ದೇವನಹಳ್ಳಿ:ಇದೀಗ ದೇಶದಲ್ಲೇ ಮೊದಲ ಬಾರಿಗೆ ಕೆಂಪೇಗೌಡ ಏರ್ಪೋಟ್ ನಲ್ಲಿ ವಿಶೇಷ ಚೇತನರಿಗಾಗಿ ಹೊಸ‌ ಸೌಲಭ್ಯ ಆರಂಭಿಸಲಾಗಿದೆ. ಇನ್ನು ಮುಂದೆ ವಿಶೇಷಚೇತನರು ಸಾಮಾನ್ಯರ ನಡುವೆ ಕಷ್ಟಪಟ್ಟು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
ವಿಮಾನದಲ್ಲಿ ಪ್ರಯಾಣಿಸುವ ವಿಶೇಷಚೇತನ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಈ ಹೊಸ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಏರ್ಪೋಟ್​ಗೆ ಬರುವ ಪ್ರತಿಯೊಬ್ಬ ವಿಶೇಷಚೇತನರಿಗೆ ಪ್ರತ್ಯೇಕ ಸಿಬ್ಬಂದಿ ಮತ್ತು ಸಾಲಿನ ವ್ಯವಸ್ಥೆ ಇರಲಿದೆ. ಇನ್ನು ಟ್ಯಾಗ್ ಮೂಲಕ ವಿಶೇಷ ಚೇತನರು ನೇರವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ.
ನಿಲ್ದಾಣದಲ್ಲಿರುವ ಟರ್ಮಿನಲ್​ನಿಂದ ವಿಮಾನ ಹತ್ತುವ ತನಕ ಬೇಕಾದ ಸಹಾಯವನ್ನು ವಿಶೇಷವಾಗಿ ನಿಯೋಜಿಸಿರುವ ಸಿಬ್ಬಂದಿ ಮಾಡಲಿದ್ದಾರೆ. ಈ ಸಿಬ್ಬಂದಿ ವಿಶೇಷಚೇತನರಿಗೆ ಯಾವುದೇ ರೀತಿ ಚಾರ್ಜ್​ ಮಾಡದೇ ಉಚಿತವಾಗಿ ವೀಲ್​ಚೇರ್ ಮೂಲಕ ಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಲಿದ್ದಾರೆ. ಇದರ ಜೊತೆಗೆ ಬೋರ್ಡಿಂಗ್ ಪಾಸ್ ತೆಗೆದು ಕೊಡಲು ಮತ್ತು ಬೇಕಾದಲ್ಲಿಗೆ ಕರೆದುಕೊಂಡು ಹೋಗಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಅದಲ್ಲದೇ ಈ ಸಿಬ್ಬಂದಿ ಕಿವುಡರಿಗೆ ಕೈಸನ್ನೆ ಭಾಷೆಯಲ್ಲೆ ಸಹಾಯ ಮಾಡಲೂ ತರಬೇತಿ ಪಡೆದಿದ್ದಾರೆ.ಈ ವಿಶೇಷ ಸೌಲಭ್ಯವನ್ನು ಸನ್​ ಫ್ಲವರ್ ಲ್ಯಾನಿಯಾರ್ಡ್ ಸಂಸ್ಥೆ ಮೂಲಕ ಜಾರಿಗೆ ತರಲಾಗಿದೆ. ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಶಿಷ್ಟ ಮಾದರಿ ಯೋಜನೆಗೆ ಚಾಲನೆ ಸಿಕ್ಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − seven =
Remember me
