ಯಾದಗಿರಿ:ಜಿಲ್ಲೆಯ ಗುರಮಠಕಲ್ ತಾಲೂಕಿನ‌ ಕಂದಕೂರ ಗ್ರಾಮದಲ್ಲಿನ‌ ನಾಗರ ಪಂಚಮಿ ಹಬ್ಬವಾದ ಮಂಗಳವಾರದಂದು ಜನತೆ ವಿಷಪೂರಿತ ಚೇಳುಗಳೊಡನೆ ಆಟವಾಡಿ ಸಂಭ್ರಮಿಸಿದರು. ಕಂದಕೂರ ಗ್ರಾಮದ ಕೊಂಡಾಮ್ಮಾಯಿ ಬೆಟ್ಟದಲ್ಲಿ ಪ್ರತಿವರ್ಷ ನಾಗರಪಂಚಮಿ ಹಬ್ಬದಂದು ಈ ವಿಸ್ಮಯ ನಡೆಯುತ್ತದೆ.
ನಾಗರಪಂಚಮಿಯ ದಿನ ದೇಶಾದ್ಯಂತ ನಾಗರಾಜನಿಗೆ ಪೂಜೆ ನಡೆದರೆ, ಈ ಗ್ರಾಮದಲ್ಲಿ ಚೇಳಿನ‌ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ಅಂದು ಈ ಬೆಟ್ಟದಲ್ಲಿನ ಒಂದು ಸಣ್ಣ ಕಲ್ಲು ತೆಗೆದರೂ ಸಾಕು ಹಿಂಡು ಹಿಂಡಾಗಿ ಚೇಳುಗಳು ಕಾಣಸಿಗುತ್ತವೆ. ಜನತೆ ಅವುಗಳನ್ನು ಹಿಡಿದು ಆಟವಾಡುತ್ತಾರೆ. ಆದರೆ ಅದು ಯಾರಿಗೂ ಕಚ್ಚದಿರುವುದು ವಿಜ್ಞಾನ ಲೋಕಕ್ಕೆ ಸವಾಲಾಗಿದೆ.
ಈ ವಿಸ್ಮಯ ವೀಕ್ಷಿಸಲೆಂದೇ ಯಾದಗಿರಿ ಜಿಲ್ಲೆ ಸೇರಿದಂತೆ ನೆರೆಯ ತೆಲಂಗಾಣ ರಾಜ್ಯದಿಂದ ಸಾವಿರಾರು ಜನರು ಈ ಬೆಟ್ಟಕ್ಕೆ ಆಗಮಿಸುತ್ತಾರೆ. ಅಕಸ್ಮಾತ್ ಚೇಳು ಕಚ್ಚಿದರೂ ಕೊಂಡಮ್ಮಾಯಿ ಹೆಸರು ಹೇಳಿ ಆಧಾರ ಹಚ್ಚಿಕೊಂಡರೆ ನೋವು ಮಾಯವಾಗುತ್ತದೆ. ಅಲ್ಲದೆ ಪಂಚಮಿ ಮರುದಿನ ಈ ಚೇಳುಗಳು ಬೆಟ್ಟದಲ್ಲಿ ಕಾಣುವುದಿಲ್ಲ.
ಮನೆ ಮೇಲೇ ಕುಸಿದ ಗುಡ್ಡ, ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 4 =
Remember me
