ಬೆಂಗಳೂರು:ಆಗಸ್ಟ್​ 23ರಿಂದ 9 ಮತ್ತು 10ನೇ ತರಗತಿ ವರೆಗೆ ಶಾಲೆಗಳನ್ನು ಭೌತಿಕವಾಗಿ ತೆರೆಯಲು ಆದೇಶ ಹೊರಡಿಸಿರುವ ಸರ್ಕಾರ, ವಿದ್ಯಾರ್ಥಿಗಳು-ಶಿಕ್ಷಕರು ಮತ್ತು ಪೋಷಕರು ಏನೇನು ಕ್ರಮಗಳನ್ನು ಪಾಲಿಸಬೇಕು ಎಂಬ ಕುರಿತು ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್​ಒಪಿ) ಬಿಡುಗಡೆ ಮಾಡಿದೆ.
ಸುದೀರ್ಘ ಅವಧಿಗೆ ಶಾಲೆಗಳು ಮುಚ್ಚಿಯೇ ಇದ್ದಿದ್ದರಿಂದ ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸ್ಯಾನಿಟೈಸ್​ ಮಾಡಿಯೇ ತರಗತಿಗಳನ್ನು ಆರಂಭಿಸಬೇಕು ಎಂದಿರುವ ಸರ್ಕಾರ, ಮಾಸ್ಕ್​ ಧರಿಸುವುದು, ವೈಯಕ್ತಿಕ ಅಂತರ ಮುಂತಾದ ಹಲವಾರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ಮಕ್ಕಳು ಶಾಲೆಗೆ ಬರಲು ಹಾಗೂ ಹೋಗಲು ಪ್ರತ್ಯೇಕ ಆಗಮನ-ನಿರ್ಗಮನ ವ್ಯವಸ್ಥೆ ಮಾಡಬೇಕು. ಬೆಂಚಿನ ಉದ್ದಕ್ಕೆ ಅನುಗುಣವಾಗಿ ಬೆಂಚಿಗೆ ಒಬ್ಬರು ಅಥವಾ ಇಬ್ಬರನ್ನು ಮಾತ್ರ ಕೂರಿಸಬೇಕು. ಬೆಂಚ್​ಗಳ ನಡುವೆಯೂ ಅಂತರ ಇರಬೇಕು. ಹಾಗೆಯೇ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಲ್ಲಿ ಕೆಮ್ಮು, ಜ್ವರ, ನೆಗಡಿ, ಮೂಗು ಸೋರುವುದು ಇತ್ಯಾದಿ ಲಕ್ಷಣಗಳು ಕಂಡುಬಂದರೆ ಅವರನ್ನು ತಾತ್ಕಾಲಿಕವಾಗಿ ಐಸೋಲೇಷನ್​ನಲ್ಲಿ ಇರಿಸಿ, ಪೋಷಕರನ್ನು ಕರೆಸಿ, ಮನೆಗೆ ಕಳುಹಿಸಿಕೊಡಬೇಕು ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
