ಆರ್​ವಿ ವಿಶ್ವವಿದ್ಯಾಲಯಕ್ಕೆ ಆಡಳಿತ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಕುಲಪತಿ ಅವರನ್ನು ಆಯ್ಕೆ ಮಾಡಲಾಗಿದೆ. ಡಾ. ವೈ.ಎಸ್.ಆರ್. ಮೂರ್ತಿ ಐಎಎಸ್ ಅಧಿಕಾರಿಯಾಗಿದ್ದವರು. ಮುಖ್ಯವಾಗಿ ಮಾನವ ಹಕ್ಕುಗಳ ಆಯೋಗದಲ್ಲಿ, ದೇಶದ ಐವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಜತೆಗೆ ಕಾರ್ಯನಿರ್ವಹಿಸಿದ ಅನುಭವವಿದೆ. ಡಾ. ಮನಮೋಹನ ಸಿಂಗ್ ಜತೆ ಮೂರು ವರ್ಷ ಹಣಕಾಸು ಇಲಾಖೆಯಲ್ಲಿ, ಎರಡು ವರ್ಷ ಪ್ರಧಾನಿ ಕಚೇರಿಯಲ್ಲಿ ಕಾರ್ಯನಿರ್ವಹಣೆ ಅನುಭವವಿದೆ. ದೆಹಲಿಯ ಕಾನೂನು ವಿವಿ ಸೇರಿ ಅನೇಕ ಸಂಸ್ಥೆಗಳಲ್ಲಿ ಕಾನೂನು ಬೋಧನೆ ಮಾಡಿದ್ದಾರೆ. 2009ರಲ್ಲಿ ಒಪಿ ಜಿಂದಾಲ್ ವಿಶ್ವವಿದ್ಯಾಲಯದ ಸಂಸ್ಥಾಪಕ ಸಿಬ್ಬಂದಿಯಾಗಿ, ನಂತರ 9 ವರ್ಷ ಅದೇ ವಿವಿಯಲ್ಲಿ ಕುಲಸಚಿವರಾಗಿದ್ದರು. ಈ ಅವಧಿಯಲ್ಲಿ ವಿವಿಯು ನ್ಯಾಕ್​ನಿಂದ ‘ಎ’ ಗ್ರೇಡ್ ಪಡೆದರೆ, ವಿಶ್ವದ 650 ವಿವಿಗಳಲ್ಲಿಯೂ ಸ್ಥಾನ ಪಡೆಯಿತು.
-ಆರ್​ವಿ ಶಿಕ್ಷಣ ಸಂಸ್ಥೆಗಳು ಉತ್ಕ ೃ್ಟ ಶಿಕ್ಷಣಕ್ಕೆ ಪ್ರಸಿದ್ಧಿಯಾಗಿವೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಎಂಬ, ಅನೇಕ ಗಣ್ಯರನ್ನೊಳಗೊಂಡ ಸಮಿತಿಯು ಈ ಸಂಸ್ಥೆಗಳನ್ನು ನಡೆಸುತ್ತಿದೆ. 80 ವರ್ಷದ ಹಿಂದೆ ವಿದ್ಯಾರ್ಥಿಗಳೊಂದಿಗೆ ಆರಂಭವಾದ ಸಂಸ್ಥೆಯ ಅಡಿ ಆರ್​ವಿ ಇಂಜಿನಿಯರಿಂಗ್ ಕಾಲೇಜು, ಎನ್​ಎಂಕೆಆರ್​ವಿಯಂತಹ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಡಾ. ಎಂ. ಕೆ. ಪಾಂಡುರಂಗ ಶೆಟ್ಟಿ ಅವರು ಈ ವಿಶ್ವವಿದ್ಯಾಲಯದ ಕುಲಪತಿಗಳು. 8 ದಶಕ ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿರುವ ಸಂಸ್ಥೆಯು ಪ್ರತ್ಯೇಕ ವಿವಿ ಸ್ಥಾಪಿಸಲು ಉದ್ದೇಶಿಸಿತು. ಈಗಾಗಲೆ ಮೈಸೂರು ರಸ್ತೆ ಆರ್​ವಿ ಇಂಜಿನಿಯರಿಂಗ್ ಕಾಲೇಜು ಬಳಿ ಆರ್​ವಿ ವಿಶ್ವವಿದ್ಯಾಲಯಕ್ಕೆ 25 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಜನಪ್ರತಿನಿಧಿಗಳ ಒತ್ತಾಸೆಯೂ ಇದಕ್ಕೆ ಸಿಕ್ಕಿದ ಪರಿಣಾಮ 2019ರ ಆರ್​ವಿ ವಿಶ್ವವಿದ್ಯಾಲಯ ಕಾಯ್ದೆ ಮೂಲಕ ವಿವಿ ಸ್ಥಾಪನೆ ಆಯಿತು. ಯುಜಿಸಿ ಕಾಯ್ದೆ ಅಡಿ ಮಾನ್ಯತೆ ಪಡೆದ ವಿವಿ 2021ರ ಜೂನ್ 16ರಂದು ಕಾರ್ಯಾರಂಭ ಮಾಡಿದೆ.
-ಎಲ್ಲ ಹಂತದ ಹಾಗೂ ಎಲ್ಲ ಕ್ಷೇತ್ರಗಳಲ್ಲೂ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ವಿದ್ಯಾರ್ಥಿಗಳ ಜೀವನ ರೂಪಿಸುವ ಗುರಿಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಹೊಂದಿದೆ. ಅದಕ್ಕೆ ಅನುಗುಣವಾಗಿಯೇ ಆರ್​ವಿ ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳೂ ರೂಪುಗೊಂಡಿವೆ. ತನ್ನ ಅಕಾಡೆಮಿಕ್ ಉತ್ಕೃಷ್ಠತೆಗೆ ಹೆಸರಾದ ವಿಶ್ವಮಟ್ಟದ ವಿಶ್ವವಿದ್ಯಾಲಯವಾಗುವುದು ಮುಖ್ಯ ಉದ್ದೇಶ. ಬೋಧನೆಗೆ ಸೀಮಿತವಾಗದೆ ಸಂಶೋಧನೆಗೆ ಒತ್ತು ನೀಡಲಾಗುತ್ತದೆ. ಸ್ತ್ರೀ-ಪುರುಷ, ವಿವಿಧ ಮತ ಧರ್ಮಗಳ, ಭಾಷಾ ಪ್ರದೇಶಗಳ ವಿದ್ಯಾರ್ಥಿಗಳ ಭೇದವಿಲ್ಲದೆ ವೈವಿದ್ಯಮಯ ವಿದ್ಯಾರ್ಥಿಗಳನ್ನು ಹೊಂದುವ ಗುರಿಯಿದೆ.
-ಖಂಡಿತ ಹೌದು. ಎನ್​ಇಪಿಯಲ್ಲಿ ಮುಖ್ಯವಾಗಿ ಆದರ್ಶ ಶಿಕ್ಷಣವನ್ನು(ಲಿಬರಲ್ ಎಜುಕೇಷನ್) ಪ್ರತಿಪಾದಿಸಲಾಗಿದೆ. ಆರ್​ವಿ ವಿಶ್ವವಿದ್ಯಾಲಯ ಈಗಾಗಲೆ ಲಿಬರಲ್ ಎಜುಕೇಷನ್​ನತ್ತ ಗಮನ ಹರಿಸಿದೆ. ಎರಡನೆಯದಾಗಿ, ಬೋಧನೆಗೆ ಸೀಮಿತವಾಗದೆ ಸಂಶೋಧನೆಗೆ ಒತ್ತು ನೀಡುವುದು ಎನ್​ಇಪಿ ಮೂಲೋದ್ದೇಶ. ಆರ್​ವಿ ವಿಶ್ವವಿದ್ಯಾಲಯ ಪಿಎಚ್​ಡಿ ಹಂತದಲ್ಲಷ್ಟೇ ಅಲ್ಲದೆ ಪದವಿ ಹಂತದಲ್ಲೆ ಸಂಶೋಧನೆಗೆ ಒತ್ತು ನೀಡುತ್ತದೆ.
-ಪ್ರಾರಂಭದಲ್ಲಿ ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಆಂಡ್ ಸೈನ್ಸಸ್, ಸ್ಕೂಲ್ ಆಫ್ ಡಿಸೈನ್ ಹಾಗೂ ಸ್ಕೂಲ್ ಆಫ್ ಎಕನಾಮಿಕ್ಸ್ ಆಂಡ್ ಫೈನಾನ್ಸ್ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್​ಡಿ ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಬಿಎ ಆನರ್ಸ್, ಬಿಎಸ್​ಸಿ ಆನರ್ಸ್ ಪದವಿ ಪಡೆಯಲಿದ್ದಾರೆ.2022ರಲ್ಲಿ ಕಾನೂನು ಮತ್ತು ಕಂಪ್ಯೂಟರ್ ಸೈನ್ಸ್ ಕಾರ್ಯಕ್ರಮಗಳು ಆರಂಭವಾಗಲಿವೆ. 2023ರಲ್ಲಿ ಜರ್ನಲಿಸಂ ಆಂಡ್ ಮಾಸ್ ಕಮ್ಯುನಿಕೇಷನ್, ಪಬ್ಲಿಕ್ ಪಾಲಿಸಿ ಕಾರ್ಯಕ್ರಮಗಳು ಚಾಲನೆ ಪಡೆಯಲಿವೆ. ಇದೀಗ 800 ವಿದ್ಯಾರ್ಥಿಗಳಿಂದ ಆರಂಭವಾಗಿ ಮುಂದಿನ 5 ವರ್ಷದಲ್ಲಿ 7 ಕಾರ್ಯಕ್ರಮಗಳಲ್ಲಿ 7 ಸಾವಿರ ವಿದ್ಯಾರ್ಥಿಗಳನ್ನು ಹೊಂದುವ ಗುರಿಯಿದೆ.
-ಆರ್​ವಿ ವಿಶ್ವವಿದ್ಯಾಲಯಕ್ಕೆ ಇಲ್ಲಿನ ಸಿಬ್ಬಂದಿಯೇ ಬೆನ್ನೆಲುಬು. ಈಗಾಗಲೆ ನಾವು ಬೋಧಕರನ್ನು ಆಯ್ಕೆ ಮಾಡಿಕೊಂಡಿದ್ದು, ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದವರೇ ಆಗಿದ್ದಾರೆ. ಫುಲ್​ಬ್ರೖೆಟ್ ಸ್ಕಾಲರ್​ಷಿಪ್, ರತನ್ ಟಾಟಾ ಸ್ಕಾಲರ್​ಷಿಪ್​ಗಳನ್ನು ಪಡೆದವರಿದ್ದಾರೆ. ಪ್ರತಿಷ್ಠಿತ ವಿವಿಗಳಿಂದ ಪದವಿ ಪಡೆದಿರುವುದಷ್ಟೇ ಅಲ್ಲದೆ ಅವರೇ ರೋಲ್ ಮಾಡೆಲ್ ಆಗಿದ್ದಾರೆ. ಉದಾಹರಣೆಗೆ ನಮ್ಮ ಕುಲಸಚಿವರಾದ ಡಾ. ಎಂ.ಎಸ್. ಕೃಪಾಶಂಕರ ಅವರೇ ಸ್ವತಃ ಸಂಶೋಧಕರಾಗಿದ್ದು, ಅನೇಕ ಪೇಟೆಂಟ್​ಗಳನ್ನು ಹೊಂದಿದ್ದಾರೆ. ಬೋಧನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಸಂಶೋಧನೆಯತ್ತ ಮಾರ್ಗದರ್ಶನ ಮಾಡಲಿದ್ದಾರೆ.
-ಖಂಡಿತ ಆರ್​ವಿ ವಿಶ್ವವಿದ್ಯಾಲಯದ ಶುಲ್ಕ ದುಬಾರಿಯಲ್ಲ. ಪಂ. ಶಿವಾನಂದ ಶರ್ಮ, ಡಿ.ಎ. ಪಾಂಡು, ಡಾ. ಎಂ. ಕೆ. ಪಾಂಡುರಂಗ ಶೆಟ್ಟಿ ಅವರಂತಹ ಅನೇಕರ ಕೊಡುಗೆಯಿಂದ ಈ ಸಂಸ್ಥೆ ನಡೆಯುತ್ತಿದೆ. ತಮ್ಮ ವೈಯಕ್ತಿಕ ಉದ್ಯಮ ಇದ್ದರೂ ಈ ಸಂಸ್ಥೆ ಸ್ಥಾಪಿಸಿದ್ದಾರೆ. ಸಮಾಜದ ಎಲ್ಲ ವರ್ಗಗಳಿಗೆ ಶಿಕ್ಷಣ ಲಭಿಸಬೇಕು ಎಂಬುದು ಸಂಸ್ಥೆಯ ಉದ್ದೇಶ. ಆರ್ಥಿಕ ಪರಿಸ್ಥಿತಿಯು ಪ್ರತಿಭಾನ್ವಿತರ ದಾರಿಗೆ ಅಡ್ಡಲಾಗಬಾರದು. ಹಾಗಾಗಿ ಆರ್​ವಿ ಟ್ರಸ್ಟ್ ತನ್ನ ಆದಾಯದ ಶೇ.10ನ್ನು ಮೆರಿಟ್ ಸ್ಕಾಲರ್​ಷಿಪ್​ಗೆ ವ್ಯಯಿಸುತ್ತದೆ. ನಮ್ಮಲ್ಲಿರುವ ಕೋರ್ಸ್​ಗಳಿಗೆ ಉತ್ತರ ಭಾರತದ ಅನೇಕ ವಿವಿಗಳು 8-9 ಲಕ್ಷ ರೂ. ಪಡೆಯುತ್ತವೆ. ಆದರೆ ನಮ್ಮ ಶುಲ್ಕ ಅದರ ಅರ್ಧಕ್ಕಿಂತಲೂ ಕಡಿಮೆ ಖಂಡಿತ ಇರುತ್ತದೆ.
-ಸಂಶೋಧನೆಗೆ ಸಹಾಯಕವಾಗುವಂತೆ ಬ್ರಿಟನ್ನಿನ ಎಸ್ಸೆಕ್ಸ್ ವಿವಿ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ವಿವಿ ಜತೆಗೆ ವಿದ್ಯಾರ್ಥಿ, ಸಿಬ್ಬಂದಿ ವಿನಿಮಯ ನಡೆಯಲಿದೆ. ಇಲ್ಲಿನ ವಿದ್ಯಾರ್ಥಿಗಳು ಎಸ್ಸೆಕ್ಸ್​ನಲ್ಲಿ ಓದಬಹುದು ಅಥವಾ ಡ್ಯುಯೆಲ್ ಡಿಗ್ರಿ ಪಡೆಯಬಹುದು. ನ್ಯೂಯಾರ್ಕ್​ನ ಸಿಯೆನ್ನಾ ಕಾಲೇಜ್ ನ್ಯೂಯಾರ್ಕ್ ಜತೆಗೆ, ಬಲ್ಗೇರಿಯಾದ ಸೋಫಿಯಾ ವಿವಿ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸೋಫಿಯಾ ವಿವಿ ಮೂಲಕ ಆರ್​ವಿ ವಿವಿ ವಿದ್ಯಾರ್ಥಿಗಳು ಯೂರೋಪಿಯನ್ ಯೂನಿಯನ್ ಪ್ರವೇಶ ಪಡೆಯಬಹುದು. ಇದರ ಜತೆಗೆ ಸಿನ್​ಸಿನಾಟಿ ಬಿಜಿನೆಸ್ ಸ್ಕೂಲ್ ಸೇರಿ ಅನೇಕ ಸಂಸ್ಥೆಗಳ ಜತೆ ಒಪ್ಪಂದ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಡಿಸಿಷನ್ ಸೈನ್ಸ್ ಈಗ ಪ್ರಾಧಾನ್ಯತೆ ಪಡೆಯುತ್ತಿದೆ. ವಿಖ್ಯಾತ ಮೂ ಸಿಗ್ಮಾ ಸಂಸ್ಥೆಯ ಜತೆಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. 4 ವರ್ಷದ ಬಿಎಸ್​ಸಿ ಪದವಿ ಜತೆಗೆ ಮೂ ಸಿಗ್ಮಾ ಇಂಟರ್ನ್​ಷಿಪ್ ಮಾಡುವ ಅವಕಾಶ ವಿದ್ಯಾರ್ಥಿಗಳಿಗೆ ಲಭಿಸಲಿದೆ. ಮುಂದಿನ 5 ವರ್ಷದಲ್ಲಿ ಇಂತಹ 250ಕ್ಕೂ ಹೆಚ್ಚು ಒಪ್ಪಂದಗಳ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ನೀಡಲಾಗುತ್ತದೆ. ನಮ್ಮ ವಿವಿ ಈಗಾಗಲೆ ಎನ್​ಇಪಿ ಜಾರಿ ಆರಂಭಿಸಿದೆ. ಅನೇಕ ಮೇಜರ್ ಹಾಗೂ ಮೈನರ್​ಗಳ ನಡುವೆ ಆಯ್ಕೆಗೆ ಅವಕಾಶವಿದೆ. ತಮ್ಮ ಕ್ಷೇತ್ರದ ಹೊರತಾಗಿಯೂ ಬೇರೆ ಕ್ಷೇತ್ರದ ಮೈನರ್ ವಿಷಯಗಳನ್ನು ಅಧ್ಯಯನ ಮಾಡಬಹುದಾಗಿದೆ.
ಆರ್​ವಿ ವಿಶ್ವವಿದ್ಯಾಲಯದ ಲೋಗೊ ವಿಶಿಷ್ಠವಾಗಿದ್ದು, ಜಾಗತಿಕ ಆಕರ್ಷಣೆ ಜತೆಗೆ ಭಾರತೀಯ ಮೌಲ್ಯಗಳನ್ನು ಒಳಗೊಂಡಿದೆ. ಮೂರು ಅಂಶಗಳ ಆಧಾರದಲ್ಲಿ ಲೋಗೊ ರೂಪಿಸಲಾಗಿದೆ. ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಭವಿಷ್ಯದ ಬೀಜ ಬಿತ್ತನೆ ಮಾಡುತ್ತದೆ, ತಮ್ಮಲ್ಲಿರುವ ಜ್ಞಾನವನ್ನು ವರ್ಧನೆ ಮಾಡಿಕೊಳ್ಳುತ್ತ ಆ ಬೀಜವು ಬೆಳೆಯುವುದನ್ನು ಸೂಚಿಸುತ್ತದೆ. ಆ ಬೀಜವು ಬೆಳೆದು ವೃಕ್ಷವಾಗುವುದನ್ನು ಅಂತಿಮ ಭಾಗ ತೋರಿಸುತ್ತದೆ. ಪುಸ್ತಕವು ಜ್ಞಾನದ ಪ್ರತೀಕವಾಗಿದ್ದು, ಸೂರ್ಯನ ಚಿತ್ರವು ಸೃಷ್ಟಿಯನ್ನು ಬಿಂಬಿಸುತ್ತದೆ. ಲೋಗೊ ಅಡಿಯಲ್ಲಿ ಪ್ರಜ್ಞಾಃ ಹಾಗೂ ಧೀರಾಃ ಎಂಬ ಸಂಸ್ಕೃತ ಪದಗಳು ಜ್ಞಾನದಾಹಿ ಹಾಗೂ ಜ್ಞಾನದ ಮಹಾ ಸಾಗರವನ್ನು ಪ್ರತಿನಿಧಿಸುತ್ತದೆ. ಆರ್​ವಿ ವಿಶ್ವವಿದ್ಯಾಲಯದ ಹೆಸರಿನ ಕೆಳಗೆ ‘ಗೊ. ಚೇಂಜ್ ದಿ ವರ್ಲ್ಡ್’ ಎಂದು ಬರೆದಿದ್ದು, ವಿದ್ಯಾರ್ಥಿಗಳು ವಿಶ್ವದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿರೀಕ್ಷೆ ಹೊಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
