ಬೆಂಗಳೂರು:ಮೈಸೂರು-ಬೆಂಗಳೂರು ಎಕ್ಸ್​ಪ್ರೆವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅವಘಡಗಳನ್ನು ತಗ್ಗಿಸಲು ಪೊಲೀಸ್​ ಇಲಾಖೆ ಫೈನ್ ಸ್ಪೀಡ್ ಲಿಮಿಟ್ ವಿಧಾನವನ್ನು ಅಳವಡಿಸಿಕೊಂಡಿದೆ.
ಅತಿ ವೇಗವಾಗಿ ವಾಹನ ಚಲಾಯಿಸುವವರನ್ನು ತಡೆದು ದಂಡ ವಿಧಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸವಾರರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.
ಹೆದ್ದಾರಿಯಲ್ಲಿ ಅತಿವೇಗದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ರಸ್ತೆಯನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ಬೆಂಗಳೂರು ವಿಭಾಗದ ಎಡಿಜಿಪಿ ಅಲೋಕ್​ ಕುಮಾರ್​ ಪರಿಶೀಲನೆ ಮಾಡಿದ್ದರು. ಈ ವೇಳೆ ವೇಗದ ಮಿತಿಯನ್ನು ಕಮ್ಮಿ ಮಾಡುವಂತೆ ಸೂಚನೆ ನೀಡಿದ್ದರು.
ಇದನ್ನೂ ಓದಿ:ನ.1ರಿಂದ ರಾಜ್ಯಾದ್ಯಂತ ವರ್ಷಪೂರ್ತಿ ಕನ್ನಡ ಹಬ್ಬ ಆಚರಣೆ: ಕರ್ನಾಟಕ ಮರುನಾಮಕರಣಕ್ಕೆ 50 ವರ್ಷ ಪೂರ್ತಿ
ಇಷ್ಟು ದಿನ 122 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಈಗ ವೇಗದ ಮಿತಿಯನ್ನು 100 ಕಿ.ಮೀಗೆ ಇಳಿಸಿ ಆದೇಶ ಹೊರಡಿಸಲಾಗಿದೆ. ಅಪಘಾತಗಳ ಸಂಖ್ಯೆಯನ್ನು ಕಮ್ಮಿ ಮಾಡಲು ವೇಗದ ಮಿತಿ ಕಡಿಮೆ ಮಾಡಿರುವ ರಾಮನಗರ ಪೊಲೀಸರು ಹೆದ್ದಾರಿ ಗಸ್ತು ವ್ಯವಸ್ಥೆಯನ್ನು ಹೆಚ್ಚು ಮಾಡಿದ್ದಾರೆ.
ಈ ಬಗ್ಗೆ ಅಲೋಕ್​ ಕುಮಾರ್​ ಅವರು ಟ್ವೀಟ್ ಮಾಡಿದ್ದಾರೆ. ರಸ್ತೆಯಲ್ಲಿ ಅತಿ ಹೆಚ್ಚು ವೇಗದಲ್ಲಿ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗ್ತಿದೆ ಎಂದು ತಿಳಿಸಿದ್ದಾರೆ. ರಸ್ತೆಯಲ್ಲಿ ಸಂಚಾರ ನಿಯಮ ಪಾಲಿಸಿ, ದಂಡ ಉಳಿಸೋದಕ್ಕಲ್ಲ ಎಂದು ಕೋಟ್ ಮಾಡಿ ಟ್ವೀಟ್ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
Booking cases using Speed Radar Guns for over speeding on Bangalore- Mysore Expressway
Appreciate action by SP Ramanagara & his team👍
“Follow traffic rules to save lives, not to save fine amount “pic.twitter.com/ijDi9fMeag
— alok kumar (@alokkumar6994)July 4, 2023

ಗಂಡನ ದುಡಿಮೆಯಲ್ಲಿ ಸರ್ಕಾರಿ ಕೆಲ್ಸ, ಬಾಯ್​ಫ್ರೆಂಡ್​ ಜತೆ ಸರಸ: ಮಹಿಳಾಧಿಕಾರಿಯ ವಾಟ್ಸ್​ಆ್ಯಪ್​ ಚಾಟ್​ ವೈರಲ್​

ಕಣ್ಣಾರೆ ಕಂಡರೂ..: ಹುಷಾರು.. ಇದು ಡೀಪ್ ಫೇಕ್!

ಕೆಎಸ್​ಟಿ ಕುಮಾರ್​ vs ಲುಲುಕುಮಾರ್​: ಕಾಂಗ್ರೆಸ್​-ಜೆಡಿಎಸ್​ ನಡುವೆ ಮುಂದುವರಿದ ಟ್ವೀಟ್​ ವಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
