್ಲಿ ಹುಬ್ಬಳ್ಳಿಗೆ ಬರಲಾಗದೆ ಅಮ್ಮನ ಅಂತಿಮ ದರ್ಶನದಿಂದ ವಂಚಿತರಾದರು.
ಇಲ್ಲಿನ ಮಂಜುನಾಥ ನಗರದ ಸಮೀರ್ ಪುರೋಹಿತ ಚೆನ್ನೈನ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾರೆ. ತನ್ನ ತಾಯಿ ಕಿಮ್್ಸ ನಲ್ಲಿ ಉಪಚಾರ ಪಡೆಯುತ್ತಿರುವ ದಾಖಲೆ ತರಿಸಿಕೊಂಡ ಸಮೀರ್, ತಾನಿರುವ ಸ್ಥಳದ ಪೊಲೀಸ್ ಅಧಿಕಾರಿಗಳನ್ನು ಸಂರ್ಪಸಿ ಪ್ರಯಾಣಕ್ಕೆ ಅನುಮತಿ ಕೇಳಿದ್ದರು. ಅವರು ಮೇಲಧಿಕಾರಿಗಳತ್ತ ಬೆರಳು ತೋರಿದರು. ಬೇಗ ಪರವಾನಗಿ ಸಿಗದಿದ್ದಾಗ ಟ್ವಿಟರ್​ನಲ್ಲಿ ಪ್ರಧಾನಿ ಮೋದಿ, ಹು-ಧಾ ಮತ್ತು ಚೆನ್ನೈ ಪೊಲೀಸ್ ಆಯುಕ್ತರ ಗಮನಕ್ಕೆ ತಂದರು.
ಅದಾಗಿ ಒಂದು ಗಂಟೆಯಲ್ಲಿ ಸಮೀರ್​ಗೆ ಪ್ರಯಾಣದ ಅನುಮತಿ ಪತ್ರ ಸಿಕ್ಕಿತು. ಅಷ್ಟರಲ್ಲಿ ತಾಯಿ ತೀರಿಕೊಂಡಿದ್ದರು. ಕೂಡಲೆ ಮಡದಿ, ಮಕ್ಕಳೊಂದಿಗೆ ಹುಬ್ಬಳ್ಳಿಗೆ ಹೊರಟರು. ಆದರೆ, ಅವರು ತಲುಪುವುದು ತಡವಾಗುತ್ತದೆ ಎನ್ನುವ ಕಾರಣಕ್ಕೆ ಸಂಬಂಧಿಗಳು ಅಂತ್ಯಸಂಸ್ಕಾರ ನೆರವೇರಿಸಿದ್ದರು. ತಾಯಿಯ ಅಂತಿಮ ದರ್ಶನ ಸಿಗದಿದ್ದಕ್ಕೆ ಸಮೀರ್ ಕಣ್ಣೀರಿಟ್ಟರು.
VIDEO: ‘ನೀವು ಮನೇಲೇ ಇರಿ..ಸುರಕ್ಷಿತವಾಗಿರಿ.. ಸುದ್ದಿಯನ್ನು ನಾವು ತಲುಪಿಸ್ತೀವಿ’; ವೈದ್ಯರು, ಪೊಲೀಸರ ಶ್ರಮದ ಬಗ್ಗೆ ಕಾಳಜಿ ಇರಲಿ..ಇದು ವಿಜಯವಾಣಿ-ದಿಗ್ವಿಜಯ ನ್ಯೂಸ್​ ಕಳಕಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 6 =
Remember me
