|ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
ಓಂ ಭೂರ್ಭವಃ ಸ್ವಃ | ತತ್ಸವಿತುರ್ವರೇಣ್ಯಂ
ಭಗೋ ದೇವಸ್ಯ ಧೀಮಹಿ
ಧಿಯೋಯೋನ ಪ್ರಚೋದಯಾತ್|
‘ಓಂ ಎಂಬ ನಾದಬಿಂದುಗಳನ್ನು ಒಳಗೊಂಡ ‘ಪ್ರಣವ’ ಸ್ವರೂಪನಾದ ಭಗವಂತನನ್ನು ಓಂಕಾರಪೂರಕವಾದ ಗಾಯತ್ರಿ ಮಂತ್ರದಿಂದ ‘ಭೂಃ ಭುವಃ ಸ್ವಃ’ ಎಂಬ ಮೂರೂ ಲೋಕಗಳನ್ನು ಒಳಗೊಂಡ-ಒಳ ಹೊರಗೂ ವ್ಯಾಪಿಸಿರುವ ಆ ನಿರಂಜನ ನಿರಾಕಾರ ಮೂರ್ತಿಯಾದ, ಸಕಲ ಅಜ್ಞಾನ ಅಂಧಕಾರವನ್ನು ಹೋಗಲಾಡಿಸುವ ಜ್ಞಾನಸ್ವರೂಪವನ್ನು ಧ್ಯಾನಿಸೋಣ’ ಎಂಬ ಅರ್ಥವುಳ್ಳ ಈ ಮಂತ್ರದ ಜಪ ಪರಮಾತ್ಮನ ಧ್ಯಾನದಲ್ಲಿ ಪರ್ಯಾವಸನವಾಗುತ್ತದೆ.
ಮಂತ್ರ ಎಂಬುದಕ್ಕೆ ಸಂಸ್ಕೃತದಲ್ಲಿ ವಿಶೇಷ ಅರ್ಥವಿದೆ. ಮನನಾತ ತ್ರಾಯತೇ ಇತಿ ಮಂತ್ರಃ ಎಂಬ ಉಕ್ತಿ ಇದೆ. ಶ್ರೇಷ್ಠ ಮಂತ್ರಗಳಲ್ಲಿ ಗಾಯತ್ರಿ ಮಂತ್ರ ಒಂದಾಗಿದೆ ಹಾಗೂ ಮಂತ್ರಗಳ ರಾಜವಾಗಿದೆ. ಈ ಮಂತ್ರವನ್ನು ಪ್ರತಿಯೊಬ್ಬರು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಾಗ ವಿಶೇಷವಾದ ಬದಲಾವಣೆ ಕಾಣಬಹುದು. ಈ ಮಂತ್ರವನ್ನು ಅರ್ಥ ಮಾಡಿಕೊಂಡು ಪಠಿಸಿದರೆ, ಅದರ ಮಹತ್ವ ಅರಿವಿಗೆ ಬರುತ್ತದೆ. ಹೀಗೆ ಪಠಿಸುವಾಗ ಭಕ್ತಿ, ಶ್ರದ್ಧೆ, ನಂಬಿಕೆ ಇರಬೇಕು. ಆಗಲೇ ಮಂತ್ರಪಠಣದಿಂದ ನಮ್ಮ ವ್ಯಕ್ತಿತ್ವಕ್ಕೆ ದಿವ್ಯತೆ ಪ್ರಾಪ್ತವಾಗುತ್ತದೆ.
ಗಾಯತ್ರಿಗೆ ವೇದಮಾತೆ ಎಂದೂ ಹೆಸರು. ಗಾಯತ್ರಿ ಮಂತ್ರೋಚ್ಚಾರಣದಿಂದ ಸಮಸ್ತ ವೇದಗಳನ್ನೂ ಪಠಣ ಮಾಡಿದ ಫಲ ಬರುತ್ತದೆ. ಅರ್ಥಾನುಸಂಧಾನದಿಂದ ಸಮಸ್ತ ವೇದಗಳಿಂದುಂಟಾಗುವ ಫಲವೂ ದೊರಕುತ್ತದೆ. ಹಾಗಾಗಿ ಈ ಗಾಯತ್ರಿ ಪ್ರತಿ ಪಾದ್ಯನೂ ಸಾಕ್ಷಾತ್ ಶ್ರೀಮನ್ನಾರಾಯಣನೇ. ಈ ಮಂತ್ರವು ಪರಮಾತ್ಮನಿಗೆ ಅನಂತ ಗುಣಪೂರ್ಣತ್ವವನ್ನೂ, ನಿದೋಷತ್ವವನ್ನೂ ಹೇಳುತ್ತದೆ. ‘ಸವಿತೃ’ ಎಂದರೆ ಎಲ್ಲವನ್ನೂ ಧರಿಸಿರುವವನು. ಬ್ರಹ್ಮ ಅಥವಾ ವಿಷ್ಣುವನ್ನು, ಅಷ್ಟೇ ಅಲ್ಲ, ಸಾಕ್ಷಾತ್ಕಾರವನ್ನು ತಿಳಿಯುವುದಕ್ಕೆ ಗಾಯತ್ರಿ ಮಂತ್ರದಿಂದ ಮಾತ್ರ ಸಾಧ್ಯ. ಲೋಕದ ಈ ಲೀಲೆಯಲ್ಲಿ ಮನುಷ್ಯನಾದವನು ಈ ಪುಟ್ಟ ಗಾಯತ್ರಿಮಂತ್ರದಿಂದ ಸಾಧಿಸುವುದು ಮಾತ್ರ ಅಪಾರ. ಪುಟ್ಟ ಮಂತ್ರವೊಂದು ಅಗಾಧವಾದ ಅರ್ಥ, ಪಾರಂಪರ್ಯವನ್ನು ಹೊಂದಿ ಮನುಷ್ಯನನ್ನು ಎತ್ತರಕ್ಕೇರಿಸುವಲ್ಲಿ ಸಫಲವಾಗಿದೆ.
ಗಾಯತ್ರಿ ದೇವಿಗೆ ಐದು ಶಿರಸ್ಸುಗಳು, ಹತ್ತು ಕೈಗಳು. ಮನುಷ್ಯನ ಶರೀರವು ಪಂಚಭೂತಗಳಿಂದ ಮಾಡಲ್ಪಟ್ಟಿದೆ. 1) ಭೂತತ್ತ್ವ 2) ಜಲತತ್ತ್ವ 3) ಅಗ್ನಿತತ್ತ್ವ 4) ವಾಯುತತ್ತ್ವ 5) ಆಕಾಶತತ್ತ್ವ. ಈ ಪಂಚಭೂತಗಳನ್ನು ತಿಳಿಸುವುದೇ ಗಾಯತ್ರಿ ದೇವಿಯ ಪಂಚ ಶಿರಸ್ಸುಗಳು. ದಶದಿಕ್ಕುಗಳಿಂದಲೂ ಬರುವ ಶಕ್ತಿಯನ್ನು ಮನುಷ್ಯನ ಆರೋಗ್ಯಕ್ಕಾಗಿ ನಿಯಂತ್ರಿಸುವುದೇ ಗಾಯತ್ರಿ ದೇವಿಯ ಹತ್ತು ಕೈಗಳು. ಪಂಚಭೂತಗಳು, ದಶದಿಕ್ಕುಗಳು ಹಾಗೂ ನವಗ್ರಹಗಳು ಸೇರಿ ಒಟ್ಟು 24. ಇದು ಗಾಯತ್ರಿ ಮಂತ್ರದಲ್ಲಿರುವ 24 ಅಕ್ಷರಗಳ ಸಂಕೇತವಾಗಿದೆ. 24 ಅಕ್ಷರಗಳನ್ನು ಸೇರಿಸಿ ಪಠಿಸಿದಾಗ ಅದು 24 ಅಂಗಗಳ ಮೇಲೆ ಪ್ರಭಾವ ಬೀರುತ್ತದೆ. ಈ ಮಂತ್ರವನ್ನು ಪ್ರಾತಃಕಾಲ, ಮಧ್ಯಾಹ್ನ ಮತ್ತು ಸಂಧ್ಯಾಕಾಲದಲ್ಲಿ ಸಂಧ್ಯಾವಂದನೆ ಮಾಡುವಾಗ ನಿಯಮಬದ್ಧವಾಗಿ ಪಠಿಸಬೇಕು, ಜಪಿಸಬೇಕು. ಆಗ ಇಂದ್ರಿಯಗಳು ಹತೋಟಿಗೆ ಬಂದು ಅತೀಂದ್ರಿಯ ಶಕ್ತಿ ಬರುತ್ತದೆ. ಆ ಶಕ್ತಿಯಿಂದ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅನುಕೂಲವಾಗಿ, ಜೀವನ ಸಾರ್ಥಕವಾಗುತ್ತದೆ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
