ಬೆಂಗಳೂರು:ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ಉತ್ಸವ ಭರ್ಜರಿಯಿಂದ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಭಾಗವಹಿಸುವ ಮುಖೇನ ‘ಬೆಂಗಳೂರು ಕಂಬಳ’ಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ. ಇದೇ ನವೆಂಬರ್​ 25-26 ರಂದು ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮಕ್ಕೆ ರಾಜ್ಯದ ಜನತೆ ಭಾರೀ ಉತ್ಸಾಹ ತೋರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ನಡುವೆ ಬೆಂಗಳೂರು ಕಂಬಳದ ಬಗ್ಗೆ ಒಂದಷ್ಟು ಕುತೂಹಲಕಾರಿ ಇಲ್ಲಿದೆ ಗಮನಿಸಿ.
ಇದನ್ನೂ ಓದಿ:ಅಕ್ರಮದ ವಿರುದ್ಧ ಸರ್ಜಿಕಲ್ ದಾಳಿ: ‘ಕೈ’ ಸುಡುತ್ತಿರುವುದು ಏಕೆ ನ್ಯಾಷನಲ್ ಹೆರಾಲ್ಡ್ ಹಗರಣ?
ಕರಾವಳಿ ಭಾಗಕ್ಕೆ ಸೇರಿದ ಸುಮಾರು 15 ರಿಂದ 20 ಲಕ್ಷ ಮಂದಿ ಸಿಲಿಕಾನ್​ ಸಿಟಿಯಲ್ಲಿ ವಾಸ್ತವ್ಯ ಹೂಡಿದ್ದು, ಎಲ್ಲರೂ ಕೂಡ ಕಂಬಳದಲ್ಲಿ ಭಾಗವಹಿಸಲಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. ಈ ಬಾರಿ ವಿಜೃಂಭಣೆಯಿಂದ ನಡೆಯಲಿರುವ ಬೆಂಗಳೂರು ಕಂಬಳದಲ್ಲಿ ಬರೋಬ್ಬರಿ 200 ಕೋಣಗಳು ಭಾಗಿಯಾಗಲಿವೆ ಎಂಬುದು ಮತ್ತಷ್ಟು ವಿಶೇಷ.
ಇನ್ನು ಈ ಬಗ್ಗೆ ಮಾತನಾಡಿರುವ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, “ಸುಮಾರು 228 ಜೋಡಿಗಳು ನೋಂದಾಯಿಸಿಕೊಂಡಿದ್ದವು. ಆದ್ರೆ, ಅದರ ಪೈಕಿ 200 ಜತೆ ಕೋಣಗಳನ್ನು ಮಾತ್ರ ಆಯ್ಕೆ ಮಾಡಿದ್ದೇವೆ. ಸಾಮಾನ್ಯವಾಗಿ ಕೋಣಗಳು ಓಡುವ ಪಥ 147 ಮೀ. ಉದ್ದವಿರುತ್ತದೆ. ಆದರೆ, ಇಲ್ಲಿ 155 ಮೀ. ಉದ್ದದ ಕರೆಯನ್ನು ನಿರ್ಮಿಸಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ:ನಾಯಕಿಯಾದ ಈ ಮೌಂಟ್​ ಕಾರ್ಮೆಲ್​ ಕಾಲೇಜಿನ ಹುಡುಗಿ ; ಹಳ್ಳಿ ಹುಡುಗಿ ಲುಕ್​ನಲ್ಲಿ ಬಿಂದು
“ಕಂಬಳಕ್ಕೆ 77.50- 78 ಕೋಟಿ ರೂ. ವೆಚ್ಚ ತಗಲುವ ನಿರೀಕ್ಷೆಯಿದ್ದು, ಸರ್ಕಾರ ಒಂದು ಕೋಟಿ ರೂ. ಅನುದಾನ ಪ್ರಕಟಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳು ಹಣ ಸಹಾಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಕೈಜೋಡಿಸಿವೆ” ಎಂದು ಅಶೋಕ್​ ತಿಳಿಸಿದರು.
ವಿಜೇತರ ಬಹುಮಾನ ವಿವರ ಹೀಗಿದೆ:ಬೆಂಗಳೂರು ಕಂಬಳದಲ್ಲಿ ವಿಜೇತರಾಗುವ ಕೋಣದ ಮಾಲೀಕರಿಗೆ 1 ಲಕ್ಷ ರೂ. ನಗದು, 16 ಗ್ರಾಂ ಸ್ವರ್ಣ ಕೊಡಲಾಗುತ್ತದೆ. ದ್ವಿತೀಯ ಸ್ಥಾನ ಗಳಿಸಿದವರಿಗೆ 50,000 ರೂ. ಜತೆಗೆ 2.8 ಗ್ರಾಂ ಚಿನ್ನ ಮತ್ತು ತೃತೀಯ ಸ್ಥಾನ ಪಡೆದವರಿಗೆ 25,000 ರೂ. ನಗದು ಹಾಗೂ 4 ಗ್ರಾಂ ಬಂಗಾರದ ಪದಕವನ್ನು ಬಹುಮಾನವಾಗಿ ನೀಡಲಾಗುತ್ತದೆ.
ಉತ್ತರಕಾಶಿ ಸುರಂಗ ಕುಸಿತ: ಅಂತಿಮ ಹಂತ ತಲುಪಿದ ರಕ್ಷಣಾ ಕಾರ್ಯಾಚರಣೆ; 41 ಕಾರ್ಮಿಕರು ಶೀಘ್ರವೇ ಹೊರಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
