|ಡಾ.ಕೆ.ಎಸ್. ಶರ್ಮಾ
ನನ್ನ ಮಾತೃ ಭಾಷೆ ತೆಲುಗು. ಶಿಕ್ಷಣ ಕಲಿತದ್ದೂ ತೆಲುಗು ಮತ್ತು ಇಂಗ್ಲಿಷ್. ಆದರೆ, ವರಕವಿ ದ.ರಾ. ಬೇಂದ್ರ ಅವರ ಪ್ರಥಮ ಭೇಟಿಯಲ್ಲಿಯೇ ಕನ್ನಡ ಭಾಷೆಯ ಕೈಂಕರ್ಯಕ್ಕೆ ತೊಡಗುವಂತಾಯಿತು. ಅವರ ಮಾತುಗಳೇ ಚೇತನ ಸ್ವರೂಪಿ; ಎಂಥವರನ್ನೂ ಬೆರಗುಗೊಳಿಸಿ, ಕಾರ್ಯತತ್ಪರರನ್ನಾಗಿಸುತ್ತದೆ. ಅದು ನನ್ನಲ್ಲೂ ಆಯ್ತು…
ಜಿ.ವಿ. ಕುಲಕರ್ಣಿ ಅವರ ಜತೆಗೆ ಬೇಂದ್ರೆ ಅವರನ್ನು ಭೇಟಿ ಮಾಡಿದೆ. ಕುಲಕರ್ಣಿ ಅವರು ಶರ್ಮಾ ಅವರಿಗೆ ಕನ್ನಡ ಬರುವುದಿಲ್ಲ ಎಂದರು. ‘ಬರುವುದಿಲ್ಲ? ಬರುತ್ತದೆ’ ಎಂದೇಬಿಟ್ಟರು ಬೇಂದ್ರೆ! ಕೆಲ ದಿನಗಳ ನಂತರ ನನಗೆ ಕನಸು ಬಿತ್ತು. ‘ವೆಕೆಂಟ್ ಮೈಂಡ್ ಗೋ ಔಟ್ ಆಫ್ ದಿ ವರ್ಲ್ಡ್ ಆನ್ ವೆಕೆಂಟ್ಸ್’ ಇಂಗ್ಲಿಷ್ ಸಾಲುಗಳು ಕನಸಿನ ಕಣ್ಣಿಗೆ ಕಂಡವು. ಎದ್ದವನೇ ‘ಜ್ಞಾನ ಶೂನ್ಯನ ಭುವಿಯ ತೊರೆವ ಜ್ಞಾನ ಶೂನ್ಯನಾಗಿ’ ಕನ್ನಡದಲ್ಲಿ ಪದ್ಯ ರಚಿಸಿದೆ. ಅವರ ಸಂಪರ್ಕ ಹೆಚ್ಚುತ್ತಿದ್ದಂತೆ ಕನ್ನಡ ಸಾಹಿತ್ಯ ಆಸೆ ಮತ್ತಷ್ಟು ಚಿಗುರೊಡೆಯಿತು. ಈಗ 40 ಕನ್ನಡದ ಕೃತಿಗಳನ್ನು ರಚಿಸಿದ್ದೇನೆ. ಇದಕ್ಕೆಲ್ಲ ಪ್ರೇರಣೆ ಬೇಂದ್ರೆ.
ವಾಮನ ಬೇಂದ್ರೆ ಮತ್ತು ನಾನು ಸೇರಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧಗಳನ್ನು ಬರೆದಿದ್ದೇವೆ. ಅದರಲ್ಲೂ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದೇವೆ. ಬರುತ್ತದೆ; ಬರೆಯಿರಿ ಎಂದು ಹುರಿದುಂಬಿಸುತ್ತಿದ್ದರು. ಕೃತಿಗಳನ್ನು ಭಾಷಾಂತರ ಮಾಡುವುದಕ್ಕೆ ತರಬೇತಿಯನ್ನೂ ಕೊಡುತ್ತಿದ್ದರು. ಇದರ ಪರಿಣಾಮವೇ ಗುರುಗೋವಿಂದ್ ಸಿಂಗ್ ಅವರ ಶತಮಾನದ ಕೃತಿ ಅನುವಾದ ಮಾಡಿದೆವು. ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಬೇಂದ್ರೆ ಅವರಿಗೆ ಬಂದ ಸಂದರ್ಭದಲ್ಲಿ, ಪ್ರದಾನಕ್ಕೆ ಪೂರ್ವದಲ್ಲಿ ‘ವಿಶ್ವಧಾರಣ ಸೂತ್ರ’ ಎಂಬ ವೈಜ್ಞಾನಿಕ ಕೃತಿ ನಮ್ಮಿಂದ ಅವತರಿಸುವಂತೆ ಮಾಡಿದ್ದರು. 70ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಬೇಂದ್ರೆ ಅವರ ಪೂರ್ವಜರ ಸ್ಥಳವಾದ ಶಿರಹಟ್ಟಿಯಲ್ಲಿತ್ತು. ಸಾಹಿತ್ಯಕ ಸಂದರ್ಶನ ಮಾಡಲಾಗಿತ್ತು. ವೆಂಕಣ್ಣ ಮಣ್ಣೂರ ಅವರ ‘ಮಕರಂಧ’ ಮಾಸಿಕದಲ್ಲಿ ‘70ರ ಜೀವನದ ಏರಿಳಿತಗಳು’ ಸಂದರ್ಶನ ಮಾಡಿದೆವು. ಅವರ ಆತ್ಮಚರಿತ್ರೆಯಲ್ಲಿ ಇಲ್ಲದ ಅಂಶಗಳು ಇದರಲ್ಲಿ ಮೂಡಿಬಂದವು. ಬಾಂಬೆ ವಿಶ್ವವಿದ್ಯಾಲಯದಲ್ಲಿ ನಾನು ಬೇಂದ್ರೆ ಮತ್ತು ವಿಜ್ಞಾನದ ಬಗ್ಗೆ ಮಾತನಾಡಿದೆ. ವಾಮನ ಬೇಂದ್ರೆ ಅವರು ಜೀವರಸಾಯನಶಾಸ್ತ್ರದ ಬಗ್ಗೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಇದಕ್ಕೆಲ್ಲ ಮಾರ್ಗದರ್ಶನ ದ.ರಾ. ಬೇಂದ್ರೆ ಅವರದು. ಅನಾರೋಗ್ಯ ಹಿನ್ನೆಲೆಯಲ್ಲಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆಗ ನಿಟ್ಟೂರು ಶ್ರೀನಿವಾಸರಾವ್ ಅವರ ಅಳಿಯ, ಪ್ರಖ್ಯಾತ ವಿಜ್ಞಾನಿ ಇಸಿಜಿ ಸುದರ್ಶನ ಅವರು ಆಗಮಿಸಿದ್ದರು. ಇವರಿಬ್ಬರ ವೈಜ್ಞಾನಿಕ ವಿಚಾರ ವಿನಿಮಯವನ್ನು ದಾಖಲಿಸಿಟ್ಟಿದ್ದೇನೆ. ಅಂದು ಅವರು ಮಾತನಾಡಿದ ವಿಷಯಗಳು ಬಹಳ ಮಾರ್ವಿುಕವಾಗಿದ್ದವು. ವಿಜ್ಞಾನ, ಸಂಖ್ಯಾಶಾಸ್ತ್ರ, ಗಣಿತಶಾಸ್ತ್ರ, ಉಪನಿಷತ್ ಹೀಗೆ ಎಲ್ಲ ವಿಷಯಗಳನ್ನು ಮೇಳೈಸಿಕೊಂಡ ಅವರ ಜೀವನಾನುಭವ ನಮಗೆ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ.
ಸಾರ್ವಕಾಲಿಕವಾದ ಅವರ ಸಾಹಿತ್ಯ, ಜೀವನ ಮುಂದಿನ ಸಮುದಾಯಕ್ಕೆ ಅಗತ್ಯವಾಗಿಬೇಕು. ಇದನ್ನೇ ಇಟ್ಟುಕೊಂಡು ಹುಬ್ಬಳ್ಳಿಯ ಗೋಕುಲ ರಸ್ತೆಯ ವಿಶ್ವಶ್ರಮ ಚೇತನ ಆವರಣದಲ್ಲಿ ವರಕವಿ ದ.ರಾ.ಬೇಂದ್ರ ಸಂಶೋಧನಾ ಸಂಸ್ಥೆಯನ್ನು ಆರಂಭಿಸಲಾಗಿದೆ. ನಾನು ಇದಕ್ಕೆ ನಿರ್ದೇಶಕ, ದ.ರಾ. ಬೇಂದ್ರೆ ಪುತ್ರ ವಾಮನ ಬೇಂದ್ರೆ ಸಹ ನಿರ್ದೇಶಕರಾಗಿದ್ದರು. ಬೇಂದ್ರೆ ಅವರ 7 ಸ್ಮಾರಕಗಳು ಇವೆ. 2023ರ ಫೆಬ್ರುವರಿ 6ರಂದು ಬೇಂದ್ರೆ ಅವರ 127ನೇ ಜನ್ಮ ದಿನಾಚರಣೆಯನ್ನು ಕ್ಯಾಂಪಸ್​ನಲ್ಲಿ ಆಯೋಜಿಸಲಾಗಿದೆ. ಅಂದು ಮೂರು ಮಹತ್ವದ ಸಂದರ್ಶನಗಳು. ನಾಲ್ಕು ವೈಜ್ಞಾನಿಕ ಪ್ರಬಂಧಗಳನ್ನು ಸಮರ್ಪಿಸಲಾಗುವುದು. ಬೇಂದ್ರೆ ಸಂಗೀತ ಅಕಾಡೆಮಿಯ ಮೂಲಕ ಸಂಗೀತೋತ್ಸವ, ರಸ ಋಷಿ ಬೇಂದ್ರೆ ಮಹಾಕಾವ್ಯ ಕಲಾ ಪ್ರದರ್ಶನಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ದ.ರಾ. ಬೇಂದ್ರೆ ಅವರು ಅಂಬಿಕಾತನಯದತ್ತ, ಸದಾನಂದ ಜಂಗಮ, ಬೆನ್​ರಾಮ್ನ್ ಕಾವ್ಯನಾಮದೊಂದಿಗೆ ಜನಮಾನಸದಲ್ಲಿ ಬೇರೂರಿದ್ದಾರೆ. ಇದು ವಿಶಾಲ ಆಗಬೇಕು. ಹಾಗಾಗಿಯೇ ಅವರ ಸದಾಶಯಗಳು, ಜೀವರಸಾಯನ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ.
(ಲೇಖಕರು ಬೇಂದ್ರೆ ಅವರ ಮಾನಸಪುತ್ರ, ವರಕವಿ ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕರು)
|ಅನಂತ ಕೃಷ್ಣ ದೇಶಪಾಂಡೆ
‘ರಸವೇ ಜನನ ವಿರಸ ಮರಣ ಸಮರಸವೆ ಜೀವನ ಎಂದು ಬರೆದ ದ.ರಾ. ಬೇಂದ್ರೆ ಅದೇ ರೀತಿ ಬದುಕಿದವರು. ಅವರನ್ನು ಯಾರೋ ಒಬ್ಬರು ಒಳ್ಳೆಯ ಕೆಲಸವನ್ನು ಯಾವಾಗ ಆರಂಭ ಮಾಡಬೇಕು ಎಂದು ಕೇಳಿದ್ದರಂತೆ. ಒಂದು ಉಂಡಿಯನ್ನು ಯಾವ ಕಡೆಯಿಂದ ತಿಂದರೂ ಅದು ಉಂಡಿಯೇ. ಹಾಗೆಯೇ ಕೆಲಸ ಆರಂಭಿಸಲು ಒಳ್ಳೆಯ ಕಾಲ ನೋಡಿಕೊಂಡು ಕೂರಬೇಕಿಲ್ಲ ಎಂದಿದ್ದರಂತೆ’.
‘ಬೇಂದ್ರೆ ತೀರಿಕೊಂಡಾಗ ನನಗೆ 20 ವರ್ಷ. ಸಾಧನಕೇರಿಯವನೇ ಆದ ನಾನು ಅವರನ್ನು ಹತ್ತಿರದಿಂದ ಕಂಡಿದ್ದೆ. ನಟನಾಗಿದ್ದುದರಿಂದ ಬೇಂದ್ರೆಯವರ ಮೇಲಿನ ಅಭಿಮಾನದಿಂದ ಅವರ ವೇಷಭೂಷಣ ತೊಟ್ಟು ಬೇಂದ್ರೆ ದರ್ಶನ ಮಾಡಿಸುತ್ತಿದ್ದೇನೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬೇಂದ್ರೆಯವರು ತಮ್ಮ ಕವಿತೆಗಳಲ್ಲಿ ಬಳಸಿಕೊಳ್ಳದ ವಿಷಯವಸ್ತುವಿಲ್ಲ. ಛಲ, ಬದುಕು, ಸಾವು- ನೋವುಗಳು ಅವರ ಕವನಗಳ ವಿಷಯವಸ್ತುಗಳಾಗಿವೆ. ಅವರ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳು ಅಪ್ರತಿಮ. ಮರಾಠಿಯಲ್ಲೂ ಪ್ರೌಢಿಮೆ ಹೊಂದಿದ್ದ ಅವರು ಗ್ರಂಥ ರಚನೆ, ಅನುವಾದದಲ್ಲೂ ಸೈ ಎನಿಸಿಕೊಂಡವರು. ‘ಗೆಳೆಯರ ಗುಂಪು’ ಕಟ್ಟಿ ಸಕ್ರಿಯರಾಗಿ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿದವರು’.
(ಲೇಖಕರು ಹಿರಿಯ ನಟ)
‘ಬೇಂದ್ರೆ ಧಾರವಾಡದಲ್ಲಿ ಹುಟ್ಟಿ ಕರ್ನಾಟಕ ಕವಿಯಾಗಿ, ಭಾರತದ ಕವಿಯಾದರು. ಅವರಿಗೆ ಸಾವಿಲ್ಲ. ಅವರ ಕಾವ್ಯ ಅಜರಾಮರ’. ‘ಅವರು ಕಾವ್ಯ, ಕವಿತೆ ಅಷ್ಟೇ ಅಲ್ಲ. ಗದ್ಯ ಸಾಹಿತ್ಯ, ಪ್ರಬಂಧ, ವಿಮರ್ಶೆಗೂ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರೊಬ್ಬ 20ನೇ ಶತಮಾನದ ಪರಿಪೂರ್ಣ ಕವಿ, ಪರಿಪೂರ್ಣ ಸಾಹಿತಿ. ಒಳ್ಳೆಯ ಮಾತುಗಾರ, ವಿಚಾರವಾದಿ. ಅವರಾಡಿದ ಒಂದೊಂದು ಪದ ಅರ್ಥಪೂರ್ಣ. ಅವರ ಒಡನಾಟ, ಭೇಟಿ ನನ್ನ ಪುಣ್ಯ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ಗಾಗಿ 8 ವರ್ಷ ಕೆಲಸ ಮಾಡಿದ್ದೇನೆ. ಜತನದಿಂದ ನಡೆಸಿಕೊಂಡು ಹೋಗಿರುವ ಸಮಾಧಾನವಿದೆ’.
|ಡಾ. ಶ್ಯಾಮಸುಂದರ ಬಿದರಕುಂದಿ, ಹಿರಿಯ ಸಾಹಿತಿ
ಬೇಂದ್ರೆ ವಿಶ್ವ ಕಂಡ ಶ್ರೇಷ್ಠ ಕವಿ. ಅವರ ಕವನ- ಕಾವ್ಯಗಳು ಜನಸಾಮಾನ್ಯರ ನಾಲಗೆ ಮೇಲೆ ನಿಲ್ಲುತ್ತವೆ. ಆದ್ದರಿಂದ ಬೇಂದ್ರೆ ಅಜರಾಮರ. ಅವರನ್ನು ವಿಶ್ವಮಾನ್ಯ ಕವಿ ಎಂದು ಗೌರವಿಸುವಂತಾಗಬೇಕು. ವಿಶ್ವಮಾನವ ದಿನಾಚರಣೆಯ ರೀತಿಯಲ್ಲಿ ಬೇಂದ್ರೆ ಜನ್ಮದಿನವಾದ ಜ. 31 ಅನ್ನು ವಿಶ್ವಕವಿ ದಿನವಾಗಿ ಆಚರಿಸುವಂತಾಗಬೇಕು. ಇದು ವರಕವಿ ಬೇಂದ್ರೆಯವರಿಗೆ ನಾವು ಸಲ್ಲಿಸುವ ಗೌರವವಾಗುತ್ತದೆ.
|ಡಾ. ಡಿ.ಎಂ. ಹಿರೇಮಠ, ಅಧ್ಯಕ್ಷ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್
ಚಿಕಿತ್ಸೆಗೆಂದು ದಾಖಲಾದವಳ ಎರಡೂ ಕಿಡ್ನಿ ಕದ್ರು; ‘ನೀನಿನ್ನು ಇದ್ರೂ ಅಷ್ಟೇ, ಸತ್ರೂ ಅಷ್ಟೇ’ ಅಂತ ಪತ್ನಿ 3 ಮಕ್ಕಳ ಬಿಟ್ಟುಹೋದ ಪತಿ!

ಸಾವಿರಾರು ಕೋಟಿ ರೂ. ವಂಚಿಸಿದ ಮಲ್ಯ-ಮೋದಿಯನ್ನೇ ಏನೂ ಮಾಡಿಲ್ಲ; 3-4 ಕೋಟಿ ಮೋಸ ಮಾಡಿದ ನನ್ನ ಚಿಂತೆ ನಿಮಗ್ಯಾಕೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − two =
Remember me
