| ಶಿವಾನಂದ ತಗಡೂರು, ಬೆಂಗಳೂರುರಾಜ್ಯದ ಜಲಾಶಯಗಳ ನಿರ್ವಹಣೆಗೆ ಹೆಚ್ಚು ನಿಗಾ ವಹಿಸಿರುವ ಜಲಸಂಪನ್ಮೂಲ ಇಲಾಖೆ, ಈ ನಿಟ್ಟಿನಲ್ಲಿ ವಿಶೇಷ ಡ್ರೖೆವ್ ಮಾಡಲು ಮುಂದಾಗಿದೆ. ಜಲಾಶಯಗಳನ್ನು 10 ವರ್ಷದ ಅವಧಿಗೆ ನಿರ್ವಹಣೆ ಮಾಡಲು ವಿಶ್ವ ಬ್ಯಾಂಕ್​ನಿಂದ ಅಣೆಕಟ್ಟೆ ಪುನರ್​ವಸತಿ ಸುಧಾರಣೆ (ಡ್ರಿಪ್) ಯೋಜನೆ ಅಡಿಯಲ್ಲಿ 1500 ಕೋಟಿ ರೂ. ನೆರವು ನೀಡಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಎರಡು ಹಂತದಲ್ಲಿ ಯೋಜನೆ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ 750 ಕೋಟಿ ರೂ. ವೆಚ್ಚದಲ್ಲಿ ಕೆಆರ್​ಎಸ್, ಆಲಮಟ್ಟಿ ಸೇರಿ ಪ್ರಮುಖ ಜಲಾಶಯಗಳ ಮುಂಜಾಗ್ರತಾ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. 2ನೇ ಹಂತದಲ್ಲಿ 750 ಕೋಟಿ ರೂ. ವೆಚ್ಚದಲ್ಲಿ ಇನ್ನುಳಿದ ಜಲಾಶಯಗಳನ್ನು ನಿರ್ವಹಣೆ ಮಾಡಲು ಯೋಜಿಸಲಾಗಿದೆ.
ವಿಶ್ವ ಬ್ಯಾಂಕ್ ನೀಡುವ ಸಾಲದ ನೆರವಿಗೆ ಕೇಂದ್ರ ಸರ್ಕಾರ ಶೇ.70, ರಾಜ್ಯ ಸರ್ಕಾರ ಶೇ.30 ಹಣ ನೀಡಲಿದೆ. ಎರಡೂ ಸರ್ಕಾರಗಳು ಜಂಟಿಯಾಗಿ ವಿಶ್ವಬ್ಯಾಂಕ್ ಸಾಲವನ್ನು ಮರುಪಾವತಿಸಬೇಕಿದೆ.
ಜಲಾಶಯಗಳನ್ನು ನಿರ್ವಹಣೆ ಮಾಡಲು ಡ್ಯಾಂ ಸೇಫ್ಟಿ ರಿವೈವ್ (ಡಿಎಸ್​ಆರ್​ಪಿ) ವಿಭಾಗವೇ ಇದೆ. ಇದರ ಮುಖ್ಯ ಇಂಜಿನೀಯರ್ ನೇತೃತ್ವದಲ್ಲಿ ಯಾವ್ಯಾವ ಜಲಾಶಯಗಳಲ್ಲಿ ಏನೇನು ಸಮಸ್ಯೆ ಇದೆ? ತುರ್ತಾಗಿ ಆಗಬೇಕಾಗಿರುವ ಕೆಲಸಗಳು ಏನು? ಅಂದಾಜು ಎಷ್ಟು ಹಣ ಬೇಕಾಗುತ್ತದೆ? ಎನ್ನುವ ವಿವರ ಪಡೆದು ಯೋಜನೆ ನೀಲಿನಕ್ಷೆ ಸಿದ್ಧಪಡಿಸಲಾಗುತ್ತದೆ. ಅದರ ಆಧಾರದ ಮೇಲೆ ಯೋಜನೆಗಳಿಗೆ ಹಣ ಬಿಡುಗಡೆ ಆಗುವ ವ್ಯವಸ್ಥೆ ರೂಪುಗೊಳಿಸಲಾಗಿದೆ.
71 ಜಲಾಶಯಗಳು:ಜಲಸಂಪನ್ಮೂಲ ಇಲಾಖೆಯಲ್ಲಿ ಕೆಆರ್​ಎಸ್, ಹೇಮಾವತಿ, ಹಾರಂಗಿ, ಕಬಿನಿ, ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ, ಮಲಪ್ರಭಾ ಸೇರಿ 71 ಜಲಾಶಯಗಳಿವೆ. ಕೆಲ ಜಲಾಶಯಗಳು ಕರ್ನಾಟಕ ವಿದ್ಯುತ್ ನಿಗಮದಿಂದ ನಿರ್ವಹಣೆ ಆಗುತ್ತಿದ್ದರೆ, ಬಹುಪಾಲು ಜಲಾಶಯಗಳನ್ನು ಜಲಸಂಪನ್ಮೂಲ ಇಲಾಖೆಯೇ ನೋಡಿಕೊಳ್ಳುತ್ತಿದೆ.
ಹಿಂದೆಯೂ 500 ಕೋಟಿ ರೂ. ವೆಚ್ಚ:ರಾಜ್ಯದ ಜಲಾಶಯಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ನಿರ್ವಹಣೆ ಮಾಡಲು ಈ ಹಿಂದೆಯೂ ಸರ್ಕಾರ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 500 ಕೋಟಿ ರೂ. ವಿಶ್ವಬ್ಯಾಂಕ್ ಸಾಲವನ್ನು ಪಡೆದುಕೊಂಡಿತ್ತು. ಈ ಯೋಜನೆ ಮುಗಿದಿದ್ದರಿಂದ ಮತ್ತೊಂದು ಯೋಜನೆಯ ಮೂಲಕ 1500 ಕೋಟಿ ರೂ. ಸಾಲ ಪಡೆದುಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹೂಳು ತಡೆಯಲು ಕ್ರಮ:ಜಲಾಶಯಗಳಿಗೆ ಹೂಳು ತುಂಬುವುದನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಜಲಸಂಪನ್ಮೂಲ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ತುಂಗಭದ್ರಾದಲ್ಲಿ ಹೂಳು ಪ್ರಮಾಣ ಹೆಚ್ಚಾಗಿ ನೀರಿನ ಸಂಗ್ರಹ ಕಡಿಮೆ ಆಗಿರುವುದರಿಂದ ಉಂಟಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು ಎಂದು ತಿಳಿಸಲಾಗಿದೆ. ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ ಸಹಕಾರ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.
ಹಾರಂಗಿಗೆ ಹೂಳಿನ ಆತಂಕ:ಕೊಡಗಿನಲ್ಲಿ ಅತಿವೃಷ್ಟಿಯಾಗಿ ಗುಡ್ಡಗಳು ಕುಸಿದ ಪರಿಣಾಮ ಹಾರಂಗಿ ಜಲಾಶಯಕ್ಕೆ ಹರಿದು ಬರುವ ನೀರಿನಲ್ಲಿ ಹೂಳಿನ ಪ್ರಮಾಣ ಹೆಚ್ಚಾಗುತ್ತಿದೆ. ಆದ್ದರಿಂದ ಜಲಾಶಯಕ್ಕೆ ನೀರು ಹರಿದು ಬರುವ ಮೂಲಗಳಲ್ಲಿ ಚೆಕ್ ಡ್ಯಾಮ್ಳನ್ನು ನಿರ್ಮಾಣ ಮಾಡಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.
ಏನೇನು ಸುರಕ್ಷಾ ಕ್ರಮ?:ಜಲಾಶಯಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳು ವುದು, ನೀರಿನ ಸೋರಿಕೆ ಕಡಿಮೆ ಆಗುವಂತೆ ನೋಡಿಕೊಳ್ಳುವುದು, ಕ್ರಸ್ಟ್ ಗೇಟ್​ಗಳನ್ನು ಸುಸ್ಥಿತಿಯಲ್ಲಿಡುವುದು, ಡ್ರೌಟಿಂಗ್ ಮಾಡುವ ಮೂಲಕ ಅಣೆಕಟ್ಟನ್ನು ಇನ್ನಷ್ಟು ಶಕ್ತಿಯುತವಾಗಿಸಿ ಸುದೀರ್ಘ ಅವಧಿಗೆ ಬಾಳಿಕೆ ಬರುವಂತೆ ಮಾಡು ವುದು ಡ್ಯಾಂ ನಿರ್ವಹಣೆಯಲ್ಲಿ ಮಹತ್ವದ ಅಂಶಗಳು.
ವಿವಿ ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದ ವಿದ್ಯಾರ್ಥಿನಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 4 =
Remember me
