ಸುಬ್ರಹ್ಮಣ್ಯ(ದ.ಕ.):ಕೆಲವು ತಿಂಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯದಿಂದ ಹಳೆಯ ಸ್ಕೂಟರಲ್ಲಿ ದೇಶ ಸುತ್ತಿದ ತಾಯಿ ಹಾಗೂ ಮಗ ಪಯಣ ಮುಗಿಸಿ ಮಂಗಳವಾರ ಮತ್ತೆ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಮೈಸೂರಿನ ಕೃಷ್ಣಕುಮಾರ್​(44) ತನ್ನ ತಾಯಿ ಚೂಡರತ್ನಮ್ಮ(72) ಜತೆ ಹಳೇ ಸ್ಕೂಟರ್​ನಲ್ಲಿ ದೇಶಾದ್ಯಂತ ಸಂಚರಿಸಿದ್ದರು. ತಾಯಿ ಜತೆ ಧಾರ್ಮಿಕ ಕ್ಷೇತ್ರಗಳ ಸುತ್ತಾಟ ಆರಂಭಿಸಿದ್ದ ಕೃಷ್ಣ ಕುಮಾರ್​, ಆಗಸ್ಟ್​ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ ತಮ್ಮ ಪಯಣ ಆರಂಭಿಸಿ ಧರ್ಮಸ್ಥಳ, ಪುತ್ತೂರು, ವಿಟ್ಲ ಬಳಿಕ ಕೇರಳ, ತಮಿಳುನಾಡು, ರಾಮೇಶ್ವರ, ಕನ್ಯಾಕುಮಾರಿ ಮೊದಲಾದ ಹಲವು ಕ್ಷೇತ್ರಗಳನ್ನು ಸಂದರ್ಶಿಸಿದ್ದರು. ಸುಮಾರು 63,449 ಕಿಲೋಮೀಟರ್​ ಸುತ್ತಾಡಿದ್ದಾರೆ.
2018ರಲ್ಲಿಯೂ ತಾಯಿ ಜತೆ ಮೈಸೂರಿನಿಂದ ಸ್ಕೂಟರ್​ನಲ್ಲಿ ಪ್ರವಾಸ ಆರಂಭಿಸಿದ್ದ ಇವರು ನೇಪಾಳ, ಭೂತಾನ್​, ಮ್ಯಾನ್ಮಾರ್​ ಸುತ್ತಿದ್ದರು. ಆ ಸಂದರ್ಭ ಕರೊನಾ ವ್ಯಾಪಿಸಿದ ಹಿನ್ನೆಲೆಯಲ್ಲಿ ಸುತ್ತಾಟ ಅರ್ಧದಲ್ಲೇ ಸ್ಥಗಿತಗೊಳಿಸಿದ್ದರು.
ಮೋದಿ ಕುರಿತು ವಿವಾದಾತ್ಮಕ ಡಾಕ್ಯುಮೆಂಟರಿ ಪ್ರದರ್ಶನ: ಜೆಎನ್​ಯು ವಿವಿಯಲ್ಲಿ ಕಲ್ಲು ತೂರಾಟ

ಇನ್ನು ಮುಂದೆ ಹಾಫ್ ಹೆಲ್ಮೆಟ್ ಹಾಕಿದ್ರೆ ದಂಡ ಗ್ಯಾರಂಟಿ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
