ಶ್ರೀಕಾಂತ್ ಶೇಷಾದ್ರಿಬೆಂಗಳೂರು:ದತ್ತಾಂಶ ಆಧಾರಿತ ಸರ್ಕಾರಿ ಕಾರ್ಯಕ್ರಮಗಳ ನಿರ್ವಹಣೆ, ಅನುಷ್ಠಾನದ ಬಗ್ಗೆ ಬಹು ಕಾಲದಿಂದಲೂ ಚರ್ಚೆ ನಡೆಯುತ್ತಿದೆ. ಕರೊನಾ ಆಪತ್ಕಾಲದಲ್ಲಿ ಅಸಂಘಟಿತ ಕಾರ್ವಿುಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಆಗಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ಹಿಂದಿನಿಂದ ದತ್ತಾಂಶ ಕ್ರೋಡೀಕರಣದಲ್ಲಿ ತೋರಿರುವ ಅನಾಸಕ್ತಿ ಬೆಳಕಿಗೆ ಬಂದಿದೆ.
ಆರೋಗ್ಯ ಕ್ಷೇತ್ರದ ಕೊರತೆಗಳನ್ನು ಹೊರಹಾಕಿದ್ದ ಕರೊನಾ ಸ್ಥಿತಿ ಇದೀಗ ದತ್ತಾಂಶ ಸಂಗ್ರಹಣೆ ಕೂಡ ಪರಿಪಕ್ವವಾಗಿಲ್ಲ ಎಂಬುದನ್ನು ನಿರೂಪಿಸಿದೆ. ಲಾಕ್​ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ ಕೆಲವು ವರ್ಗಕ್ಕೆ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಎಷ್ಟು ಫಲಾನುಭವಿಗಳಿಗೆ ಪರಿಹಾರ ನೀಡಬೇಕೆಂಬ ಬಗ್ಗೆಯೇ ಸ್ಪಷ್ಟತೆ ಇಲ್ಲದಿರುವುದು ವಾಸ್ತವ. ಆಟೋ, ಕ್ಯಾಬ್ ಚಾಲಕರಿಗೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಈಗ ಸೇವಾಸಿಂಧು ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗಿದೆ.
ಇದನ್ನೂ ಓದಿ:ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!
ಅಂದರೆ ಸರ್ಕಾರಕ್ಕೂ ಎಷ್ಟು ಚಾಲಕರು ಪ್ಯಾಕೇಜ್​ನ ಫಲಾನುಭವಿಗಳೆಂಬ ಸ್ಪಷ್ಟತೆ ಇಲ್ಲ. ಈಗಿನ ಪ್ರಸ್ತಾವನೆ ಪ್ರಕಾರ 7.75 ಲಕ್ಷ ಚಾಲಕರು ಫಲಾನುಭವಿಗಳಾಗಬಹುದು. ಅದಕ್ಕಿಂತ ಹೆಚ್ಚಿನ ಅರ್ಹ ಅಪೇಕ್ಷಿತರು ಬೇಡಿಕೆ ಇಟ್ಟರೆ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕುವುದು ನಿಶ್ಚಿತ. ಇಲ್ಲಿ ಚಾಲಕರದ್ದು ಒಂದು ಉದಾಹರಣೆಯಷ್ಟೇ, ಉಳಿದ ಯಾವುದೇ ಅಸಂಘಟಿತ ಕ್ಷೇತ್ರದ ಕಾರ್ವಿುಕರ ಮಾಹಿತಿ ಕೂಡ ಸರ್ಕಾರದಲ್ಲಿ ಇಲ್ಲ. ಎಲ್ಲವೂ ಅಂದಾಜಿನ ಲೆಕ್ಕದಲ್ಲೇ ನಡೆಯುತ್ತದೆ. ಚಿನ್ನಬೆಳ್ಳಿ ಕೆಲಸ ಮಾಡುವ ಅಕ್ಕಸಾಲಿಗರು, ರ್ದಜಿಗಳು, ಬೀದಿಬದಿ ವ್ಯಾಪಾರಿಗಳು, ಮರಗೆಲಸ ಮಾಡುವವರು ಹೀಗೆ ಬೇರೆ ಬೇರೆ ವೃತ್ತಿಯವರು ‘ನಮಗೂ ಪರಿಹಾರ ನೀಡಿ’ ಎಂದು ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಆದರೆ, ಸರ್ಕಾರದ ಬಳಿ ಅಂಕಿ ಅಂಶಗಳೇ ಇಲ್ಲ.
ಲೆಕ್ಕ ಯಾರ ಜವಾಬ್ದಾರಿ?: ಹಾಗೂ ಹೀಗೂ ಕಾರ್ವಿುಕ ಇಲಾಖೆ ಕಟ್ಟಡ ಕಾರ್ವಿುಕರ ನೋಂದಣಿ ಮಾಡಿಕೊಂಡಿದೆ. ಅದೂ ಪರಿಪೂರ್ಣವಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ವಲಸೆ ಕಾರ್ವಿುಕರ ಬಗ್ಗೆಯಂತೂ ಊಹಾತ್ಮಕ ಮಾಹಿತಿಗಳಷ್ಟೇ.
ಇನ್ನು ಯಾವ ವೃತ್ತಿಯವರು ಎಷ್ಟಿದ್ದಾರೆ, ನೋಂದಣಿ ಮತ್ತು ಅಂಕಿ-ಸಂಖ್ಯೆ ನಿರ್ವಹಣೆ ಅಸಾಧ್ಯವೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಅಸಾಧ್ಯವೆಂಬುದು ಯಾವುದೂ ಇಲ್ಲ ಎಂದು ಹೇಳುತ್ತಾರೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಎಂಬ ಪ್ರತ್ಯೇಕ ವ್ಯವಸ್ಥೆ ಇದೆ. ಈ ಇಲಾಖೆ ವಿವಿಧ ಇಲಾಖೆಯಿಂದ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಅಗತ್ಯವಿರುವಾಗ ನೆರವಾಗುತ್ತದೆ. ಈ ಇಲಾಖೆ ಜವಾಬ್ದಾರಿ ತೆಗೆದುಕೊಂಡು ವಿವಿಧ ಇಲಾಖೆಗಳ ಮೂಲಕ ನೋಂದಣಿ ಮತ್ತು ನಿರ್ವಹಣೆ ಮಾಡಲು ಅವಕಾಶವಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಇದನ್ನೂ ಓದಿ:ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !
ಕಾರ್ವಿುಕ ಇಲಾಖೆ ಕಾರ್ವಿುಕರ ನಿಖರ ವಿವರಣೆ ದಾಖಲಿಸಬಹುದು, ಜತೆಗೆ ಬೀದಿಬದಿ ವ್ಯಾಪಾರಿಗಳ ಮಾಹಿತಿ ಸಂಗ್ರಹಿಸಬಹುದು. ಕೈಗಾರಿಕೆ ಇಲಾಖೆ ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಯಲ್ಲಿ ಕೆಲಸ ಮಾಡುವ ಪ್ರತಿ ನೌಕರನ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವುದು ಕಷ್ಟವಲ್ಲ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳು ವಿವಿಧ ವೃತ್ತಿನಿರತರ ಮಾಹಿತಿ ಸಂಗ್ರಹಿಸಿಕೊಳ್ಳಬಹುದು. ಈ ಕೆಲಸ ಇಷ್ಟು ದಿನವಂತೂ ಆಗಿಲ್ಲ. ಇನ್ನು ಮುಂದಾದರೂ ‘ಆಧಾರ್’ ಆಧಾರಿತವಾಗಿ ಸಂಗ್ರಹಿಸಿ ಇಟ್ಟುಕೊಂಡು ಚುನಾವಣೆ ಮತದಾರ ಪಟ್ಟಿಯಂತೆ ಆಗಿಂದಾಗ್ಗೆ ಪರಿಷ್ಕರಣೆ ಮಾಡಿಕೊಂಡರೆ ಹಲವು ಉಪಯೋಗವಾಗಬಹುದೆಂಬ ಅಭಿಪ್ರಾಯ ಸರ್ಕಾರದಲ್ಲಿದೆ. ರಾಜ್ಯದಲ್ಲಿ ಕೋಟಿಗೂ ಮೀರಿ ಕಟ್ಟಡ ಕಾರ್ವಿುಕರು ಇದ್ದರೂ ಕೇವಲ 24 ಲಕ್ಷ ಕಾರ್ವಿುಕರಷ್ಟೇ ನೋಂದಣಿಯಾಗಿದ್ದಾರೆ.
ದತ್ತಾಂಶ ನಿರ್ವಹಣೆ ಉಪಯೋಗ
1. ಸರ್ಕಾರ ಫಲಾನುಭವಿ ಗುರುತಿಸುವಾಗ ಕಷ್ಟವಾಗಲ್ಲ. ಅರ್ಹರಿಗೆ ಅವಕಾಶ ಸಿಗುತ್ತದೆ
2. ತುರ್ತ ಸಂದರ್ಭದಲ್ಲಿಯೂ ಆಕಾಂಕ್ಷಿ ಅರ್ಜಿ ಸಲ್ಲಿಸಿ ಬೇಡಿಕೆಯಿಡುವ ಅಗತ್ಯವಿರಲ್ಲ
3. ಸಂಘಟನೆಗಳು ಕೊಟ್ಟ ಮಾಹಿತಿ ಅನುಸರಿಸಿ ಫಲಾನುಭವಿ ಆಯ್ಕೆ ತಪ್ಪುತ್ತದೆ
4. ಯೋಜನೆಗಳನ್ನು ರೂಪಿಸುವಾಗ ಸರ್ಕಾರಕ್ಕೆ ಸ್ಪಷ್ಟ ಚಿತ್ರಣ ಸಿಗುತ್ತದೆ
5. ಸರ್ಕಾರ ಯೋಜನೆಗಳ ಮಾಹಿತಿಯನ್ನು ಸುಲಭವಾಗಿ ಸಂಬಂಧಪಟ್ಟವರಿಗೆ ತಲುಪಿಸಬಹುದು
ಇದನ್ನೂ ಓದಿ:ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..
ಸರ್ಕಾರಕ್ಕೆ ಸವಾಲು: ಅಸಂಘಟಿತ ವಲಯದಲ್ಲಿ 44 ವರ್ಗದವರು ಬರುತ್ತಾರೆ. ಅವರ ದತ್ತಾಂಶ ತೆಗೆದು ಕೊಳ್ಳುವುದು ಸರ್ಕಾರಕ್ಕೆ ಸವಾಲಾಗಿದೆ.ಆಯೋಗದ ವರದಿ ಮಾಹಿತಿ: ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಸಾಮಾಜಿಕ ಆರ್ಥಿಕ ಗಣತಿಯನ್ನು ಸರ್ಕಾರ ವಿವಿಧ ಕಾರಣಕ್ಕೆ ಒಪ್ಪಿಲ್ಲ. ಅಪೂರ್ಣ ವರದಿ, ರಾಜಕೀಯ ಉದ್ದೇಶಿತ ವರದಿ ಎಂಬ ನೆಪಗಳನ್ನು ಹೇಳುತ್ತಿದೆ. ಆದರೆ, ನಿಖರವಾಗಲ್ಲದಿದ್ದರೂ ತಕ್ಕಮಟ್ಟಿಗೆ ಸರ್ಕಾರಕ್ಕೆ ಅಗತ್ಯವಾದ ಮಾಹಿತಿ ಈ ವರದಿಯಲ್ಲಿ ಸಿಗುತ್ತಿತ್ತು ಎಂಬ ಮಾತೂ ಇದೆ. ಸಿದ್ದರಾಮ್ಯಯ ಸಿಎಂ ಆಗಿದ್ದಾಗ ಹಿಂದುಳಿದ ವರ್ಗದ ಆಯೋಗದ ಮೂಲಕ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಿದ್ದರು. ಆದರೆ, ಮೈತ್ರಿ ಸರ್ಕಾರದ ಅವಧಿಯಲ್ಲಿ ಮತ್ತು ಈ ಸರ್ಕಾರ ವರದಿಯನ್ನು ಒಪ್ಪಿಕೊಳ್ಳಲಿಲ್ಲ.
ಸಾಕಪ್ಪಾ ಸಾಕು, ಇನ್ನು ಯಾವತ್ತೂ ಕಾಂಗ್ರೆಸ್ ಅಧ್ಯಕ್ಷ ಆಗುವುದಿಲ್ಲ ಎಂದ ರಾಹುಲ್ ಗಾಂಧಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − fifteen =
Remember me
