ಬೆಂಗಳೂರು:ಬೆಂಗಳೂರಿನ ಜೀವನಾಡಿ ಎಂದೇ ಖ್ಯಾತಿ ಪಡೆದಿರುವ ಬಿಎಂಟಿಸಿಯಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ನಾವು ಬಸ್ಸಿನಲ್ಲಿ ಟಿಕೆಟ್​ ತೆಗೆದುಕೊಳ್ಳುವಾಗ ನಿರ್ವಾಹಕರು ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸಿ ಎಂದು ಪ್ರತಿಬಾರಿಯೂ ಪ್ರಯಾಣಿಕರಿಗೆ ಹೇಳುತ್ತಿರುತ್ತಾರೆ. ಕೆಲವೊಮ್ಮೆ ಈ ವಿಚಾರಗಳಿಗೆ ಬಸ್ಸಿನಲ್ಲಿ ಜಗಳವಾಗಿವೆ. ಇದೀಗ ಇದೇ ರೀತಿಯ ಘಟನೆಯೊಂದು ಬೆಂಗಳೂರಿನ ಮಾರತ್​ಹಳ್ಳಿಯಲ್ಲಿ ನಡೆದಿದ್ದು, ನಿರ್ವಾಹಕರು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ವ್ಯಕ್ತಿ ಹೆಸರು ಅಭಿನವ್​ ರಾಜ್​ ಎಂದು ತಿಳಿದು ಬಂದಿದ್ದು, ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಮಾರತ್​ಹಳ್ಳಿಯಲ್ಲಿರುವ ರೈನ್​ಬೋ ಆಸ್ಪತ್ರೆ ಬಳಿ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆ ಮಂಗಳವಾರ (ಆಗಸ್ಟ್​ 06) ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
I was assaulted on a BMTC bus near Rainbow Hospital, Marathahalli, Bengaluru last night by the conductor.After refusing to give me change or taking payment by UPI, the BMTC conductor assaulted me and verbally abused me. Attaching the video here.@bmtc_bengaluru(1/5)pic.twitter.com/FAF1e5SdFn
ಇದನ್ನೂ ಓದಿ:ಬಾಂಗ್ಲಾ ನಂತರ ಭಾರತದಲ್ಲೂ ಜನರು ಪ್ರಧಾನಿ ವಿರುದ್ಧ ದಂಗೆ ಏಳುತ್ತಾರೆ: ಕಾಂಗ್ರೆಸ್​ ನಾಯಕ ಸಜ್ಜನ್​ ಸಿಂಗ್​
ನಾನು ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್​ ನನಗೆ 15 ರೂ. ಟಿಕೆಟ್​ ನೀಡಿದರು. ನಾನು ಕಂಡಕ್ಟರ್​ಗೆ 20 ರೂ. ಮುಖಬೆಲೆಯ ನೋಟನ್ನು ನೀಡಿದೆ. ಅವರು ಚೇಂಜ್​ ಇಲ್ಲ ಎಂದು ಹೇಳಿದರು. ನಾನು ಅವರ ಜೇಬಿನಲ್ಲಿ ಚಿಲ್ಲರೆ ಇರುವುದನ್ನು ಗಮನಿಸಿದೆ. ಈ ಬಗ್ಗೆ ಪ್ರಶ್ನಿಸಿದಾಗ ಅವರು ನನ್ನ ಮೇಲೆ ಹಲ್ಲೆ ಮಾಡಿದರು. ಈ ಬಗ್ಗೆ ನಾನು ಬಿಎಂಟಿಸಿಗೆ ದೂರು ನೀಡುತ್ತೇನೆ ಎಂದು ಹೇಳಿದರೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ.
ಮಾರತ್​ಹಳ್ಳಿಯಲ್ಲಿರುವ ರೈನ್​ಬೋ ಆಸ್ಪತ್ರೆ ಬಳಿ ನನ್ನ ಮೇಲೆ ಬಿಎಂಟಿಸಿ ಬಸ್​ನಲ್ಲಿ ಹಲ್ಲೆ ಮಾಡಲಾಗಿದೆ. ನನಗೆ ಚೇಂಜ್​ ನೀಡಲು ಮತ್ತು ಯುಪಿಐ ಮೂಲಕ ಪೇಮೆಂಟ್​ ಪಡೆಯಲು ನಿರಾಕರಿಸಿದ ನಂತರ ಬಸ್ಸಿನ ನಿರ್ವಾಹಕರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದರು. ಇದಲ್ಲದೆ ನನಗೆ ಕನ್ನಡದಲ್ಲಿ ಮಾತನಾಡುವಂತೆ ಆತ ಹೇಳಿದ ಎಂದು ವ್ಯಕ್ತಿ ವಿಡಿಯೋದಲ್ಲಿ ಪೋಸ್ಟ್​ ಮಾಡಿರುವುದನ್ನು ನೋಡಬಹುದಾಗಿದೆ. ಹಲ್ಲೆ ಸಂಬಂಧ ಧೂರು ದಾಖಲಾಗಿದ್ದು ಪೊಲೀಸರು ಹಾಗು ಬಿಎಂಟಿಸಿ ಯಾವ ರೀತಿಯ ಕ್ರಮ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − eleven =
Remember me
