ವಿಜಯಪುರ:ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಗಾನ ಗಾರುಡಿಗ ದಿ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ವರ ವೈಭವ ಇನ್ನೂ ಪ್ರತಿಧ್ವನಿಸುತ್ತಿದೆ. 2017ರ ಫೆ.8ರಂದು ವಿದ್ಯಾಭಾರತಿ ಶಾಲೆ ಸಹಾಯಧನದ ಪ್ರಯುಕ್ತ ಆಯೋಜಿಸಿದ್ದ ಸ್ವರ ವೈಭವ ಕಾರ್ಯಕ್ರಮದಲ್ಲಿ‌ ಎಸ್​ಪಿಬಿ ಭಾಗವಹಿಸಿದ್ದೇ‌ ಜಿಲ್ಲೆಯ ಪಾಲಿಗೆ ಕೊನೆಯದ್ದು.
ಅಂದು‌ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎಸ್​ಪಿಬಿ ತಮ್ಮ ಗಾನಸುಧೆ ಹರಿಸಿದ್ದರು. ಸಾವಿರಾರು ಜನ ಎಸ್​ಪಿಬಿ ಧ್ವನಿ‌ಮಾಧುರ್ಯಕ್ಕೆ ಮಾರುಹೋಗಿದ್ದರು. ಕನ್ನಡ, ತೆಲಗು, ತಮಿಳು ಭಾಷೆಯಲ್ಲಿ ಎಸ್​ಪಿಬಿ ಗಾನ ಲಹರಿ ಮೊಳಗಿಸಿದ್ದರು. ಅಂಥ‌ ಶ್ರೇಷ್ಠ ಗಾಯಕ ಇನ್ನಿಲ್ಲ ಎಂಬ ಸುದ್ದಿ ಕೇಳಿ ಗುಮ್ಮಟ ನಗರಿ ಜನ ದುಃಖದಲ್ಲಿ ಮುಳುಗಿದ್ದು, ಗುಮ್ಮಟದ ಗ್ಯಾಲರಿಯಲ್ಲೂ ಶೋಕಗೀತೆ ಮೊಳಗುತ್ತಿದೆ.
ಅಂದಿನ ಸ್ವರ ವೈಭವ ಕಾರ್ಯಕ್ರಮ ಆಯೋಜಿಸಿದ್ದ ಚಂದ್ರಶೇಖರ್ ಕವಟಗಿ, ಶರಣು ಸಬರದ, ಶಿವಾನಂದ ಭುಯ್ಯಾರ ಮತ್ತಿತರರು ಕಾರ್ಯಕ್ರಮ ನೆನೆದು ಎಸ್​ಪಿಬಿ ಅವರ ಅಗಲಿಕೆ ಹಿನ್ನೆಲೆ ಕಂಬನಿ‌ ಮಿಡಿದಿದ್ದಾರೆ.
ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ವಿಧಿವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
