ಬೆಂಗಳೂರು:ಕರೊನಾ ವಿಪತ್ತಿನಿಂದ ಜಗತ್ತನ್ನು ಪಾರು ಮಾಡಲು ರಾಜ್ಯದ ವಿವಿಧ ದೇಗುಲಗಳು ಹಾಗೂ ಮಠಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದ್ದು, ಆ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.
ದತ್ತಪೀಠದಲ್ಲಿ ಪೂಜೆ: ಮೈಸೂರಿನ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಹೋಮ ನೆರವೇರಿಸಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ನಿತ್ಯ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಧರ್ಮಸ್ಥಳದಲ್ಲಿ ವ್ಯಾಧಿಹರ ಶಾಂತಿ ಹೋಮ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾ.24ರಂದು ವ್ಯಾಧಿಹರ ಶಾಂತಿ ಹೋಮ ನಡೆಸಲಾಗಿದೆ. ಕರೊನಾ ವೈರಸ್ ದೂರ ಮಾಡುವಂತೆ ಧರ್ಮಸ್ಥಳದ ವೆಂಕಟ್ರಮಣ ಅಡಿಗರ ನೇತೃತ್ವದಲ್ಲಿ ಮಹಾವಿಷ್ಣುವನ್ನು ಪ್ರಾರ್ಥಿಸಲಾಯಿತು.
ವಾಯುಸ್ತುತಿ ಪುನಶ್ಚರಣ ಹೋಮ: ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠ ವತಿಯಿಂದ ಲೋಕಕಲ್ಯಾಣಾರ್ಥ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮಾ.27ರಂದು ವಾಯುಸ್ತುತಿ ಪುನಶ್ಚರಣ ಹೋಮ, ಧನ್ವಂತರಿ ಯಾಗ ನಡೆಸಲಾಗಿತ್ತು.
ಏ.2ರಂದು ರಾಮನವಮಿ ದಿನ ಸಾಯಂಕಾಲ ರಾಮತಾರಕ ಮಂತ್ರ ಮತ್ತು ಧನ್ವಂತರಿ ಮಂತ್ರ ಜಪ ನಡೆದಿದೆ. ಏ.8ರ ಹನುಮಜ್ಜಯಂತಿಯವರೆಗೆ ವಿದ್ವಾಂಸರೊಬ್ಬರು ಬೆಳಗ್ಗೆ 9ರಿಂದ11ರವರೆಗೆ ಕೃಷ್ಣ ದೇವರ ಮುಂಭಾಗ ಸತ್ಕಥಾಕಾಲಕ್ಷೇಪ ಭಾಗವತ ಸಪ್ತಾಹ ನೆರವೇರಿಸಲಿದ್ದು, ಭಕ್ತರು ಮನೆಯಲ್ಲೇ ಕುಳಿತು ಅಂತರ್ಜಾಲದಲ್ಲಿ ಈ ಪ್ರವಚನ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಶಿಕಾರಿ ಕಾಲನಿಯ ಹಕ್ಕಿಪಿಕ್ಕಿ ಸಮುದಾಯದವರು ತುಳಜಾ ಭವಾನಿ ದೇವಸ್ಥಾನದಲ್ಲಿ ಕರೊನಾ ನಿಯಂತ್ರಣಕ್ಕೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಗ್ನಿಹೋತ್ರ ಹೋಮ:ಹರಿಹರಪುರ ಸಮೀಪದ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ 21 ದಿನಗಳ ಅಗ್ನಿಹೋತ್ರ ಹೋಮಕ್ಕೆ ಚಾಲನೆ ದೊರೆತಿದೆ. ಗುರೂಜಿಯ ಭಕ್ತರು 21 ದಿನಗಳ ಕಾಲ ತಮ್ಮ ತಮ್ಮ ಮನೆಗಳಲ್ಲೇ ಹೋಮ ನಡೆಸುತ್ತಿದ್ದಾರೆ. ವಾಯುಮಂಡಲದಲ್ಲಿ ಶುದ್ಧ ಗಾಳಿಗಾಗಿ ಮಾ.28ರಂದು ಗೌರಿಗದ್ದೆ ಆಶ್ರಮದಲ್ಲಿ ವಿನಯ್ ಗುರೂಜಿ ಅಗ್ನಿಹೋತ್ರ ಹೋಮಕ್ಕೆ ಚಾಲನೆ ನೀಡಿದರು. ನಂತರದಲ್ಲಿ ಗುರೂಜಿ ಭಕ್ತರು ತಮ್ಮ ಮನೆಗಳಲ್ಲಿಯೇ ಸರಳ ರೂಪದಲ್ಲಿ ಹೋಮ ಮಾಡುತ್ತಿದ್ದಾರೆ.
ಸಹಸ್ರ ಚಂಡಿ ಯಾಗ:ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶುಕ್ರವಾರ ಸಹಸ್ರ ಚಂಡಿ ಯಾಗ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮ ನೆರವೇರಿತು. ಸರ್ಕಾರದ ಪ್ರಯತ್ನಗಳಿಗೆ ನಾವು ಸಹಕಾರ ನೀಡಬೇಕು. ಇದರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇವತಾ ಉಪಾಸನೆಯೂ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಯುವ ಸಮೂಹವೇ ಎಚ್ಚರ… ಬೇಡವೇ ಬೇಡ ಕರೊನಾದೆಡೆಗಿನ ತಾತ್ಸಾರ: ಸ್ಪೋಟಕ ಮಾಹಿತಿ ನೀಡಿದ ಕೇಂದ್ರ ಸರ್ಕಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 12 =
Remember me
