ನವದೆಹಲಿ: ಏಕಕಾಲದಲ್ಲಿ ಎರಡು ಪದವಿ ಕೋರ್ಸ್​ಗಳ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಶುಭ ಸುದ್ದಿ. ಅಂಥದ್ದೊಂದು ಪ್ರಸ್ತಾವನೆಗೆ ಯೂನಿವರ್ಸಿಟಿ ಗ್ರಾಂಟ್ಸ್​ ಕಮಿಷನ್​ (ಯುಜಿಸಿ) ಒಪ್ಪಿಗೆಯನ್ನು ಸೂಚಿಸಿದೆ. ಒಂದರಲ್ಲೇ ಎರಡು ಪದವಿ ಅಥವಾ ವಿಭಿನ್ನ ಮಾದರಿಯಲ್ಲಿ ಎರಡು ಪದವಿ ಪಡೆಯುವ ವಿದ್ಯಾರ್ಥಿಗಳ ಕನಸು ಶೀಘ್ರವೇ ನನಸಾಗಲಿದೆ.
ಇದನ್ನೂ ಓದಿ:ಸೆಪ್ಟೆಂಬರ್​ವರೆಗೂ ಶಾಲೆ, ಕಾಲೇಜು ಬೇಡ: ವಿವಿಗಳಿಗೆ ಯುಜಿಸಿ ಶಿಫಾರಸು, ಜುಲೈ-ಆಗಸ್ಟ್​ನಲ್ಲಿ ಎಸ್ಸೆಸ್ಸೆಲ್ಸಿ, ವೃತ್ತಿಪರ ಕೋರ್ಸ್ ಪರೀಕ್ಷೆ
ಭಾರತದಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿ ವ್ಯಾಸಂಗ ಮಾಡುವುದಕ್ಕೆ ಅನುಕೂಲವಾಗುವ ಪ್ರಸ್ತಾವನೆಯನ್ನು ಇತ್ತೀಚಿನ ಸಭೆಯಲ್ಲಿ ಯುಜಿಸಿ ಅಂಗೀಕರಿಸಿದೆ. ಒಂದೇ ಸ್ಟ್ರೀಮ್​ಗೆ ಸಂಬಂಧಿಸಿದ ಎರಡು ವಿಷಯಗಳು ಅಥವಾ ವಿಭಿನ್ನ ವಿಷಯಗಳ ಪದವಿಯನ್ನು ವ್ಯಾಸಂಗ ಮಾಡಬಹುದು. ಆದಾಗ್ಯೂ, ಒಂದು ಕೋರ್ಸನ್ನು ವಿದ್ಯಾರ್ಥಿಗಳು ರೆಗ್ಯುಲರ್ ಕಾಲೇಜು ಮೂಲಕ ವ್ಯಾಸಂಗ ಮಾಡಿದರೆ, ಇನ್ನೊಂದನ್ನು ಆನ್​ಲೈನ್ ಡಿಸ್ಟೆನ್ಸ್ ಲರ್ನಿಂಗ್ ಮಾಡ್ ಮೂಲಕ ಮಾಡಬೇಕಾಗುತ್ತದೆ. ಈ ಸಂಬಂಧ ಅಧಿಸೂಚನೆಯೂ ಶೀಘ್ರವೇ ಪ್ರಕಟವಾಗಲಿದೆ ಎಂದು ಯುಜಿಸಿ ಸೆಕ್ರಟರಿ ರಜನೀಶ್ ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ:ಕಾಲೇಜುಗಳನ್ನು ಸೆಪ್ಟಂಬರ್​ನಿಂದ ಆರಂಭಿಸಿ, ಸರ್ಕಾರ ನೇಮಿಸಿದ ಸಮಿತಿಯಿಂದಲೇ ಯುಜಿಸಿಗೆ ಶಿಫಾರಸು
ಕಳೆದ ವರ್ಷ ಉಪಾಧ್ಯಕ್ಷ ಭೂಷಣ್ ಪಟವರ್ಧನ್​ ಅಧ್ಯಕ್ಷತೆಯ ಸಮಿತಿಯೊಂದನ್ನು ಯುಜಿಸಿ ರಚಿಸಿದ್ದಲ್ಲದೆ, ಎರಡು ಪದವಿಗಳನ್ನು ಏಕಕಾಲಕ್ಕೆ ಮಾಡುವ ವಿಚಾರ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿತ್ತು. ಆದಾಗ್ಯೂ, ಇದೇ ಮೊದಲ ಸಲ ಆಯೋಗ ಈ ವಿಷಯವನ್ನು ಪರಿಶೀಲಿಸುತ್ತಿರುವುದಲ್ಲ. 2012ರಲ್ಲೂ ಇಂಥದ್ದೇ ಒಂದು ಸಮಿತಿಯನ್ನು ರಚಿಸಿತ್ತು. ಶಿಫಾರಸನ್ನೂ ಪಡೆದಿತ್ತಾದರೂ ನಂತರ ಅದು ಮೂಲೆಗುಂಪಾಯಿತು. ಅಂದು ಹೈದರಾಬಾದ್ ಯೂನಿವರ್ಸಿಟಿಯ ಉಪಕುಲಪತಿ ಫುರ್ಕಾನ್ ಕ್ವಾಮರ್​ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು.
ಇದನ್ನೂ ಓದಿ:ಯುಜಿಸಿ ನೆಟ್ ಎಕ್ಸಾಂ ಜೂನ್​ 15-20ರ ತನಕ: ಬುಲೆಟಿನ್​ ಪ್ರಕಟಿಸಿದ ಎನ್​ಟಿಎ
ರೆಗ್ಯುಲರ್ ಮಾಡ್​ನಲ್ಲಿ ಎರಡು ಪದವಿ ವ್ಯಾಸಂಗ ಮಾಡುವುದು ಸಾಧ್ಯವಾಗದೇ ಹೋಗಬಹುದು. ಅದರಿಂದ ಆಡಳಿತಾತ್ಮಕ ಮತ್ತು ಇತರೆ ಸಮಸ್ಯೆಗಳು ಉದ್ಭವಿಸಬಹುದು. ರೆಗ್ಯುಲರ್ ಮಾಡ್​ನಲ್ಲಿ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ, ಅಡ್ವಾನ್ಸ್ಡ್​ ಡಿಪ್ಲೊಮಾ, ಪಿಜಿ ಡಿಪ್ಲೊಮಾ ಕೋರ್ಸ್​ಗಳನ್ನು ಏಕಕಾಲದಲ್ಲಿ ಮಾಡುವುದಕ್ಕೆ ಅವಕಾಶ ನೀಡಬಹುದು ಎಂದು ಅಂದಿನ ಸಮಿತಿ ತಿಳಿಸಿತ್ತು. (ಏಜೆನ್ಸೀಸ್)
ಸಂಶೋಧನಾರ್ಥಿಗಳಿಗೆ ಯುಜಿಸಿ ಸಹಾಯ ಹಸ್ತ: ಪ್ರಬಂಧ ಮಂಡನೆಗೆ 6 ತಿಂಗಳ ಕಾಲಾವಧಿ ವಿಸ್ತರಣೆಗೆ ಚಿಂತನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fifteen =
Remember me
