|ಕೀರ್ತಿನಾರಾಯಣ ಸಿ.ಬೆಂಗಳೂರು
ಮಕ್ಕಳು, ಮಹಿಳೆಯರ ‘ಕಳ್ಳ’ಸಾಗಾಣಿಕೆ ನಿಯಂತ್ರಣಕ್ಕೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಂಡರೂ ರಾಜ್ಯದಲ್ಲಿ ಮಾನವ ಕಳ್ಳಸಾಗಾಣಿಕೆ ಜಾಲವನ್ನು ತಹಬದಿಗೆ ತರಲಾಗಿಲ್ಲ. ಇನ್ನೊಂದೆಡೆ, ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ 854 ಇಂತಹ ಪ್ರಕರಣಗಳು ವರದಿಯಾಗಿ ಆರೋಪಿಗಳನ್ನು ಬಂಧಿಸಿದ್ದರೂ ಈವರೆಗೆ ಒಬ್ಬರಿಗೂ ಜೈಲು ಶಿಕ್ಷೆಯಾಗಿಲ್ಲ! ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಬಹುತೇಕ ಪ್ರಕರಣಗಳು ಕೋರ್ಟ್​ನಲ್ಲಿ ಖುಲಾಸೆ ಯಾಗುತ್ತಿರುವುದು ಆರೋಪಿಗಳಿಗೆ ವರದಾನವಾಗಿದೆ.
ಮಾನವ ಕಳ್ಳಸಾಗಾಣಿಕೆಯು ಪ್ರಪಂಚದ ಅತಿದೊಡ್ಡ ಉದ್ಯಮಗಳಲ್ಲೊಂದು ಎಂದು ಗುರುತಿಸಿಕೊಂಡಿದೆ. ಶೇ.46 ಪ್ರಮಾಣದಲ್ಲಿ ವೇಶ್ಯಾವಾಟಿಕೆ ಕಾರಣಕ್ಕೆ, ಶೇ.26 ಬಾಲಕಾರ್ವಿುಕ ಪದ್ಧತಿಗೆ ಹಾಗೂ ಶೇ.26 ಭಿಕ್ಷಾಟನೆ ಸೇರಿ ಇನ್ನಿತರ ಕಾರಣಗಳಿಗಾಗಿ ಮಾನವ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಅಂತಾರಾಷ್ಟ್ರೀಯ ಕಾರ್ವಿುಕ ಸಂಘಟನೆ ಮಾಹಿತಿ ಪ್ರಕಾರ ಮಾನವ ಕಳ್ಳಸಾಗಾಣಿಕೆಗೆ ಒಳಗಾದ 24.9 ಮಿಲಿಯನ್ ಮಂದಿ ಬಲವಂತದ ಕಾರ್ವಿುಕ ಪದ್ಧತಿಗೆ ಒಳಗಾಗಿದ್ದಾರೆ. ಇದರಲ್ಲಿ 16 ಮಿಲಿಯನ್ ಜನ ಮನೆಗೆಲಸ, ಕಟ್ಟಡ ನಿರ್ಮಾಣ ಹಾಗೂ ಕೃಷಿ ಕ್ಷೇತ್ರದಲ್ಲಿ ಕಾರ್ವಿುಕರಾಗಿದ್ದಾರೆ. 4.8 ಮಿಲಿಯನ್ ಮಂದಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ. ಕಳ್ಳಸಾಗಾಣಿಕೆ ಜಾಲಕ್ಕೆ ಸಿಲುಕಿದ ನಾಲ್ವರು ಸಂತ್ರಸ್ತರ ಪೈಕಿ ಒಬ್ಬರು ಅಪ್ರಾಪ್ತರಾಗಿದ್ದಾರೆ.
ಎನ್​ಸಿಆರ್​ಬಿ ಅಂಕಿ-ಅಂಶದ ಪ್ರಕಾರ ಕರ್ನಾಟಕದಲ್ಲಿ 2016ರಿಂದ 2020ರವರೆಗೆ 854 ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ವರದಿಯಾಗಿವೆ. ಆದರೆ, ಯಾವ ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ. ಶಿಕ್ಷೆ ಪ್ರಮಾಣ ಶೇ.0 ಇದೆ. ದೇಶದಲ್ಲಿ ವಾರ್ಷಿಕ ಸರಾಸರಿ 3500 ಕೇಸ್ ಪತ್ತೆಯಾಗುತ್ತಿದ್ದು, 5 ವರ್ಷದಲ್ಲಿ 17,186 ಪ್ರಕರಣ ವರದಿಯಾಗಿವೆ. ಅಪರಾಧಿಗಳಿಗೆ ಜೈಲು ಶಿಕ್ಷೆಯ ಪ್ರಮಾಣ ಸರಾಸರಿ ಶೇ.20ಕ್ಕಿಂತ ಕಡಿಮೆ ವರದಿಯಾಗಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಮಾನವ ಕಳ್ಳಸಾಗಣೆ ಪ್ರಕರಣ ವರದಿಯಾಗಿವೆ. ರಾಜ್ಯದಲ್ಲಿ 2021ರಲ್ಲಿ 15 ಕೇಸ್ ವರದಿಯಾಗಿವೆ. 2018ರಲ್ಲಿ 147, 2019ರಲ್ಲಿ 154, 2020ರಲ್ಲಿ 116 ಪ್ರಕರಣ ದಾಖಲಾಗಿವೆ. ಇದರಲ್ಲಿ ಬೆಂಗಳೂರಲ್ಲೇ 305 ಪ್ರಕರಣ ದಾಖಲಾಗಿವೆ. ಒಟ್ಟಾರೆ ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಶೇ.25 ಕೇಸ್​ಗಳಷ್ಟೇ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದು, ಬಹುತೇಕ ಪ್ರಕರಣಗಳು ಗಮನಕ್ಕೇ ಬರುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗಾಗಿ ವಿವಿಧ ತನಿಖಾ ಘಟಕಗಳಿದ್ದರೂ ನಾಮ್ೇವಾಸ್ತೆಗೆ ಎಂಬಂತಾಗಿವೆ.
ರಾಜ್ಯದಲ್ಲಿ 30 ಎಎಚ್​ಟಿ ಘಟಕ:ಮಾನವ ಕಳ್ಳಸಾಗಣೆ ನಿಯಂತ್ರಣಕ್ಕಾಗಿಯೇ ಕರ್ನಾಟಕದಲ್ಲಿ ಜಿಲ್ಲೆಗೊಂದರಂತೆ 30 ಆಂಟಿ ಹ್ಯೂಮನ್ ಟ್ರಾಫಿಕಿಂಗ್ (ಎಎಚ್​ಟಿ) ಘಟಕಗಳನ್ನು ಆರಂಭಿಸಲಾಗಿದೆ. ತನಿಖಾ ಪಡೆಗಳನ್ನು ಬಲಪಡಿಸಲೆಂದೇ ಕೇಂದ್ರ ಸರ್ಕಾರ ಈವರೆಗೆ ರಾಜ್ಯಕ್ಕೆ 3.88 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಕೋರ್ಟ್​ನಲ್ಲಿ ಖುಲಾಸೆ:2018ರಲ್ಲಿ ಆಂಧ್ರಪ್ರದೇಶದಲ್ಲಿ 240 ಮಾನವ ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 219 ಕೇಸ್​ಗಳು ಕೋರ್ಟ್​ನಲ್ಲಿ ಖುಲಾಸೆಯಾಗಿವೆ. 2019ರಲ್ಲಿ ವರದಿಯಾದ 245 ಕೇಸ್​ಗಳಲ್ಲಿ 186 ಪ್ರಕರಣ ಖುಲಾಸೆಯಾಗಿವೆ. ಶಿಕ್ಷೆ ಪ್ರಮಾಣ ಶೇ.21 ಇದೆ.
ಮಾನವ ಕಳ್ಳಸಾಗಣೆಯ ಟಾಪ್-10 ರಾಜ್ಯಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 6 =
Remember me
