ಹಾವೇರಿ: ನವೆಂಬರ್​​ 1 ರಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ದಿನದಲ್ಲಿ ಎಲ್ಲರೂ ಹೆಚ್ಚಾಗಿ ಕನ್ನಡದ ಬಗೆಗೆ ಮಾತನಾಡುತ್ತಾ, ಕನ್ನಡದ ಇತಿಹಾಸವನ್ನು ನೆನಪಿಸಿಕೊಳ್ಳುತ್ತಾ, ವಿವಿಧ ಕಾರ್ಯಕ್ರಮಗಳನ್ನು ಮಾಡುವುದು ವಾಡಿಕೆ. ಆದರೆ ಹಾವೇರಿಯ ಬಸ್​​ ಚಾಲಕ ಕನ್ನಡಿಗ ಶಶಿ ಬೋಸ್ಲೆ, ನೆವೆಂಬರ್​​ 1 ಕನ್ನಡ ಅಲ್ಲ. ಬದಲಾಗಿ ನಂಬರ್​​ 1 ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುವ ಶಶಿ ಬೋಸ್ಲೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಸರ್ಕಾರಿ ವಾಹನವನ್ನು ಸಂಪೂರ್ಣ ಕನ್ನಡಮಯವನ್ನಾಗಿ ಮಾಡಿದ್ದಾರೆ. ಬಸ್​​ನ ಒಳಗೆ ಕರ್ನಾಟಕ ಮತ್ತು ಕನ್ನಡ ಭಾಷೆಯ ಕುರಿತಾದ ಸಂಪೂರ್ಣ ಮಾಹಿತಿಗಳು, ನಕ್ಷೆಗಳು, ಚಿತ್ರಗಳಿವೆ. ಬಸ್​ನ ಹೊರಭಾಗದ ಎರಡೂ ಕಡೆಗಳಲ್ಲಿ ರಾಷ್ಟ್ರ ಪ್ರೇಮಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸ್ವಾತಂತ್ರ್ಯ ಹೋರಾಟಗಾರು, ಸಂತ ಶರಣರು, ವಚನಕಾರರು, ಕನ್ನಡದ ಮೇರು ನಟರು ಮುಂತಾದವರ ಭಾವಚಿತ್ರಗಳಿವೆ. ದೇಶ, ಭಾಷೆ, ಕರ್ನಾಟಕದ ಸಂಪತ್ತಿನ ಕುರಿತು ಮಾಹಿತಿ ನೀಡುವ ಬಸ್​​ ಇದಾಗಿದೆ.
ಈ ಮಾಹಿತಿಗಳು ಬಸ್​​ನಲ್ಲಿ ಬರುವ ಪ್ರಯಾಣಿಕರಿಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಸದ್ಯ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಈ ಬಸ್ಸಿನ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
