|ಡಾ.ಮೇಖಲಾ ದ್ವಾರಕಾನಾಥ
ಲಕ್ಷ್ಮೀಯನ್ನು ಪೂಜಿಸದವರೇ ಇಲ್ಲ. ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ ವ್ರತದ ಬಗ್ಗೆ ತಿಳಿಸುವಂತೆ ಕೈಲಾಸ ಪರ್ವತದಲ್ಲಿ ಶೋಭಾಯಮಾನವಾಗಿ ಪಾರ್ವತಿಯು ಈಶ್ವರನನ್ನು ಕೇಳುತ್ತಾಳೆ. ವರಮಹಾಲಕ್ಷ್ಮಿಯ ಮೂಲಸಾರವನ್ನು ಲೋಕಶಂಕರನು ಹೇಳಿದ್ದಾನೆ. ಮೂಲವಾಗಿ ಮನುಷ್ಯನಿಗೆ ಬೇಕಾದ ಸಕಲ ಸಂಪತ್ತು, ಧನಧಾನ್ಯಾದಿ, ಪುತ್ರ ಪೌತ್ರಾದಿಗಳು, ದುಃಖವಿಲ್ಲದ, ಸುಖಗಳನ್ನು ಕರುಣಿಸುವ ವ್ರತವೇ ವರಮಹಾಲಕ್ಷ್ಮೀ ವ್ರತ. ಈ ವ್ರತವನ್ನು ಆಚರಿಸಿ ಅನೇಕ ಪುಣ್ಯಗಳನ್ನು ಮನುಷ್ಯನು ಪಡೆಯಬಹುದೆಂದು ಸಾಕ್ಷಾತ್ ಪರಮೇಶ್ವರನೇ ಹೇಳಿದ್ದಾನೆ. ಧೈರ್ಯ, ಕೀರ್ತಿ, ಯಶೋಲಾಭವನ್ನು ಕೊಡುವ ಈ ಮಹಾಲಕ್ಷ್ಮೀ ವ್ರತವನ್ನು ಆಚರಿಸಿ ಅದರ ಪ್ರಭಾವದಿಂದ ಸಕಲ ಸಂಪತ್ತು ಪಡೆದುಕೊಳ್ಳಬಹುದು. ಶ್ರಾವಣ ಮಾಸದ 2ನೇ ಶುಕ್ರವಾರವೇ ಲಕ್ಷ್ಮೀ ವ್ರತವೆಂದು ಶಾಸ್ತ್ರವೇ ನಿರ್ಣಯ ಮಾಡಿದೆ.
ಸ್ತ್ರೀಯರು ಸ್ನಾನಾದಿಗಳನ್ನು ಪೂರೈಸಿ, ಶೋಭಾಯಮಾನ ವಸ್ತುಗಳನ್ನು ಧರಿಸಿ, ಹೊಸ ಅಕ್ಕಿಯ ಮೇಲೆ, ಆಲದ ಬಳ್ಳಿಯನ್ನು ರಜತ, ತಾಮ್ರ ಕಲಶವನ್ನು ಇಟ್ಟು ವರಮಹಾಲಕ್ಷ್ಮಿಯನ್ನು ಆಹ್ವಾನಿಸಿ ಶುದ್ಧೋದಕಗಳಿಂದ ಅರ್ಚನೆ, ಫಲ, ಪಂಚಾಮೃತ ಅಭಿಷೇಕ ಮಾಡಬೇಕು. ಶುದ್ಧವಾದ ಆಕಳ ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು, ನಾನಾ ವಿಧವಾದ ಫಲಗಳನ್ನು ಇಟ್ಟು ನೈವೇದ್ಯ ಮಾಡಿ ಮಹಾಲಕ್ಷ್ಮೀ ಅಷ್ಟೋತ್ತರ ಸಹಸ್ರನಾಮವನ್ನು ಪಠಿಸಬೇಕು. ಬಿಳಿಯ ಪುಷ್ಪದಿಂದ ಅರ್ಚಿಸಿ, ದೇವರ ಸಾನಿಧ್ಯದಲ್ಲಿ ಇಟ್ಟ ದಾರವನ್ನು ಪತಿಯ ಕೈಯಿಂದಲೇ ಕಟ್ಟಿಸಿಕೊಳ್ಳಬೇಕು. ನೈವೇದ್ಯ ಮಾಡಿದ ಭಕ್ಷ್ಯಗಳನ್ನು ವೇದಶಾಸ್ತ್ರ ಶುದ್ಧ ಮನಸ್ಕನಾದ, ಜ್ಞಾನಿಯಾದ, ಲೋಭ, ಕಾಮ, ಕ್ರೋಧವಿಲ್ಲದ ಸತ್ಪುರಷನಿಗೆ ದಕ್ಷಿಣೆ, ತಾಂಬೂಲ ಸಮೇತ ನೀಡಬೇಕು. ಆನಂತರ ದೇವತಾ ಪ್ರಸಾದವನ್ನು ಬಂಧು-ಮಿತ್ರರೊಡಗೂಡಿ ಸೇವಿಸಬೇಕು.
ಈ ವ್ರತ ಪ್ರಭಾವದಿಂದ ಎಲ್ಲ ಸ್ತ್ರೀಯರು ಮುತ್ತು, ಮಾಣಿಕ್ಯ, ಹವಳ, ಪಚ್ಚ ಹಾರವನ್ನು ಧರಿಸಿ, ಕಾಲುಂಗುರ ನಾನಾವಿಧವಾದ ಯಥೋಚಿತವಾದ ಆಭರಣಗಳನ್ನು ದೇವಿಯ ಕೃಪೆಯಿಂದ ಹೊಂದಿ, ಐಶ್ವರ್ಯ ಒಂದೇ ಅಲ್ಲದೆ ಸಂತಾನಭಾಗ್ಯ, ಆಯುರಾರೋಗ್ಯ, ಧನಧಾನ್ಯ ಸೇರಿ ಎಲ್ಲ ಬಗೆಯ ಸಮೃದ್ಧಿಯನ್ನು ಪಡೆಯುವಂತೆ ಪ್ರಾರ್ಥಿಸಬೇಕು. ಮನುಷ್ಯಾದಿ ಎಲ್ಲ ಜೀವರಾಶಿಗಳು ಸುಖಸಂತೋಷಗಳನ್ನು, ರೋಗರಹಿತ ಶರೀರವನ್ನು ಹೊಂದುವಂತಾಗಬೇಕು. ವೈಯಕ್ತಿಕ ಏಳ್ಗೆಗಾಗಿ ಮಾತ್ರವಲ್ಲ ರಾಷ್ಟ್ರದ ಅಭ್ಯುದಯಕ್ಕಾಗಿಯೂ ಶ್ರದ್ಧೆಯಿಂದ ಪ್ರಾರ್ಥನೆ ಮಾಡಬೇಕು.
ಈ ವ್ರತಾಚರಣೆಯಿಂದ ಸಕಲ ಭೋಗಭಾಗ್ಯಗಳನ್ನು, ದುಃಖರಹಿತ ಜೀವನ, ಎಲ್ಲ ಕಾರ್ಯದಲ್ಲಿ ಜಯ, ಸಿದ್ಧಿ, ಸೌಭಾಗ್ಯವು ಲಭಿಸುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ ಎಂದು ಪಾರ್ವತಿಗೆ ಈಶ್ವರನೇ ವಾಗ್ದಾನ ಮಾಡಿದನು. ಈ ಐಶ್ವರ್ಯಪ್ರದವಾದ ವ್ರತವನ್ನು ಮಾಡಿದವರ ಸಂತೋಷ ಹೇಳತೀರದು. ಹಿರಿಯರಿಂದ ಬಂದಿದ್ದರೆ ಈ ವ್ರತಾಚರಣೆಯನ್ನು ತಪ್ಪದೇ ಮುಂದುವರಿಸಿರಿ.
ಸಂತೃಪ್ತವಾದ ಮನಸ್ಸು, ಜ್ಞಾನ, ಭಕ್ತಿ ಮಾರ್ಗವೇ ಈ ವ್ರತದ ಆಚರಣೆಗೆ ಸರಿಯಾದ ದಾರಿಯೆಂದು ಶಾಸ್ತ್ರವೇ ಹೇಳುತ್ತದೆ. ಮೂರು ಮಾತೆಯರಲ್ಲಿ ಮಹಾಲಕ್ಷ್ಮೀ-ಮಹಾಕಾಳಿ-ಮಹಾಸರಸ್ವತಿ ಐಕ್ಯರೂಪವೇ ಮುಖ್ಯವಾದದ್ದಾಗಿ ಮಹಾಕಾಳಿ ಮತ್ತು ಜ್ಞಾನ ಸರಸ್ವತಿ ಮಧ್ಯೆಯ ವರಮಹಾಲಕ್ಷ್ಮೀ ಕಂಗೊಳಿಸುತ್ತಾಳೆ. ಸುಜ್ಞಾನ ನೀಡಿ, ದ್ವೇಷವನ್ನು ತ್ಯಜಿಸಿ, ಲೋಕಹಿತವನ್ನು ಮಾಡುವವಳೇ ವರಮಹಾಲಕ್ಷ್ಮೀ. ಪ್ರತಿನಿತ್ಯವೂ ತ್ರಿಕಾಲದಲ್ಲಿ ಸದಾಸ್ಮರಣೆಯನ್ನು ಮಾಡಿ, ಪುಣ್ಯವನ್ನು ವೃದ್ಧಿಸಿ, ಸಂಕಷ್ಟದಿಂದ ಮುಕ್ತಗೊಳಿಸಿ ಲೋಕಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸೋಣ.
(ಲೇಖಕರು ಖ್ಯಾತ ವೈದ್ಯರು, ಹವ್ಯಾಸಿ ಬರಹಗಾರರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
