|ಅವಿನಾಶ ಮೂಡಂಬಿಕಾನಬೆಂಗಳೂರು
ಕರೊನಾದಿಂದಾಗಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಮಿತಿಮೀರಿವೆ. ‘ಜನತಾ ಕರ್ಫ್ಯೂ’ ಸಂದರ್ಭದಲ್ಲಿ ಮಹಿಳೆಯರ ಮೇಲೆ ವರದಕ್ಷಿಣೆ ಕಿರುಕುಳ ಹೆಚ್ಚಾಗಿರುವ ಸಂಗತಿ ಬಯಲಾಗಿದೆ.
ಕಳೆದ 3 ತಿಂಗಳಿನಲ್ಲಿ ರಾಜ್ಯದ ವಿವಿಧೆಡೆ 458 ವರದಕ್ಷಿಣೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 52 ಮಹಿಳೆಯರು ವರದಕ್ಷಿಣೆ ಕಾಟ ಸಹಿಸಲಾಗದೆ ಸಾವನ್ನಪ್ಪಿದ್ದಾರೆ. ಪತಿ ಹಾಗೂ ಸಂಬಂಧಿಕರ ಕಿರುಕುಳಕ್ಕೆ 23 ಮಂದಿ ಮೃತಪಟ್ಟರೆ, 16 ಮಂದಿ ನೇಣಿಗೆ ಶರಣಾಗಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಒಟ್ಟು 574 ಕೇಸ್ ದಾಖಲಾಗಿದೆ. ಜನತಾ ಕರ್ಫ್ಯೂ ಜಾರಿಯಾದ ಬಳಿಕ 159ಕ್ಕೂ ಅಧಿಕ ವರದಕ್ಷಿಣೆ ಕಿರುಕುಳ ಪ್ರಕರಣ ಠಾಣೆಯ ಮೆಟ್ಟಿಲೇರಿವೆ. ಮೇನಲ್ಲಿ ಪ್ರಕರಣ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಚಿತ್ರವಿಚಿತ್ರ ಟಾರ್ಚರ್:ಬೆಂಗಳೂರಿನ ಜಯನಗರದ 28 ವರ್ಷದ ನಿವಾಸಿ 2017ರಲ್ಲಿ ಖಾಸಗಿ ಕಂಪನಿ ಉದ್ಯೋಗಿ ಶ್ರೀಕಾಂತ್ ಎಂಬುವವರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಪತಿ ಸರಿಯಾಗಿ ಊಟ, ತಿಂಡಿ ಕೊಡದೆ ಹಲ್ಲೆ ನಡೆಸಿ ತವರಿನಿಂದ 3 ಲಕ್ಷ ರೂ. ವರದಕ್ಷಿಣೆ ತರುವಂತೆ, ಸೈಟು ಕೊಡಿಸುವಂತೆ ಪೀಡಿಸುತ್ತಿದ್ದ. ಇಲ್ಲದಿದ್ದರೆ ಮನೆಯಿಂದ ಹೊರ ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದ. ವರದಕ್ಷಿಣೆ ಕೊಡಲು ಒಪ್ಪದಿದಕ್ಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾನೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
64 ಲಕ್ಷ ಕೊಟ್ಟರೂ ಸಾಲಲಿಲ್ಲ:ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಕೆ.ಆರ್.ಪುರದ 34 ವರ್ಷದ ಮಹಿಳೆ 2015ರಲ್ಲಿ ಇಂಜಿನಿಯರ್ ಪ್ರಕಾಶ್​ನನ್ನು ವಿವಾಹವಾಗಿದ್ದರು. ಬಳಿಕ ಪತಿಯ ಕಿರುಕುಳದಿಂದ ನೊಂದು ಪಾಲಕರಿಂದ 6 ಲಕ್ಷ ರೂ. ಪಡೆದು ಪತಿಗೆ ಕೊಟ್ಟಿದ್ದಳು. ಮಹಿಳೆಯೇ ಬ್ಯಾಂಕ್​ನಿಂದ 64 ಲಕ್ಷ ರೂ. ಸಾಲ ಪಡೆದು ಮನೆ ಖರೀದಿಸಿದ್ದರು. ಇಷ್ಟಾದರೂ ಇನ್ನಷ್ಟು ವರದಕ್ಷಿಣೆ ಕೊಡುವಂತೆ ಪ್ರಕಾಶ್ ಮಾನಸಿಕ, ದೈಹಿಕವಾಗಿ ಹಿಂಸೆ ಕೊಡುತ್ತಿದ್ದಾನೆ ಎಂದು ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಹಣ ತರದ್ದಕ್ಕೆ ಹೊರತಳ್ಳಿದ:ಸೊಣ್ಣೇನಹಳ್ಳಿ ನಿವಾಸಿ 35 ವರ್ಷ ಮಹಿಳೆ 2015ರಲ್ಲಿ ಹರೀಶ್ ಎಂಬಾತನನ್ನು ವಿವಾಹವಾಗಿದ್ದರು. ಮದುವೆಯಲ್ಲಿ ಕೇಳಿದಷ್ಟು ಹಣ ಕೊಟ್ಟಿಲ್ಲ ಎಂದು ಪತಿ ಕಿರುಕುಳ ಕೊಡಲಾರಂಭಿಸಿದ್ದ. ಪ್ರತಿ ಹಬ್ಬಕ್ಕೂ ತವರಿನಿಂದ ಚಿನ್ನಾಭರಣ ತರುವಂತೆ ಹಿಂಸೆ ಕೊಡುತ್ತಿದ್ದ. ಇದೀಗ ಮನೆಯಿಂದ ಹೊರ ಹಾಕಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದಾನೆ ಎಂದು ನೊಂದ ಪತ್ನಿ ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಿನ್ನ, ಸೈಟಿಗಾಗಿ ಪೀಡಿಸಿ ಹಲ್ಲೆ:ಪಟ್ಟೇಗಾರಪಾಳ್ಯದ ನಿವಾಸಿ 25 ವರ್ಷದ ಮಹಿಳೆ 2018ರಲ್ಲಿ ಖಾಸಗಿ ಕಂಪನಿ ಉದ್ಯೋಗಿ ಶಿವಕುಮಾರ್​ನನ್ನು ಮದುವೆಯಾಗಿದ್ದರು. ಗರ್ಭಿಣಿಯಾದ ವೇಳೆ ವರದಕ್ಷಿಣೆ ತರುವಂತೆ ದೈಹಿಕ, ಮಾನಸಿಕ ಹಿಂಸೆ ಕೊಟ್ಟಿದ್ದ. ಮಗು ಜನಿಸಿ ಪತ್ನಿ ಮನೆಗೆ ಬಂದಾಗ ಲಕ್ಷಾಂತರ ಮೌಲ್ಯದ ಚಿನ್ನ, ನಿವೇಶನ ತರುವಂತೆ ಪೀಡಿಸಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ. ನೊಂದ ಪತ್ನಿ ಪೊಲೀಸರ ಮೊರೆ ಹೋಗಿದ್ದಾಳೆ.
ದೌರ್ಜನ್ಯ ಏಕೆ?:ಹಣ, ಚಿನ್ನ, ಆಸ್ತಿಗಾಗಿ ಪತ್ನಿಯ ಮೇಲೆ ಹಲ್ಲೆ, ಬೆದರಿಕೆ, ಮೈಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ, ಬ್ಲಾ್ಯಕ್​ವೆುೕಲ್ ಇನ್ನಿತರ ಕಿರುಕುಳ ಪ್ರಕರಣ ಅಧಿಕವಾಗಿವೆ. ಜತೆಗೆ ಮಾನಸಿಕವಾಗಿ ಹಿಂಸೆ ನೀಡಿ, ಮನೆಯಿಂದ ಹೊರಹಾಕಿದ ಪ್ರಕರಣಗಳೂ ಸಾಕಷ್ಟಿವೆ. ಕರೊನಾ ಹಿನ್ನೆಲೆಯಲ್ಲಿ ಅಧಿಕ ಜನ ಮನೆಯಲ್ಲೇ ಇದ್ದು, ಮಾನಸಿಕವಾಗಿ ಖಿನ್ನತೆಗೊಳಗಾಗಿ ಪತ್ನಿಯರಿಗೆ ಹಿಂಸೆ ಕೊಡುತ್ತಿದ್ದಾರೆ ಎಂಬುದು ಮನಃಶಾಸ್ತ್ರಜ್ಞರ ಅಭಿಪ್ರಾಯ. ಧೈರ್ಯ ಮಾಡಿ ಪತಿಯನ್ನು ಪ್ರಶ್ನಿಸಲು ಹೋದರೆ ವಿಚ್ಛೇದನ ಕೊಡುವುದಾಗಿ ಬೆದರಿಸುತ್ತಿದ್ದಾರೆ. ಜತೆಗೆ ವರದಕ್ಷಿಣೆ ಸಲುವಾಗಿ ಕೌಟುಂಬಿಕ ಕಲಹಗಳೂ ಏರಿಕೆಯಾಗಿವೆ. ಈ ಪೈಕಿ ಕೇವಲ ಶೇ.15 ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಕಾನೂನಿನಲ್ಲಿ ಏನು ಶಿಕ್ಷೆ?:ವರದಕ್ಷಿಣೆ ಪ್ರಕರಣ ಸಾಬೀತಾದರೆ ಜಾಮೀನುರಹಿತ ಶಿಕ್ಷೆ ನೀಡಲಾಗುತ್ತದೆ. ವರದಕ್ಷಿಣೆ ತೆಗೆದುಕೊಳ್ಳುವ ಹಾಗೂ ನೀಡುವ ಅಪರಾಧಕ್ಕೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ವರದಕ್ಷಿಣೆ ಕೇಳಿದರೆ ಕನಿಷ್ಠ 2 ವರ್ಷ ಶಿಕ್ಷೆ ವಿಧಿಸಲು ಅವಕಾಶಗಳಿವೆ.
ವಿವಾಹಿತ ಮಹಿಳೆಯರು ಸಬಲೆಯರಾಗಿ ತಮ್ಮ ಕಾಲ ಮೇಲೆ ತಾವು ನಿಂತುಕೊಂಡರೆ ವರದಕ್ಷಿಣೆ ಕಿರುಕುಳ ಕೊಟ್ಟರೂ ಎದುರಿಸಬಹುದು. ಆದರೆ, ಪತಿಯನ್ನೇ ಅವಲಂಬಿಸಿದರೆ ಕಷ್ಟ. ಮಹಿಳೆಯರು ಸ್ವಾವಲಂಬಿಗಳಾಗಬೇಕು. ವರದಕ್ಷಿಣೆ ಕಿರುಕುಳ ಪ್ರಕರಣವನ್ನು ನಿಯಂತ್ರಿಸಬೇಕು.
|ಪ್ರಮೀಳಾ ನಾಯ್ಡುರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ಮನೆಗೆ ಬರೋವರೆಗೂ ನಿಮಗೆ ಗೊತ್ತಾಗಲ್ಲ, ಅದೆಷ್ಟು ಕೆಟ್ಟದ್ದು ಅಂತ!: ‘ಪ್ರೇಮ್​ ಅಡ್ಡ’ದ ಹುಡುಗಿ ಹೀಗಂದಿದ್ಯಾಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eleven =
Remember me
