ಬೆಂಗಳೂರು:ಪೊಲೀಸರು ಇನ್ಮುಂದೆ ಗಂಭೀರ ಸ್ವರೂಪದ ಖಾಯಿಲೆಗೆ ತುತ್ತಾದರೆ ಅಥವಾ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಮಾತ್ರ ರಜೆ ಸಿಗಲಿದೆ. ಸುಖಾಸುಮ್ಮನೆ ರಜೆ ಸಿಗುವುದಿಲ್ಲ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬಾ ಅವರು ಹೊರಡಿಸಿದ್ದ ಆದೇಶವನ್ನು ಇದೀಗ ಹಿಂಪಡೆದಿದ್ದಾರೆ. ಯಾರಾದ್ರು ಮೃತಪಟ್ಟರಷ್ಟೇ ರಜೆ ಸಿಗಲಿದೆ ಎಂದು ವಿವಾದಾತ್ಮಕ ಆದೇಶ ಹೊರಡಿಸಲಾಗಿತ್ತು. ಇದರ ವಿರುದ್ಧ ಪೊಲೀಸರು ಮತ್ತು ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಡಿಸಿಪಿ, ಬುಧವಾರ ಆದೇಶ ಹಿಂಪಡೆದಿದ್ದಾರೆ.
ಆದೇಶದಲ್ಲಿ ಏನಿತ್ತು?:‘ಕಾನ್​ಸ್ಟೇಬಲ್​ನಿಂದ ಇನ್​ಸ್ಪೆಕ್ಟರ್​ವರೆಗೂ ಅಧಿಕಾರಿ- ಸಿಬ್ಬಂದಿ ಬೇರೆ ಬೇರೆ ಕಾರಣಗಳಿಂದ ರಜೆ ಪಡೆಯುತ್ತಿದ್ದಾರೆ. ಪರಿಣಾಮ ಠಾಣಾ ಕರ್ತವ್ಯಕ್ಕೆ ಮತ್ತು ಕಚೇರಿ ಕರ್ತವ್ಯಕ್ಕೆ ತೊಂದರೆ ಆಗುತ್ತಿದೆ. ಇನ್ಮುಂದೆ ಯಾವುದೇ ಪೊಲೀಸ್​ ಅಧಿಕಾರಿ ಮತ್ತು ಸಿಬ್ಬಂದಿ ಗಂಭೀರ ಸ್ವರೂಪದ ಖಾಯಿಲೆಯಿಂದ ಬಳಲುತ್ತಿದ್ದರೇ ಹಾಗೂ ಮನೆಗಳಲ್ಲಿ ಯಾರಾದರೂ ಮೃತಪಟ್ಟರೆ ಮಾತ್ರ ರಜೆಯ ಮೇಲೆ ತೆರಳಬೇಕು. ಸಕಾರಣ ಇಲ್ಲದೆ ರಜೆ ಮೇಲೆ ಹೋದರೆ ಅಂತಹವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಇನ್​ಸ್ಪೆಕ್ಟರ್​ ಮತ್ತು ಎಸಿಪಿಗಳು ಮೇಲೆ ತಿಳಿಸಿರುವ ಕಾರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ನೆಪದಲ್ಲಿ ರಜೆಗೆ ಶಿಫಾರಸ್ಸು ಮಾಡಬಾರದು. ಪದೇಪದೆ ಕಚೇರಿಗೆ ಬಂದು ರಜೆ ಬಗ್ಗೆ ಪ್ರಸ್ತಾಪಿಸಿದಲ್ಲಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ರಜೆ ಹೋಗುವ ಎಲ್ಲ ಪೊಲೀಸ್​ ಅಧಿಕಾರಿ, ಸಿಬ್ಬಂದಿ, ಲಿಪಿಕ ಸಿಬ್ಬಂದಿ ಕಡ್ಡಾಯವಾಗಿ ಡಿಸಿಪಿ ಅನುಮತಿ ಪಡೆಯಬೇಕು’ ಎಂದು ಡಿಸಿಪಿ ಸಿ.ಕೆ. ಬಾಬಾ ಆದೇಶ ಹೊರಡಿಸಿದ್ದರು.
ಈ ಆದೇಶದ ವಿರುದ್ಧ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರಿಗೂ ತಂದೆ, ತಾಯಿ ಅಥವಾ ವಯಸ್ಸಾದವರು ಮತ್ತು ಹೆಂಡತಿ, ಮಕ್ಕಳು ಇರುತ್ತಾರೆ. ಅವರಿಗೂ ಸಮಯ ಕೊಡುವುದು ಪ್ರತಿಯೊಬ್ಬ ಮಕ್ಕಳ, ಗಂಡ, ತಂದೆಯ ಕರ್ತವ್ಯ. ಕೆಲಸದ ಒತ್ತಡದಲ್ಲಿರುವ ಪೊಲೀಸರು, ತಮ್ಮ ಕುಟುಂಬ ಸದಸ್ಯರೊಂದಿಗೆ ಕೆಲಕಾಲ ಸಮಯ ಕಳೆದರೆ ಮಾನಸಿಕ ಒತ್ತಡ ಕಡಿಮೆ ಆಗಲಿದೆ. ಸಂಸಾರದಲ್ಲಿ ಉತ್ತಮ ಬಾಂಧವ್ಯ ಬೆಳೆಯಲಿದೆ. ಇಲ್ಲವಾದರೆ, ಕುಟುಂಬದಲ್ಲಿ ಕಿರಿಕಿರಿ ಉಂಟಾಗಿ ಮನಸ್ಸಿಗೆ ನೆಮ್ಮದಿ ಇಲ್ಲದೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಪ್ರತಿ ಕುಟುಂಬಕ್ಕೂ ಒಂದೇ ರೀತಿಯ ಸಮಸ್ಯೆ ಇರುವುದಿಲ್ಲ. ಅವರದ್ದೇ ಆದ ಸಮಸ್ಯೆಗಳು ಇರುತ್ತವೆ. ಇಂತಹ ಸಂಕಷ್ಟದಲ್ಲಿ ಪೊಲೀಸರು, ಗಂಭೀರ ಖಾಯಿಲೆ ಇದ್ದರೇ ಅಥವಾ ಮನೆಯಲ್ಲಿ ಸತ್ತರೆ ಮಾತ್ರ ರಜೆ ಪಡೆಯಬೇಕು ಎಂದರೆ ಎಷ್ಟು ಸರಿ? ಪೊಲೀಸ್​ ಇಲಾಖೆಯಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲವೇ? ಎಂದು ಸಾರ್ವಜನಿಕ ವಲಯದಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಈ ಆದೇಶವನ್ನು ಡಿಸಿಪಿ ಹಿಂಪಡೆದಿದ್ದಾರೆ.
ವಾರದ ರಜೆ ಕಡ್ಡಾಯ ಕೊಡಿ:ಪೊಲೀಸರಿಗೆ ವರ್ಷದಲ್ಲಿ 52 ವಾರದ ರಜೆ ಸಿಗಲಿವೆ. ರಜೆ ಸಿಗದೆ ಇದ್ದರೇ ಬದಲಿಗೆ ಆ ದಿನದ ವೇತನ ನೀಡಬೇಕೆಂದು ಆದೇಶ ಹೊರಡಿಸಲಾಗಿದೆ. ಇಲ್ಲಿಯವರೆಗೂ ಕಡ್ಡಾಯವಾಗಿ ವಾರದ ರಜೆ ಸಿಗುತ್ತಿಲ್ಲ. 52 ರಜೆಯಲ್ಲಿ ಗರಿಷ್ಠ 40 ವಾರದ ರಜೆ ಸಿಗಲಿವೆ. ಉಳಿದ ದಿನ ಕರ್ತವ್ಯ ನಿರ್ವಹಿಸಿದರೆ ವೇತನ ಕೊಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುವುದಿಲ್ಲ. ಜತೆಗೆ ಸಿಎಲ್​ (ಸಾಮಾನ್ಯ ರಜೆ) ಮತ್ತು ಸಿಕ್​ ಲೀವ್​ (ಅನಾರೋಗ್ಯ ರಜೆ) ಸೌಲಭ್ಯ ಬಳಕೆ ಮಾಡುವುದು ಯಾವಾಗ? ಎಂದು ಪೊಲೀಸ್​ ಅಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಮುಗಿಸಲು ಮುಧೋಳ-ಬೆಂಗಳೂರಿಂದ ಗ್ಯಾಂಗ್​ ಬಂದಿತ್ತು: ಹೊಸ ಬಾಂಬ್​ ಸಿಡಿಸಿದ ಯತ್ನಾಳ್​

ಪ್ರವೀಣ್​ ನೆಟ್ಟಾರು ಹತ್ಯೆ: ತಲೆಮರೆಸಿಕೊಂಡಿರುವ PFI ಸದಸ್ಯರ ಸುಳಿವು ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ NIA

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:15 − twelve =
Remember me
