ಮಂಗಳೂರು:ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್​​ಗೆ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್​ಚಿಟ್ ನೀಡಿರುವ ವಿಚಾರವಾಗಿ ಸೌಜನ್ಯಳ ತಾಯಿ ಪ್ರತಿಕ್ರಿಯೆ ನೀಡಿದ್ದು, ನಮಗೂ ಒಂದು ಜಯ ಸಿಕ್ಕಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೌಜನ್ಯಳ ತಾಯಿ ಕುಸುಮಾವತಿ, ಸಂತೋಷ್ ರಾವ್ ದೋಷಮುಕ್ತ ಎಂದು ಇವತ್ತು ತೀರ್ಪು ಬಂದಿದೆ. ಈ ಮೂಲಕ ಇದರಲ್ಲಿ ನಮಗೂ ಒಂದು ಜಯ ಸಿಕ್ಕಿದೆ. ಆದರೆ, ಸಿಬಿಐ ಮತ್ತೆ ಆರೋಪಿಗಳು ಯಾರು ಅಂತ ತನಿಖೆ ಮಾಡಿ ನ್ಯಾಯ ಕೊಡಲಿ. ಸಿಬಿಐ ತನಿಖೆಯಿಂದ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.
ಇದನ್ನೂ ಓದಿ:ಮಿತಿಮೀರಿದ ಟೋಲ್​ ಪ್ಲಾಜಾ ಸಿಬ್ಬಂದಿ ದುರ್ವರ್ತನೆ ಪ್ರತಿನಿತ್ಯ ವಾಹನ ಸವಾರರು, ಮಾಲೀಕರಿರೊಂದಿಗೆ ಕಿರಿಕಿರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೌನ
ಮುಂದೆಯೂ‌ ನಾವು ಈ ನಿಟ್ಟಿನಲ್ಲಿ ಹೋರಾಟ ಮಾಡ್ತೇವೆ. ಸಂತೋಷ್ ರಾವ್ ಆರೋಪಿ ಅಲ್ಲ ಅಂತ ನಾವು ಹತ್ತು ವರ್ಷದಿಂದ ಹೇಳಿಕೊಂಡು ಬಂದಿದ್ದೇವೆ. ಅದರ ಜೊತೆಗೆ ಮೂರ್ನಾಲ್ಕು ಜನರ ಹೆಸರು ಕೊಟ್ಟಿದ್ದೆವು. ಅವರ ತನಿಖೆ ಆಗಬೇಕು. ಆದರೆ, ಅವರು ತನಿಖೆಗೆ ತಡೆ ತಂದಿದ್ದಾರೆ. ಪ್ರಕರಣದ ಹಿಂದೆ ಅವರು ಇಲ್ಲದಿದ್ದರೆ ತಡೆಯಾಜ್ಞೆ ಯಾಕೆ ತಂದಿದ್ದು? ಅವರ ತನಿಖೆ ಆಗಬೇಕು ಮತ್ತು ನಮಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ಪರೀಕ್ಷೆ ಅಂತ ಹೋದ ಮಗಳು ಅಂದು ಮನೆಗೆ ವಾಪಾಸ್ ಬರಲೇ‌ ಇಲ್ಲ. ಎಷ್ಟೇ ಹುಡುಕಾಡಿದರೂ ಮಗಳು ಮಾತ್ರ ಸಿಗಲೇ ಇಲ್ಲ. ಆದರೆ, ಮರುದಿನ ಅವಳ ‌ಮೃತದೇಹ ನಮಗೆ ಸಿಕ್ಕಿತು. ಒಳ ಉಡುಪನ್ನು ಮನೆಯಿಂದಲೇ ತೆಗೆದುಕೊಂಡು ಹೋಗಿ ಸ್ಥಳದಲ್ಲಿ ಪೊಲೀಸರೇ ಹಾಕಿದರು ಎಂದು ಕಹಿ ಕ್ಷಣಗಳನ್ನು ನೆನೆದು ಕುಸುಮಾವತಿ ಕಣ್ಣೀರಾಕಿದರು.
ಮಹೇಶ್ ಶೆಟ್ಟಿ ತಿಮರೋಡಿ ನಮಗೆ ನ್ಯಾಯ ಕೊಡಿಸಲು ಬೆನ್ನ ಹಿಂದೆ ನಿಂತಿದ್ದರು. ನಮಗೆ ಸಿಬಿಐ ನ್ಯಾಯ ಕೊಡಬೇಕು. ಈ ನಿಟ್ಟಿನಲ್ಲಿ ಮತ್ತೆ ಹೋರಾಟ ಮಾಡ್ತೇವೆ ಎಂದು ಸೌಜನ್ಯಳ ತಾಯಿ ತಿಳಿಸಿದರು.
ಘಟನೆ ನಡೆದ ಹನ್ನೊಂದು ವರ್ಷಗಳ ಬಳಿಕ ನಿನ್ನೆ (ಜೂ. 16)ತೀರ್ಪು ಹೊರಬಿದ್ದಿದೆ. ಪ್ರಕರಣ ಸಂಬಂಧ ಸಾಕ್ಷ್ಯಾಧಾರ ಕೊರತೆಯಿಂದಾಗಿ ಆರೋಪಿ ಸಂತೋಷ್​ ರಾವ್​ನನ್ನು ಬಿಡುಗಡೆ ಮಾಡಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಸಿ.ಬಿ. ಅವರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ನಾರಿಯರ ಬಲ ಹೆಚ್ಚಿಸಿದ “ಶಕ್ತಿ’ ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳ ರಾಮನಗರ ವಿಭಾಗದಲ್ಲಿ ಲಕ್ಷ ಮಂದಿಯಿಂದ ಉಚಿತ ಪ್ರಯಾಣ
ಮೃತ ಸೌಜನ್ಯ ಉಜಿರೆಯ ಎಸ್​ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಆಕೆಯನ್ನು 2012ರ ಅಕ್ಟೋಬರ್ 10 ರಂದು ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಕಾಡಿನಲ್ಲಿ ಈ ಕೃತ್ಯ ನಡೆದಿತ್ತು. ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಸುದ್ದಿಯಾಗಿ ಜನಾಕ್ರೋಶ ವ್ಯಕ್ತವಾಗಿತ್ತು.
ಘಟನೆ ಬಳಿಕ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ರಾವ್​ನನ್ನು ಬಂಧಿಸಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡು ಕೃತ್ಯ ನಡೆಸಿದ್ದ ಎನ್ನಲಾಗಿತ್ತು. ಆರೋಪಿಯು ಜಾಮೀನುನಲ್ಲಿ ಬಿಡುಗಡೆಗೊಂಡಿದ್ದ. ಹಲವು ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಹೇಳಿದೆ.(ದಿಗ್ವಿಜಯ ನ್ಯೂಸ್​)
ಕನ್ನಡ ಚಿತ್ರನಟಿಯ ಬಂಧನ: ವಾರಂಟ್ ಜಾರಿ ಹಿನ್ನೆಲೆಯಲ್ಲಿ ಕ್ರಮ ಜರುಗಿಸಿದ ಪೊಲೀಸರು..

ಸರ್ಕಾರಿ ಬ್ಯಾಂಕುಗಳು ಲಾಭದ ಹಳಿಗೆ ಬಂದಿದ್ದು ಹೇಗೆ?

ಅನ್ನಭಾಗ್ಯಕ್ಕೆ ತೆಲಂಗಾಣ ಅಕ್ಕಿ: 36 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯ; ಕೇಂದ್ರದ ದರದಲ್ಲಿಯೇ ಖರೀದಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − four =
Remember me
