ಬೆಂಗಳೂರು:ವೈಜ್ಞಾನಿಕವಾಗಿ ಸಾಕ್ಷ$್ಯಗಳನ್ನು ಕಲೆಹಾಕಿ, ಅಪರಾಧಿಗಳನ್ನು ಪತ್ತೆ ಹಚ್ಚಿ ಶಿೆ ಕೊಡಿಸಲು ವಿಧಿ ವಿಜ್ಞಾನ ಪ್ರಯೋಗಾಲಯ (ಎ್​ಎಸ್​ಎಲ್​) ಸಹಕಾರಿಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ತಿಳಿಸಿದರು. ನಗರದ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳ್ಳಾರಿಯಲ್ಲಿ ಸ್ಥಾಪಿಸಲಾಗಿರುವ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ “ಆನ್​ಲೈನ್​ ವೇದಿಕೆ’ ಮೂಲಕ ಚಾಲನೆ ನೀಡಿ ಮಾತನಾಡಿದರು. ಪೊಲೀಸರ ಇ&ಬೀಟ್​ (ಸ್ಮಾರ್ಟ್​ ಪೊಲೀಸಿಂಗ್​) ಸಿಸ್ಟಮ್​ಗೂ ಚಾಲನೆ ಕೊಡಲಾಗಿದೆ. ಇ&ಬೀಟ್​ ಪರಿಕಲ್ಪನೆ ಇಡೀ ಕರ್ನಾಟದಲ್ಲಿ ಜಾರಿಗೆ ಬರಲಿದೆ. ಇದು ಪೊಲೀಸ್​ ಸೇವೆಗಳ ವೇಗವನ್ನು ಹೆಚ್ಚಿಸಲಿದೆ. ಇ&ಬೀಟ್​ ವ್ಯವಸ್ಥೆಯನ್ನು ಚಂಡಿಗಢ್​ನಲ್ಲಿ ಪರಿಣಾಮಕಾರಿಯಾಗಿ ಅಳವಡಿಸಲಾಗಿದೆ. ಇದೇ ರೀತಿಯಲ್ಲಿ ಕರ್ನಾಟಕದಲ್ಲಿ ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಗೃಹ ಸಚಿವ ಆರಗ ಾನೇಂದ್ರ ಮಾತನಾಡಿ, ಅಮಿತ್​ ಷಾ ದೂರದೃಷ್ಟಿಯ ಲವಾಗಿ ರಾಷ್ಟ್ರೀಯ ವಿಧಿವಿಜ್ಞಾನ ವಿವಿ ರೂಪುಗೊಂಡಿದ್ದು, ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ಗುಜರಾತಿನಲ್ಲಿರುವ ವಿಧಿ ವಿಾನ ವಿಶ್ವವಿದ್ಯಾಲಯದ ಕ್ಯಾಂಪಸ್ಸನ್ನು ರಾಜ್ಯದಲ್ಲಿ ತೆರೆಯಲು ಕೇಂದ್ರ ಸರ್ಕಾರವನ್ನು ಕೋರಲಾಗಿದ್ದು, ಇದಕ್ಕಾಗಿ 50 ಎಕರೆ ಜಮೀನನ್ನು ಮೀಸಲಿಡಲಾಗಿದೆ. ಇದಕ್ಕೆ ಷಾ ಭಾಗಶ@ ಒಪ್ಪಿಗೆಯನ್ನೂ ಸೂಚಿಸಿದ್ದಾರೆ ಎಂದು ತಿಳಿಸಿದರು.
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ವಿಶೇಷತೆ: ಬಳ್ಳಾರಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ 153 ವೈಾನಿಕ ಅಧಿಕಾರಿಗಳು, 42 ಸಹಾಯಕರು, 205 ಸೀನ್​ ಆಫ್​ ಕೆಂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ತರನ್ನು ಉಪಯೋಗಿಸಿಕೊಂಡು ಪ್ರಾದೇಶಿಕ ವಿಧಿ ವಿಾನ ಪ್ರಯೋಗಾಲಯಗಳಲ್ಲಿ ಹೆಚ್ಚುವರಿ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ. ಇತ್ತೀಚಿನ ಅಪರಾಧ ಕೃತ್ಯಗಳನ್ನು ಗಮನದಲ್ಲಿರಿಸಿಕೊಂಡು ಪ್ರಯೋಗಾಲಯಗಳಲ್ಲಿ ಕಂಪ್ಯೂಟರ್​ ೋರೆನ್ಸಿಕ್​, ಮೊಬೈಲ್​ ಮತ್ತು ಆಡಿಯೋ/ ವಿಡಿಯೋ ೋರೆನ್ಸಿಕ್​ ಮತ್ತು ಡಿಎನ್​ಎ ಪರೀಾ ಸೌಲಭ್ಯಗಳನ್ನು ಪ್ರಾರಂಭಿಸಲಾಗುತ್ತಿದೆ. ಪ್ರಸ್ತುತ ಈ ಸೌಲಭ್ಯಗಳು ಬೆಂಗಳೂರಿನಲ್ಲಿರುವ ರಾಜ್ಯ ನ್ಯಾಯ ವಿಾನ ಪ್ರಯೋಗಾಲಯಗಳಲ್ಲಿ ಮಾತ್ರ ಲಭ್ಯವಿದೆ. ಈ ಪ್ರಯೋಗಾಲಯದ ಸೀನ್​ ಆಫ್​ ಕೆಂ ಅಧಿಕಾರಿಗಳಿಗೆ ಎಲ್ಲ ರೀತಿಯ ಮಾದರಿ ಸಂಗ್ರಹಣಾ ಸಾಧನಗಳು ಹಾಗೂ ಪರೀಾ ಸೌಲಭ್ಯಗಳಿರುವ ಸಂಚಾರಿ ಫೋರೆನ್ಸಿಕ್​ ವಾಹನಗಳನ್ನು ಒದಗಿಸಲಾಗಿದೆ. ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವು ಆಧುನಿಕ ಉಪಕರಣಗಳನ್ನು ಒಳಗೊಂಡಿದ್ದು, ಅಪರಾಧ ಪ್ರಕರಣವನ್ನು ಬೇಧಿಸಲು ಸಹಕಾರಿಯಾಗಲಿದೆ.
ಸ್ಮಾರ್ಟ್​ ಇ&ಬೀಟ್​ ಆ್ಯಪ್​ ಲೋಕಾರ್ಪಣೆಪ್ರಧಾನ ಮಂತ್ರಿಯವರ ನಿರ್ದೇಶನದನ್ವಯ ರಾಜ್ಯ ಪೊಲೀಸ್​ ಇಲಾಖೆಯು ರಾಜ್ಯಾದ್ಯಂತ ಸ್ಮಾರ್ಟ್​ ಇ& ಬೀಟ್​ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸ್ಮಾರ್ಟ್​ ಇ&ಬೀಟ್​ ವ್ಯವಸ್ಥೆಯು ಕ್ಯೂಆರ್​ ಕೋಡ್​ ತಂತ್ರಾನವುಳ್ಳ ಬೀಟ್​ ವ್ಯವಸ್ಥೆಯಾಗಿದೆ. ಕ್ಯೂಆರ್​ ಕೋಡ್​ ಅನ್ನು ಮೊಬೈಲ್​ ಫೋನ್​ ಮೂಲಕ ಸ್ಕಾ$್ಯನ್​ ಮಾಡಿದ ಕೂಡಲೇ ಸ್ಥಳದ ರೇಖಾಂಶ ಹಾಗೂ ಅಾಂಶಗಳನ್ನು ದಾಖಲಿಸಿಕೊಳ್ಳುತ್ತದೆ. ಈ ಬೀಟ್​ ವ್ಯವಸ್ಥೆಯಲ್ಲಿ ಸ್ಕಾ$್ಯನ್​ ಮಾಡಿದ ಕೂಡಲೇ ಸ್ಥಳದ ವಿವರವನ್ನು (ಲೋಕೇಷನ್​) ದಾಖಲಿಸಿಕೊಳ್ಳುವುದರಿಂದ ಯಾವುದೇ ರೀತಿಯ ತಿದ್ದುಪಡಿಯ ಸಾಧ್ಯತೆಗಳಿರುವುದಿಲ್ಲ. ಪ್ರಸ್ತುತ ಅಂದಾಜು 50 ಸಾವಿರ ಬೀಟ್​ ಕೇಂದ್ರಗಳಲ್ಲಿ ಈ ಕ್ಯೂಆರ್​ ಕೋಡ್​ಗಳನ್ನು ಸ್ಥಾಪಿಸಲಾಗಿದೆ. ಇವುಗಳು ಮೊಬೈಲ್​ ಆಪ್​ ಮುಖಾಂತರ ಕಾರ್ಯನಿರ್ವಹಿಸುತ್ತವೆ. ಈ ಆ್ಯಪ್​ ಮುಖಾಂತರ ಸ್ಥಳದ ಬಗೆಗಿನ ಎಲ್ಲ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಸ್ಥಳಿಯ ಸಂಶಯಾಸ್ಪದ ವ್ಯಕ್ತಿಗಳು ವಾಸಿಸುವ ಸ್ಥಳದ ಮಾಹಿತಿ ಪಡೆಯಬಹುದಾಗಿದೆ. ಅದಲ್ಲದೇ, ಅವರ ಬೆರಳು ಮುದ್ರೆಗಳನ್ನೂ ಸಹ ಅವಲೋಕಿಸಬಹುದಾಗಿದೆ. ಪ್ರತಿಯೊಂದು ಬೀಟ್​ ಕೇಂದ್ರದಲ್ಲಿ ಸ್ಕಾ$್ಯನ್​ ಮಾಡಿದ ಕೂಡಲೇ ಸದರಿ ಕಟ್ಟಡದ ಮಾಲೀಕರಿಗೆ ಸ್ವಯಂಚಾಲಿತ ಸಂದೇಶ ರವಾನೆಯಾಗುವ ಸೌಕರ್ಯವನ್ನು ಹೊಂದಿರುವ ಈ ಬೀಟ್​ ವ್ಯವಸ್ಥೆಯು ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತರುವ ಸಾಧನವಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + nine =
Remember me
