ಹುಬ್ಬಳ್ಳಿ:ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಹಾವೇರಿಯ ಶ್ರೀ ಮಹಾದೇವಪ್ಪ ಮೈಲಾರ ರೈಲು ನಿಲ್ದಾಣದಲ್ಲಿ ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ ಹಾಗೂ ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗಿದೆ.
ಜ.5 ರಿಂದ 9ರವರೆಗೆ ಬೆಳಗಿನಜಾವ 2.28/2.30ಕ್ಕೆ ಕೆಎಸ್​ಆರ್​ ಬೆಂಗಳೂರು- ಬೆಳಗಾವಿ, ರಾತ್ರಿ 11.50/11.52ಕ್ಕೆ ಬೆಳಗಾವಿ – ಕೆಎಸ್​ಆರ್​ ಬೆಂಗಳೂರು, 7ರಂದು ರಾತ್ರಿ 7.18/ 7.20ಕ್ಕೆ ಯಶವಂತಪುರ – ಚಂಡಿಗಢ, ಚಂಡಿಗಢ- ಯಶವಂತಪುರ, 6ರಂದು ಸಂಜೆ 5.58/6 ಗಂಟೆಗೆ ತಿರುಚಿರಪಲ್ಲಿ- ಶ್ರೀಗಂಗಾನಗರ, 6 ಮತ್ತು 8ರಂದು ಸಂಜೆ 4.50/4.52ಕ್ಕೆ ಯಶವಂತಪುರ- ಬಿಕಾನೆರ, 5ರಂದು ಬೆಳಗ್ಗೆ 9.03/9.05ಕ್ಕೆ ಬಾರ್ಮರ್​ -ಯಶವಂತಪುರ ರೈಲುಗಳಿಗೆ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.
ವಿಶೇಷ ರೈಲು:ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಲಾಗಿದೆ. ಯಶವಂತಪುರ- ಎಸ್​ಎಸ್​ಎಸ್​ ಹುಬ್ಬಳ್ಳಿ -ಯಶವಂತಪುರ ಸ್ಪೆಷಲ್​ ಎಕ್ಸ್​ಪ್ರೆಸ್​ ರೈಲು (ಒಂದು ಟ್ರಿಪ್​) ಜ. 5ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಟು, ಮಾರನೇ ದಿನ ಬೆಳಗ್ಗೆ 7.50ಕ್ಕೆ ಎಸ್​ಎಸ್​ಎಸ್​ ಹುಬ್ಬಳ್ಳಿ ನಿಲ್ದಾಣ ತಲುಪುವುದು. 6ರಂದು ಬೆಳಗ್ಗೆ 11.30ಕ್ಕೆ ಎಸ್​ಎಸ್​ಎಸ್​ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ಈ ರೈಲು, ಅದೇ ದಿನ ರಾತ್ರಿ 7.30ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ-ಎಸ್​ಎಸ್​ಎಸ್​ ಹುಬ್ಬಳ್ಳಿ- ಯಶವಂತಪುರ ಸ್ಪೆಷಲ್​ ಎಕ್ಸ್​ಪ್ರೆಸ್​ (1 ಟ್ರಿಪ್​) ರೈಲು 6ರಂದು ರಾತ್ರಿ 10.30ಕ್ಕೆ ಯಶವಂತಪುರದಿಂದ ಹೊರಟು, ಮಾರನೇ ದಿನ ಬೆಳಗ್ಗೆ 5.30ಕ್ಕೆ ಎಸ್​ಎಸ್​ಎಸ್​ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. 7ರಂದು ಬೆಳಗ್ಗೆ 8.30ಕ್ಕೆ ಎಸ್​ಎಸ್​ಎಸ್​ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು, ಅದೇ ದಿನ ಸಂಜೆ 5 ಗಂಟೆಗೆ ಯಶವಂತಪುರ ತಲುಪಲಿದೆ.
ಯಶವಂತಪುರ- ಎಸ್​ಎಸ್​ಎಸ್​ ಹುಬ್ಬಳ್ಳಿ ಸ್ಪೆಷಲ್​ ಎಕ್ಸ್​ಪ್ರೆಸ್​ (ಒನ್​ ವೇ) ರೈಲು 7ರಂದು ರಾತ್ರಿ 9.50ಕ್ಕೆ ಹೊರಟು, ಮಾರನೇ ದಿನ ಬೆಳಗಿನಜಾವ 5.20ಕ್ಕೆ ಎಸ್​ಎಸ್​ಎಸ್​ ಹುಬ್ಬಳ್ಳಿ ತಲುಪುವುದು.ಎಸ್​ಎಸ್​ಎಸ್​ ಹುಬ್ಬಳ್ಳಿ- ಎಸ್​ಎಂಎಂ ಹಾವೇರಿ ಸ್ಪೆಷಲ್​ ಎಕ್ಸ್​ಪ್ರೆಸ್​ (ಒನ್​ ವೇ ರೈಲು) 8ರಂದು ಸಂಜೆ 6 ಗಂಟೆಗೆ ಎಸ್​ಎಸ್​ಎಸ್​ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ರಾತ್ರಿ 7.40ಕ್ಕೆ ಎಸ್​ಎಂಎಂ ಹಾವೇರಿ ನಿಲ್ದಾಣ ತಲುಪುವುದು.
ಎಸ್​ಎಂಎಂ ಹಾವೇರಿ- ಯಶವಂತಪುರ ಸ್ಪೆಷಲ್​ ಎಕ್ಸ್​ಪ್ರೆಸ್​ (ಒನ್​ ವೇ) ರೈಲು 8ರಂದು ರಾತ್ರಿ 11 ಗಂಟೆಗೆ ಹೊರಟು, ಮಾರನೇ ದಿನ ಬೆಳಗಿನಜಾವ 5.20ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ ರೈಲು ನಿಲ್ದಾಣದಲ್ಲಿ ಡ್ರಮ್​ನಿಂದ ದುರ್ವಾಸನೆ… ತೆರೆದು ನೋಡಿದ್ರೆ ಅಪರಿಚಿತ ಯುವತಿಯ ಶವ!

ಆನೇಕಲ್​ನಲ್ಲಿ ಈ ನಾಗರಹಾವಿನ ನಡೆಯೇ ವಿಚಿತ್ರ-ವಿಸ್ಮಯ! ಹಾವು ನೋಡಲು ಜನವೋ ಜನ

ಬೆಂಗ್ಳೂರಲ್ಲಿ ಕಿಡ್ನ್ಯಾಪ್​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಘಾಟ್​ನಲ್ಲಿ ಶವ! ಕರವೇ ಅಧ್ಯಕ್ಷ ಸೇರಿ ಐವರ ಬಂಧನ, 9 ತಿಂಗಳ ಬಳಿಕ ರಹಸ್ಯ ಬಯಲಾಗಿದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
