ಬೆಂಗಳೂರು:ಕೆಲ ವರ್ಷಗಳ ಹಿಂದೆ ಅಪರಿಚಿತ ಹುಡುಗ – ಹುಡುಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಥವಾ ಮಾತನಾಡಿದರೆ ತಪ್ಪು ಎಂಬ ಮನಸ್ಥಿತಿ/ಕಲ್ಪನೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಆಧುನಿಕತೆಯ ಸೋಗಿನಲ್ಲಿ ಸಿಲುಕಿ, ಡೇಟಿಂಗ್ ಹೆಸರಿನಲ್ಲಿ ಕೆಲ ಯುವಕ-ಯುವತಿಯರು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಗರದ ಕೆಲ ಜನರಿಗೆ ಇದು ಮಾಮೂಲು ಎಂಬಂತಾಗಿದೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಾಕಷ್ಟು ಕಂಪೆನಿಗಳು ಯುವ ಸಮೂಹವನ್ನು ಡೇಟಿಂಗ್​ ಜಾಲದಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡುತ್ತಿವೆ. ಇದಕ್ಕೆ ಈ ಹಿಂದೆ ಸಾಕಷ್ಟು ಸಾಕ್ಷಿಗಳೂ ಲಭ್ಯವಾಗಿವೆ. ಡೇಟಿಂಗ್ ಆ್ಯಪ್​ಗಳ ಮೂಲಕ ಅಪರಿಚಿತ ಯುವಕ-ಯುವತಿಯರು ಪರಿಚಿತರಾಗುತ್ತಿದ್ದಾರೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಗೆ ಸ್ಪೀಡ್ ಡೇಟಿಂಗ್ ಕಾಲಿಟ್ಟಿದೆ!
ಇದನ್ನೂ ಓದಿ:ಮದುವೆ ಗಂಡಿನ ಕಡೆಯಿಂದ ಹುಡುಗಿ ತಂದೆಗೆ ಸಿಕ್ಕಿತು 6.50 ಲಕ್ಷ ರೂ.; ಇದು ವಧು ದಕ್ಷಿಣೆಯಲ್ಲ! ಮತ್ತೇನು?
ಪ್ರಸ್ತುತ ಮುಂದುವರಿದ ನಗರ ಪ್ರದೇಶಗಳಲ್ಲಿ ಸ್ಪೀಡ್ ಡೇಟಿಂಗ್ ಎಂಬುದು ಬಹು ಜನಪ್ರಿಯವಾಗಿದೆ. ಇದೊಂದು ಬಹಿರಂಗ ಕಾರ್ಯಕ್ರಮವಾಗಿದ್ದು, ಯುವಕ-ಯುವತಿಯರಿಗೆ ಪರಸ್ಪರ ಭೇಟಿಯಾಗಿ ಪರಿಚಿತರಾಗುವ ಅವಕಾಶ ಕಲ್ಪಿಸಿಕೊಡುತ್ತದೆ. ಹಲವಾರು ಕಂಪೆನಿಗಳು ಪ್ರಮುಖ ನಗರಗಳ ರೆಸ್ಟೋರೆಂಟ್‌, ಕೆಫೆ, ಬಾರ್‌, ಉದ್ಯಾನವನಗಳಂತಹ ಸ್ಥಳಗಳಲ್ಲಿ ಸ್ಪೀಡ್ ಡೇಟಿಂಗ್ ಈವೆಂಟ್‌ಗಳನ್ನು ಆಯೋಜಿಸುತ್ತಿವೆ.
ಹೆಸರು ನೋಂದಾಯಿಸಿಕೊಂಡ ಯುವಕ-ಯುವತಿಯರಿಗೆ ಅಭಿರುಚಿ ಮತ್ತು ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವಂತಹ ವ್ಯಕ್ತಿಗಳನ್ನು ಆರಿಸಿಕೊಳ್ಳುವ ಅವಕಾಶವನ್ನು ಸ್ಪೀಡ್ ಡೇಟಿಂಗ್ ಮಾಡಿಕೊಡುತ್ತದೆ. ಕೆಲವು ಬಾರಿ ಆನ್‌ಲೈನ್‌ನಲ್ಲೂ ಈವೆಂಟ್‌ ಆಯೋಜಿಸಲಾಗಿರುತ್ತದೆ. ಇದೀಗ ಈ ಈವೆಂಟ್​ ಬೆಂಗಳೂರಿನಲ್ಲೂ ಆಯೋಜನೆಗೊಂಡಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.
A post shared by HAUTERRFLY | A Fork Media Group Co. (@hauterrfly)fe
ಹೆಚ್ಚು ಸಮಯ ಕಾಯದೆ ಯುವಕ-ಯುವತಿಯನ್ನು ಆಯ್ಕೆ ಮಾಡಿಕೊಂಡು ಬೇಗನೇ ಡೇಟಿಂಗ್​ ಶುರು ಮಾಡುವುದೇ ಫಾಸ್ಟ್​ ಡೇಟಿಂಗ್​ ಕಲ್ಪನೆ. ಬೆಂಗಳೂರಿನಲ್ಲಿ ಆಯೋಜನೆಯಾಗಿರುವ ಈವೆಂಟ್ ಕುರಿತ ಜಾಹೀರಾತಿನ ಇನ್ಸ್​ಟಾಗ್ರಾಂ ಪೋಸ್ಟ್ ವೈರಲ್​ ಆಗಿದೆ.
ಫಾಸ್ಟ್ ಡೇಟಿಂಗ್​ನಲ್ಲಿ ಭಾಗವಹಿಸಲು ಯುವಕ-ಯುವತಿಯರಿಗೆ ನಿರ್ಧರಿಸಲಾಗಿರುವ ಟಿಕೆಟ್ ದರದ ಕಾರಣಕ್ಕೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಈವೆಂಟ್‌ನಲ್ಲಿ ಪಾಲ್ಗೊಳ್ಳಲು ಯುವಕರಿಗೆ 1499 ರೂ. ನಿಗದಿಯಾಗಿದ್ದರೆ, ಯುವತಿಯರಿಗೆ ಕೇವಲ 99 ರೂ. ಬುಕ್ ಮೈ ಶೋ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಇದರ ಬಗ್ಗೆ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + 6 =
Remember me
