|ನಾಗರಾಜ ಜೋರಾಪುರಚನ್ನಮ್ಮ ಕಿತ್ತೂರು
ಬ್ರಿಟಿಷ್ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಶೌರ್ಯವನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನಲ್ಲಿ ಭರದಿಂದ ಸಾಗಿದೆ. ಕಿತ್ತೂರು ಸಂಸ್ಥಾನದ ಇತಿಹಾಸ ಬಿಂಬಿಸುವ ಸ್ತಬ್ಧಚಿತ್ರಗಳ ರಾಕ್ ಗಾರ್ಡನ್ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ 10 ಎಕರೆ ಪ್ರದೇಶದಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ರಾಣಿ ಚನ್ನಮ್ಮಾ ಹಾಗೂ ಸಂಗೊಳ್ಳಿ ರಾಯಣ್ಣ ಅವರ ವಿರೋಚಿತ ಐತಿಹಾಸಿಕ ಕ್ಷಣಗಳನ್ನು ಮನದಟ್ಟು ಮಾಡುವ 52 ಸನ್ನಿವೇಶದ ಸುಂದರವಾದ ಸ್ತಬ್ಧಚಿತ್ರ ಅಳವಡಿಸುವ ಕಾರ್ಯ ನಡೆದಿದೆ. ರಾಯಣ್ಣ ಹುತಾತ್ಮರಾದ ಜನವರಿ 26ರಂದು ರಾಕ್ ಗಾರ್ಡನ್ ಉದ್ಘಾಟನೆ ಸಾಧ್ಯತೆ ಇದೆ.
ಅಭಿವೃದ್ಧಿ ಪ್ರಾಧಿಕಾರ:2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’ ರಚನೆ ಮಾಡುವ ಮೂಲಕ ಬಜೆಟ್​ನಲ್ಲಿ 267.67 ಕೋಟಿ ರೂ. ಮೀಸಲಿಟ್ಟಿದ್ದರು. ಅದರ ಫಲವಾಗಿ ಇದೀಗ ರಾಕ್ ಗಾರ್ಡನ್ ನಿರ್ವಣಕ್ಕೆ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಲಾವಿದರು ಸುಂದರವಾದ ಹಾಗೂ ನೈಜವಾಗಿಯೇ ಇರುವಂತೆ ಸ್ತಬ್ಧಚಿತ್ರಗಳಿಗೆ ತಮ್ಮ ಕುಂಚಗಳಿಂದ ಬಣ್ಣ ಬಳಿಯುತ್ತಿದ್ದಾರೆ.
ಕಿತ್ತೂರು ಅರಮನೆ ನಿರ್ಮಾಣ:ಕಿತ್ತೂರು ಸಂಸ್ಥಾನದಲ್ಲಿ ಪ್ರಮುಖವಾದ ಅರಮನೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅದರಲ್ಲಿ ವೀರಪ್ಪ ದೇಸಾಯಿ ಅವರ ದರ್ಬಾರಿನ ಅರಮನೆ, ರಾಣಿ ರುದ್ರಮ್ಮಾಜಿ ಸಂಗೊಳ್ಳಿಯಲ್ಲಿ ಉಳಿದುಕೊಳ್ಳುವ ದೃಶ್ಯ, ಬ್ರಿಟಿಷರು ದತ್ತಕ ನಿರಾಕರಣೆ ಮಾಡುವ ಸನ್ನಿವೇಶದ ಬೃಹತ್ ಅರಮನೆಗಳು ಐತಿಹಾಸಿಕ ಲೋಕ ತೆರೆದಿಡಲಿವೆ. ನಾಡಿನ ಜನತೆಗೆ ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಮತ್ತೊಮ್ಮೆ ಬೆಳಕಿಗೆ ತರಲು ಸರ್ಕಾರ ರಾಕ್ ಗಾರ್ಡನ್ ನಿರ್ವಿುಸುತ್ತಿರುವುದಕ್ಕೆ ಕಿತ್ತೂರು ತಾಲೂಕಿನ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ವೈಭವ ಅನಾವರಣ:ಈ ರಾಕ್ ಗಾರ್ಡನ್ ಇಡೀ ಕಿತ್ತೂರು ಸಂಸ್ಥಾನದ ಆಡಳಿತ ವ್ಯವಸ್ಥೆಯ ಬಗ್ಗೆ ಮನನ ಮಾಡಲಿದೆ. ಚನ್ನಮ್ಮಳ ಆಡಳಿತ ವೈಖರಿ, ಯುದ್ಧ ಸಂದರ್ಭ, ರಾಜರ ದರ್ಬಾರ್ ಹಾಗೂ ಅಂದಿನ ನಾಡಿನ ವೈಭವ, ಜನ ಜೀವನ ಪದ್ಧತಿ, ದೇಶಭಕ್ತಿಯ ಕಿಚ್ಚು, ರಾಯಣ್ಣನ ದೇಶಾಭಿಮಾನ ಬಿಂಬಿಸುವ 52 ಸನ್ನಿವೇಶಗಳು ಕಣ್ಣೆದುರಿಗೆ ಗೋಚರಿಸಿಲಿವೆ.
ಪ್ಲಾಸ್ಟಿಕ್​ ಕಪ್​, ಪ್ಲೇಟ್​, ಸ್ಟ್ರಾಗಳ ಉತ್ಪಾದನೆಯೇ ಬಂದ್​; ಸರ್ಕಾರದಿಂದ ಘೋಷಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 9 =
Remember me
