|ಮಂಜುನಾಥ ಕೋಳಿಗುಡ್ಡಬೆಳಗಾವಿ
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ವಿಧಾನಮಂಡಲ ಅಧಿವೇಶನದಲ್ಲಿ ವಸತಿ, ಊಟೋಪಚಾರ ಖರ್ಚು ವೆಚ್ಚದ ಮೇಲೆ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಲಿದೆ. ಎಲ್ಲ ರೀತಿಯ ಬೆಲೆಗಳ ಏರಿಕೆಯಿಂದಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಸಮಿತಿ ರಚಿಸಿ ಕಠಿಣ ನಿಯಮ ರೂಪಿಸಲು ಮುಂದಾಗಿದೆ.
ಡಿ.19ರಿಂದ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಭಾಗಗಳಿಂದ ಬೆಳಗಾವಿ ಜಿಲ್ಲೆಗೆ 224 ಕ್ಷೇತ್ರಗಳ ಶಾಸಕರು, 75 ವಿಧಾನ ಪರಿಷತ್ತಿನ ಸದಸ್ಯರು, ಮಾಧ್ಯಮದವರು, ವಿವಿಧ ಇಲಾಖೆ ಹಿರಿಯ, ಕಿರಿಯ ಅಧಿಕಾರಿಗಳು, ವಿಧಾನಸಭೆ, ವಿಧಾನಪರಿಷತ್ ಅಧಿಕಾರಿಗಳು, ಸಿಬ್ಬಂದಿ, ವಾಹನ ಚಾಲಕರು ಸೇರಿ ಸುಮಾರು 6 ಸಾವಿರಕ್ಕೂ ಅಧಿಕ ಜನರು ಆಗಮಿಸುತ್ತಿದ್ದಾರೆ. ಇವರಿಗಾಗಿಯೇ 75 ಲಾಡ್ಜ್​ಗಳಲ್ಲಿನ ಸುಮಾರು 2 ಸಾವಿರ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದೆ.
ಈ ಬಾರಿ ಪೆಟ್ರೋಲ್, ಡೀಸೆಲ್, ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್​ಗಳಲ್ಲಿ ಉಪಾಹಾರ, ಊಟ, ಲಾಡ್ಜ್​ಗಳಲ್ಲಿನ ಕೊಠಡಿಗಳ ದಿನದ ಬಾಡಿಗೆ ಹಾಗೂ ಖಾಸಗಿ ವಾಹನಗಳ ಬಾಡಿಗೆ ಕೂಡ ಹೆಚ್ಚಾಗಿದೆ. ಇದರಿಂದಾಗಿ ಈ ವರ್ಷ ಚಳಿಗಾಲ ಅಧಿವೇಶನ ವೆಚ್ಚ 20 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೋಟೆಲ್​ಗಳಲ್ಲಿ ರೂಂ ಬಾಡಿಗೆ ದರ, ಊಟೋಪಚಾರ ದರಗಳನ್ನು ನಿಗದಿ ಮಾಡಲು, ದುಂದು ವೆಚ್ಚಗಳ ಮೇಲೆ ನಿಗಾ ವಹಿಸಲು ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ಸಮಿತಿ ರಚನೆ ಮಾಡಲು ನಿರ್ಧರಿಸಿದೆ.
ಚಳಿಗಾಲದ ಅಧಿವೇಶನ ವೇಳೆ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ವಿವಿಧ ಸಮಿತಿ ರಚಿಸಲಾಗುತ್ತಿದೆ. ವಾಹನಗಳ ಬಾಡಿಗೆ, ವಸತಿ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ವಸತಿ, ಊಟಕ್ಕೆ ನಿಯಮ ಮೀರಿ ಖರ್ಚು ಮಾಡಿದರೆ ಸಂಬಂಧಿಸಿದವರಿಂದಲೇ ಭರಿಸಲಾಗುವುದು. ಕಡಿಮೆ ಖರ್ಚಿನಲ್ಲಿ ಅಧಿವೇಶನ ನಡೆಸಲು ಎಲ್ಲ ಕ್ರಮ ವಹಿಸಲಾಗಿದೆ.
|ನಿತೇಶ ಪಾಟೀಲ್ಜಿಲ್ಲಾಧಿಕಾರಿ
2006ರಲ್ಲಿ ನಡೆದ ಮೊದಲ ಅಧಿವೇಶನಕ್ಕಾಗಿ (5 ದಿನ) ಸರ್ಕಾರವು 5 ಕೋಟಿ ರೂ. ವೆಚ್ಚ ಮಾಡಿತ್ತು. 2009ರಲ್ಲಿ (8ದಿನ) ಚಳಿಗಾಲ ಅಧಿವೇಶನಕ್ಕಾಗಿ 14 ಕೋಟಿ ರೂ. ಹೀಗೆ ಪ್ರತಿ ಚಳಿಗಾಲ ಅಧಿವೇಶನದಲ್ಲಿ ಖರ್ಚು-ವೆಚ್ಚ ಹೆಚ್ಚಾಗುತ್ತಿದೆ. ಬೆಳಗಾವಿಯಲ್ಲಿ 2006ರಿಂದ 2021ರವರೆಗೆ ನಡೆದ ಅಧಿವೇಶನದ ಖರ್ಚಿಗಾಗಿ ಸರ್ಕಾರವು ಸುಮಾರು 130 ಕೋಟಿ ರೂ. ವೆಚ್ಚ ಮಾಡಿದೆ.
ನಿನ್ನೆ ಸಂಭ್ರಮದಲ್ಲಿದ್ದ ಯುವತಿ ಇಂದಿಲ್ಲ; ಸಂಬಂಧಿಕರ ಸಮಾರಂಭದಲ್ಲಿ ಕುಸಿದು ಬಿದ್ದು ಸಾವು..

ಭೀಕರ ಅಪಘಾತ: ಕರ್ನಾಟಕ-ತಮಿಳುನಾಡು ಗಡಿಗೋಪುರಕ್ಕೇ ಡಿಕ್ಕಿ ಹೊಡೆದು ಮಗುಚಿ ಬಿದ್ದ ಲಾರಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − 4 =
Remember me
