ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಠಾ(ಬಿ) ಗ್ರಾಮದ ಎಂ.ಟೆಕ್ ಪದವೀಧರ ಸೂರ್ಯಕಾಂತ ಕೋಳಿ ಐದು ತಿಂಗಳು ಏಕಾಂಗಿಯಾಗಿ ಬಾವಿ ತೋಡಿ, ಒಂದೂವರೆ ಎಕರೆ ಜಮೀನಿನಲ್ಲಿ ನಾನಾ ತರಹದ 400 ಗಿಡಗಳನ್ನು ನೆಟ್ಟು ಮಾದರಿ ಕೃಷಿಕನಾಗಿ ಹೊರಹೊಮ್ಮಿದ್ದಾರೆ. ಇಂಜಿನಿಯರಿಂಗ್ ಪದವಿ ಬಳಿಕ ಎಂ.ಟೆಕ್ (ಮಷಿನ್ ಡಿಸೈನ್) ಮುಗಿಸಿರುವ ಸೂರ್ಯ ಕಾಂತ, ಹೈದರಾಬಾದ್ ಕಾಲೇಜಿನಲ್ಲಿ ಒಂದು ವರ್ಷ ಉಪನ್ಯಾಸಕನಾಗಿದ್ದರು. 15 ತಿಂಗಳ ಹಿಂದೆ ಕರೊನಾ ವಿಷಮ ಪರಿಸ್ಥಿತಿ ಸಂದರ್ಭದಲ್ಲಿ ಏಕಾಂಗಿಯಾಗಿ ಶ್ರಮಪಟ್ಟು ಐದು ತಿಂಗಳಲ್ಲಿ 2530 ಅಡಿ ವಿಸ್ತೀರ್ಣದಲ್ಲಿ 14 ಅಡಿ ಬಾವಿ ತೆಗೆದಿದ್ದು, ಭರಪೂರ ನೀರು ಬಂದಿದೆ. ಒಂದೂವರೆ ಎಕರೆ ಜಮೀನಿನಲ್ಲಿ ನಿಂಬೆ, ಮಾವು, ಸಪೋಟಾ, ನುಗ್ಗೆ, ನೇರಳೆ, ಸೀತಾಫಲ, ಹುಣಸೆ, ಬೇವು, ತೆಂಗು ಸೇರಿ ವಿವಿಧ ಹಣ್ಣುಗಳ 400ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಸದ್ಯ ಜೀವನೋಪಾಯಕ್ಕೆ ದಿನಗೂಲಿ ಮಾಡುತ್ತಿರುವ ಸೂರ್ಯಕಾಂತ, ಮುಂದಿನ ದಿನಗಳಲ್ಲಿ ಎಮ್ಮೆ, ಆಕಳು, ಕುರಿ, ಕೋಳಿ ಸಾಕಣೆಯೊಂದಿಗೆ ಸಮಗ್ರ ಕೃಷಿ ಮಾಡುವ ಅಭಿಲಾಷೆ ಹೊಂದಿದ್ದಾರೆ.
ಎಂ.ಟೆಕ್ ಬಳಿಕ ಒಂದು ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದರೂ ತೃಪ್ತಿ ಸಿಗಲಿಲ್ಲ. ಇರುವ ಒಂದೂವರೆ ಎಕರೆಯಲ್ಲೇ ಕುಟುಂಬ ನೆಮ್ಮದಿಯಿಂದ ಬದುಕುವಂಥ ವಾತಾವರಣ ನಿರ್ವಿುಸಿಕೊಳ್ಳುವೆ. ಕಳೆದ ಮಳೆಗಾಲದಲ್ಲಿ ಬಾವಿಯೊಳಗೆ ಹೂಳು ತುಂಬಿದ್ದು, ಹೊರತೆಗೆಯಲು ಸರ್ಕಾರದ ನೆರವು ಸಿಕ್ಕರೆ ಅನುಕೂಲವಾಗುತ್ತದೆ.
|ಸೂರ್ಯಕಾಂತ ಕೋಳಿ
ರಾಯಬಾಗ ತಾಲೂಕು ಮರಾಕುಡಿ ಗ್ರಾಮದ ಮಲ್ಲಪ್ಪ ಅಂಗಡಿ ಒಟ್ಟು 22 ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಒಂದು ಎಕರೆ ಪ್ರದೇಶದಲ್ಲಿ ದೊಡ್ಡ ಕೃಷಿ ಹೊಂಡ ನಿರ್ವಿುಸಿಕೊಂಡು, 21 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಹೊಲದಲ್ಲಿ 4-5 ಬೋರ್​ವೆಲ್ ಇವೆ. ಆದರೆ, ಬೇಸಿಗೆಯಲ್ಲಿ ಅವುಗಳಿಂದ ಸಮರ್ಪಕ ನೀರು ಬರುವುದಿಲ್ಲ. ಹೀಗಾಗಿ, ದೊಡ್ಡ ಕೃಷಿ ಹೊಂಡ ನಿರ್ವಿುಸಿ ಮಳೆ ನೀರು ಹಾಗೂ ಬೋರ್​ವೆಲ್ ನೀರನ್ನೂ ಸಂಗ್ರಹಿಸಿ ಬೇಸಿಗೆಯಲ್ಲಿ ಅಚ್ಚುಕಟ್ಟಾಗಿ ಕೃಷಿ ಮಾಡುತ್ತಿದ್ದಾರೆ. ಕೃಷಿ ಹೊಂಡ ನಿರ್ವಣದಿಂದ ಬೋರ್​ವೆಲ್​ಗಳೂ ರಿಚಾರ್ಜ್ ಆಗುತ್ತಿವೆ. ಸಂಗ್ರಹಗೊಂಡ ನೀರಿನಲ್ಲಿ ಪಾಚಿಗಟ್ಟದಂತೆ ತಡೆಗಟ್ಟುವುದಕ್ಕೆ ಮೀನು ಸಾಕಾಣಿಕೆಯನ್ನೂ ಕೈಗೊಂಡಿದ್ದಾರೆ. 150150 ಅಗಲ ಹಾಗೂ 36 ಅಡಿ ಉದ್ದವಿರುವ ಕೃಷಿ ಹೊಂಡ ಅಂದಾಜು 4 ಕೋಟಿ ಲೀಟರ್​ನಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 21 ಎಕರೆಯಲ್ಲಿ ಕಬ್ಬು ಹಾಗೂ ತರಕಾರಿ ಪ್ರಮುಖವಾಗಿದ್ದು, ವರ್ಷಕ್ಕೆ 25 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.
ಕೃಷಿ ಹೊಂಡ ನಿರ್ವಿುಸಿಕೊಂಡಿದ್ದ ರಿಂದ ನೀರಿನ ಸಮಸ್ಯೆ ದೂರಾಗಿದೆ. ರಾಸಾಯನಿಕ ಬಳಸದೆ ಸಾವಯವ ಕೃಷಿ ಮಾಡುತ್ತಿದ್ದೇನೆ. ನನ್ನಂತೆ ರಾಯಬಾಗ, ಗೋಕಾಕ, ಮೂಡಲಗಿ ತಾಲೂಕಿನಲ್ಲಿ ಹಲವು ರೈತರು ದೊಡ್ಡ ಕೃಷಿಹೊಂಡ ನಿರ್ವಿುಸಿಕೊಂಡಿದ್ದಾರೆ.
|ಮಲ್ಲಪ್ಪಅಂಗಡಿ
ತೆರೆದ ಬಾವಿ ಹಾಗೂ ಕೊಳವೆ ಬಾವಿಗೆ ಮಳೆ ನೀರನ್ನು ಇಂಗಿಸುವ ಕಾರ್ಯಕ್ಕೆ ಯುವ ಸಮುದಾಯವನ್ನು ಪ್ರೇರೇಪಿಸುತ್ತಿರುವ ಉಡುಪಿ ಜಿಲ್ಲೆಯ ಕಲ್ಯಾಣಪುರ ನಿವಾಸಿ ಜೋಸೆಫ್ ಜಿ.ಎಂ. ರೆಬೆಲ್ಲೊ ಸರಳ ವಿಧಾನದಲ್ಲಿ ಜಲಸಂರಕ್ಷಣೆಯ ಜಾಗೃತಿ ಮೂಡಿಸುತ್ತಿದ್ದಾರೆ.
ಮಳೆ ನೀರಿನೊಂದಿಗೆ ಅನುಸಂಧಾನ ಜಲಶಕ್ತಿ, ಜಲಾಮೃತ, ಜಲೋತ್ಸವ, ಅಟಲ್ ಭೂಜಲ ಹಾಗೂ ಘನ, ದ್ರವ ಮತ್ತು ಪ್ಲಾಸ್ಟಿಕ್ ಸಂಪನ್ಮೂಲ ನಿರ್ವಹಣೆ ಎಂಬ ವಿಚಾರಗಳ ಮೇಲೆ ವಾರ್ಷಿಕ ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸಾಕ್ಷ್ಯತ್ರಗಳ ಮೂಲಕ ಮಾಹಿತಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಆಸಕ್ತರು ಕರೆದಲ್ಲಿಗೆ ತೆರಳಿ ನೀರಿಂಗಿಸುವ ಘಟಕಗಳನ್ನು ನಿರ್ವಿುಸಿಕೊಡುತ್ತಾರೆ. ನಿರ್ಜೀವ ಕೊಳವೆ ಬಾವಿಗೆ ಮರುಪೂರಣ ಮಾಡುವ ಮಾದರಿ ಘಟಕಗಳನ್ನು ನಿರ್ವಿುಸಿ ಯಶಸ್ಸು ಕಂಡಿದ್ದಾರೆ. ಜಲಸಂರಕ್ಷಣೆಗೆ ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ತರಬೇತುದಾರರಾಗಿ ಸರ್ಕಾರದ ಅನೇಕ ಯೋಜನೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಚಿತ್ರದುರ್ಗ ಜಲಾನಯನ ಇಲಾಖೆ ಕಂದಕ ಬದುಗಳ ನಿರ್ವಣದ ಮೂಲಕ ಮಳೆ ನೀರಿನ ಸಂರಕ್ಷಣೆ ಮಾಡಿ ಅಂತರ್ಜಲ ಹೆಚ್ಚಿಸಿ ಸಾವಿರಾರು ಎಕರೆ ಕೃಷಿಭೂಮಿಗೆ ಜೀವ ತುಂಬಿದೆ. 2009ರಿಂದ ಹೊಸದುರ್ಗ ತಾಲೂಕಿನ ಮತ್ತೋಡು ಹಾಗೂ ಶ್ರೀರಾಂಪುರ ಹೋಬಳಿಗಳಲ್ಲಿ ಯೋಜನೆ ಅನುಷ್ಠಾನಗೊಳಿಸಿದ್ದು, ಮಳೆ ನೀರು ಜಮೀನಿನಲ್ಲೇ ನಿಲ್ಲುವಂತೆ ಗುಂಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಗುಂಡಿಗಳ ಮಣ್ಣಿನಲ್ಲಿಯೇ ಬದುಗಳನ್ನು ನಿರ್ವಿುಸಲಾಗಿದೆ. 5 ಮೀಟರ್ ಉದ್ದ, 1 ಮೀಟರ್ ಅಗಲ ಹಾಗೂ 0.6 ಮೀಟರ್ ಆಳವಿರುವಂತೆ ನಿರ್ವಿುಸಲಾಗಿರುವ ಪ್ರತಿ ಗುಂಡಿ ಮೂರು ಸಾವಿರ ಲೀಟರ್ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ಇಂತಹ ನೂರು ಕಂದಕ ಹಾಗೂ ಬದುಗಳನ್ನು ನಿರ್ವಿುಸಬಹುದು. ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು ಮೂರು ಲಕ್ಷ ಲೀಟರ್ ನೀರು ಸಂಗ್ರಹಿಸಿ ಭೂಮಿಗೆ ಇಂಗಿಸಬಹುದು ಎನ್ನುತ್ತಾರೆ ತಜ್ಞರು. ಮಣ್ಣಿನ ಸವಕಳಿ ತಡೆಯಲು ಕೂಡ ಇದು ಪೂರಕವಾಗಿದೆ. ಒಂದು ಇಂಚು ಮಣ್ಣು ರಚನೆಯಾಗಲು 600 ವರ್ಷಗಳಷ್ಟು ಸಮಯ ಹಿಡಿಯುತ್ತದೆ. ಆದರೆ, ಒಂದೇ ಮಳೆಗೆ ಅಷ್ಟು ಮಣ್ಣು ಕೊಚ್ಚಿ ಹೋಗುತ್ತದೆ. ಇದರಿಂದ ಈ ಯೋಜನೆ ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನುತ್ತಾರೆ ಕೃಷಿ ತಜ್ಞರು. ಸದ್ಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾಗಿರುವ ಸಿ.ಎಸ್.ಈಶ ಅವರು ಜಲಾನಯನ ಇಲಾಖೆಯಲ್ಲಿದ್ದಾಗ ಈ ಕಾರ್ಯಕ್ಕೆ ಮುತುವರ್ಜಿ ವಹಿಸಿದ್ದರು.
ಜಲಾನಯನ ಇಲಾಖೆಯ ಮೂಲಕ ಮಳೆ ನೀರು ಇಂಗಿಸುವ ಹಾಗೂ ಶೇಖರಿಸಿ ಕೃಷಿ ಕಾರ್ಯಕ್ಕೆ ಒದಗಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಜಮೀನಿನಲ್ಲಿ ನಿರ್ವಿುಸಿದ ಗುಂಡಿ, ಬದುಗಳಿಂದ ಮರುಪೂರಣಕ್ಕೆ ಅನುಕೂಲವಾಗಿದೆ.
|ಸಿ.ಎಸ್.ಈಶಹೊಸದುರ್ಗ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಕರೊನಾದಿಂದಾಗಿ ಲಾಕ್​ಡೌನ್ ಜಾರಿಯಾದಾಗ ಮನೆ ಬಿಟ್ಟು ಹೊರಹೋಗದಂಥ ಪರಿಸ್ಥಿತಿ ಇತ್ತು. ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾದ ಧಾರವಾಡದ ಬಸವೇಶ್ವರ ಬಡಾವಣೆ, ಗುರುದೇವನಗರ, ನಂದಿನಿ ಲೇಔಟ್ ಹಾಗೂ ಶಾಕಾಂಬರಿ ನಗರ ನಿವಾಸಿಗಳ ಜಲ ಸಂರಕ್ಷಣೆಯ ಪಣ ‘ನಮ್ಮ ಕೆರೆ’ಯಾಗಿ ಮೈದಳೆದು ನಿಂತಿದೆ. 4 ಬಡಾವಣೆ ವ್ಯಾಪ್ತಿಯಲ್ಲಿ 1 ಎಕರೆ 5 ಗುಂಟೆ ವಿಸ್ತಾರದ ಕೆರೆ ಇತ್ತು. ಆದರೆ, ಹೂಳು ತುಂಬಿ ನೀರು ನಿಲ್ಲುತ್ತಿರಲಿಲ್ಲ. ಕೆಲವರಿಂದ ಅತಿಕ್ರಮಣ ಯತ್ನವೂ ನಡೆದಿತ್ತು. ಸ್ಥಳೀಯರು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಿದರೂ ಸ್ಪಂದನ ಸಿಕ್ಕಿರಲಿಲ್ಲ. ಲಾಕ್​ಡೌನ್ ಸಮಯದಲ್ಲಿ ಬಡಾವಣೆಯ ಪ್ರಮುಖರು ಕೆರೆಯ ಹೂಳು ತೆಗೆಸಿ, ಸುತ್ತಲೂ ಒಡ್ಡು ನಿರ್ವಿುಸುವ ನಿರ್ಧಾರ ಕೈಗೊಂಡರು. ಸರ್ಕಾರದ ಅನುದಾನ ಪಡೆಯದೆ ಸುಮಾರು ಸ್ವಂತವಾಗಿ 4 ಲಕ್ಷ ರೂ. ವೆಚ್ಚದಲ್ಲಿ ವಿಸ್ತಾರವಾದ ಕೆರೆ ನಿರ್ವಿುಸಿಕೊಂಡಿದ್ದಾರೆ. ‘ನಮ್ಮ ಕೆರೆ’ ಎಂದು ನಾಮಕರಣ ಮಾಡಿದ್ದಾರೆ. ಬಡಾವಣೆಗಳಲ್ಲಿ ಸುರಿಯುವ ಮಳೆ ನೀರು ಹರಿದು ಹೋಗುವುದನ್ನು ತಡೆದು, ಕೆರೆ ಸೇರುವಂತೆ ಮಾಡಿದ್ದಾರೆ. ಸ್ವಂತ ಖರ್ಚಿನಲ್ಲಿ ಸುತ್ತಲೂ ವಾಕಿಂಗ್ ಪಾತ್ ಹಾಗೂ ದಾರಿದೀಪ ಅಳವಡಿಸಿಕೊಂಡಿದ್ದಾರೆ.
ಹಾಸನ ತಾಲೂಕು ರಾಮದೇವರಪುರ ಮೂಲದ ಆರ್.ಜಿ.ಗಿರೀಶ್ ಎಂಟು ವರ್ಷಗಳಿಂದ ಜಲಾಂದೋಲನ ನಡೆಸುತ್ತಿದ್ದಾರೆ. 2014ರಲ್ಲಿ ಜಿಲ್ಲೆ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಜಲಕ್ಷಾಮ ಎದುರಾಯಿತು. ನೀರಿನ ಬವಣೆ ಸೃಷ್ಟಿಯಾಗಲು ಕಾರಣವೇನು ಎಂಬುದರ ಬಗ್ಗೆ ಕುತೂಹಲ ಮೂಡಿದ ಗಿರೀಶ್ ಹಳ್ಳಿ ಹಳ್ಳಿ ಸುತ್ತಿದರು. ಜನರೊಂದಿಗೆ ಮಾತನಾಡಿದರು. ಬಹುಪಾಲು ಕೆರೆ, ಕಟ್ಟೆ, ಕಲ್ಯಾಣಿಗಳು ನಿರ್ವಹಣೆ ಇಲ್ಲದೆ ಮುಚ್ಚಿ ಹೋಗಿರುವುದನ್ನು ಗಮನಿಸಿದರು.
ಜೀವಜಲ ಉಳಿಸಲು ನನ್ನೊಬ್ಬನಿಂದ ಆಗದು, ಅದಕ್ಕೆ ಜನಶಕ್ತಿಯೂ ಬೇಕು ಎಂಬುದನ್ನು ಅರಿತು ರೋವರ್ಸ್ ಜೀವಜಲ ಫೌಂಡೇಶನ್ ಎಂಬ ಸಂಸ್ಥೆಯೊಂದಿಗೆ ರ್ಚಚಿಸಿ ಅವರ ಸಹಕಾರ ಪಡೆದರು. ಸಮಾನಮನಸ್ಕರು, ಸಂಘ ಸಂಸ್ಥೆಗಳ ನೆರವಿನೊಂದಿಗೆ ಕಲ್ಯಾಣಿ ಹಾಗೂ ಕೆರೆಗಳನ್ನು ಸ್ವಚ್ಛಗೊಳಿಸಲು ಮುಂದಾದರು. ನೋಡ ನೋಡುತ್ತಿದ್ದಂತೆ 5 ಕಟ್ಟೆಗಳಲ್ಲಿ ನೀರಿನ ಸೆಲೆ ಉಕ್ಕಿತು. ಪಾಳು ಬಿದ್ದಿದ್ದ ನೂರು ಕಲ್ಯಾಣಿಗಳು ಸುಂದರವಾದವು. ಅಂತರ್ಜಲ ವೃದ್ಧಿಗೂ ಸಹಕಾರಿಯಾಯಿತು. ಗಿರೀಶ್ ಅವರು ಸೈಕಲ್ ಜಾಥಾ ಮೂಲಕ ಹಳ್ಳಿ ಹಳ್ಳಿಗೆ ಸುತ್ತಿ ಪರಿಸರ ಜಾಗೃತಿ ಮೂಡಿಸುವ ಕಾಯಕದಲ್ಲೂ ತೊಡಗಿದ್ದಾರೆ.
ಜಲಕ್ಷಾಮಕ್ಕೆ ಕಾರಣವೇನು ಎಂಬುದರ ಮೂಲ ಹುಡುಕಿದಾಗ ಬಳಕೆಯಾಗದ ಕಲ್ಯಾಣಿ, ಕೆರೆಗಳು ಕಣ್ಣಿಗೆ ಬಿದ್ದವು. ಅವುಗಳನ್ನು ಸ್ವಚ್ಛಗೊಳಿಸಿದರೆ ಎಷ್ಟೋ ಜೀವಗಳಿಗೆ ನೆರವಾಗಲಿದೆ ಎಂದು ಅಭಿಯಾನ ಆರಂಭಿಸಿದೆ. ಹಲವರು ಜತೆ ನಿಂತರು.
|ಆರ್.ಜಿ.ಗಿರೀಶ್
ಮಧ್ಯರಾತ್ರಿಯಲ್ಲಿ ಓಡೋ ಹುಡುಗ.. ಪರೀಕ್ಷೆಗೂ ಮೊದಲೇ ಸೇನಾಧಿಕಾರಿಯ ಮನಗೆದ್ದ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
