ಬೆಂಗಳೂರು:ಕರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಚೀನಾದಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಚಿತ್ರಗಳು, ವಿಡಿಯೋಗಳು ಭಾರಿ ಸುದ್ದಿಯಾಗಿದ್ದವು. ಹತ್ತಾರು ಜನರು ಪಿಪಿಇ ಕಿಟ್​ಗಳನ್ನು ಧರಿಸಿ ರಸ್ತೆಯುದ್ದಕ್ಕೂ ಒಂದಿಂಚೂ ಬಿಡದಂತೆ ಸೋಂಕು ನಿವಾರಕಗಳನ್ನು ಸಿಂಪಡಿಸುತ್ತಿರುವ, ಅಗ್ನಿಶಾಮಕ ದಳದ ಟ್ಯಾಂಕರ್​ಗಳು ಬೆಂಕಿಯ ಮೇಲೆ ನೀರು, ನೊರೆ ಸುರಿದಂತೆ ದೊಡ್ಡ ಟ್ಯಾಂಕರ್​ಗಳಲ್ಲಿ ಕ್ರಿಮಿನಾಶಕವನ್ನು ಕಟ್ಟಡಗಳ ಮೇಲೆ, ಗಾಳಿಯಲ್ಲೆಲ್ಲ ಸಿಂಪಡಿಸಲಾಗುತ್ತಿತ್ತು. ಇದು ಕರೊನಾ ವ್ಯಾಪಿಸುವ ಭೀಕರತೆಗೆ ಸಾಕ್ಷಿ ಎನಿಸಿತ್ತು.
ಕರೊನಾ ಚೀನಾದಿಂದ ಬೇರೆ ದೇಶಗಳಿಗೂ ವ್ಯಾಪಿಸಿದಾಗ ಅಲ್ಲಿಯೂ ಇಂಥದ್ದೇ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬೆಂಗಳೂರು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಗಲ್ಲಗಲ್ಲಿಗಳಲ್ಲೂ ಅಗ್ನಿಶಾಮಕ ದಳದ ಟ್ಯಾಂಕರ್​ ಹಾಗೂ ಪೌರ ಕಾರ್ಮಿಕ ಸಿಬ್ಬಂದಿ ಬಳಸಿ ರಾಸಾಯನಿಕ ಸಿಂಪಡನೆ ಕಾರ್ಯ ಜೋರಾಗಿಯೇ ನಡೆದಿತ್ತು. ಮಾರುಕಟ್ಟೆ, ಆಸ್ಪತ್ರೆಗಳಲ್ಲಿ ಈ ಕಾರ್ಯ ನಿಯಮಿತವಾಗಿತ್ತು.
ಇದನ್ನೂ ಓದಿ;ತಂಬಾಕಿನಲ್ಲಿದೆ ಕರೊನಾ ಗುಣಪಡಿಸುವ ಶಕ್ತಿ, ಸಿಗರೇಟ್​ ಕಂಪನಿ ತಯಾರಿಸಿದೆ ಲಸಿಕೆ…!
ಆದರೆ, ಇದೆಲ್ಲ ವ್ಯರ್ಥ್ಯ ಕಸರತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದೆ. ಸೋಂಕು ನಿವಾರಕ ಸಿಂಪಡಿಸುವುದರಿಂದ ಕರೊನಾ ವೈರಸ್​ ಸಾಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕ್ಲೋರಿನ್​ ಆತವಾ ಇತರ ವಿಷಕಾರಿ ಕ್ರಿಮಿನಾಶಕ ಸಿಂಪಡನೆ ಮಾನವನ ಆರೋಗ್ಯಕ್ಕೆ ಅಪಾಯಕಾರಿ. ಕಣ್ಣು ಮತ್ತು ಚರ್ಮದ ಉರಿ, ಉಸಿರಾಟ, ಜಠರದಲ್ಲಿ ತೊಂದರೆ ಉಂಟಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.
ಕರೊನಾ ನಿಗ್ರಹಕ್ಕೆ ರಸ್ತೆ ಅಥವಾ ಹೊರಾಂಗಣದಲ್ಲಿ ಸೋಂಕು ನಿವಾರಕ ಸಿಂಪಡನೆ ಅಥವಾ ಧೂಮ ಪ್ರಯೋಗಿಸಿ ಎಂದು ಯಾರೂ ಶಿಫಾರಸು ಮಾಡಿಲ್ಲ. ಗಾಳಿಯಲ್ಲಿರುವ ಧೂಳು ಹಾಗೂ ಕಸ ಈ ಕ್ರಿಮಿನಾಶಕವನ್ನು ನಿರುಪಯುಕ್ತವನ್ನಾಗಿಸುತ್ತವೆ. ಇಷ್ಟಕ್ಕೂ ವೈರಸ್​ಅನ್ನು ನಿಗ್ರಹಿಸಲು ಬೇಕಾಗುವ ನಿಗದಿತ ಅವಧಿವರೆಗೆ ಕ್ರಿಮಿನಾಶಕ ಆ ಪ್ರದೇಶವನ್ನು ಆವರಿಸುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ, ಗಾಳಿಯಲ್ಲಿ ಕ್ರಮಿನಾಶಕ ಸಿಂಪಡಿಸುವುದು ಆರೋಗ್ಯಕ್ಕೂ ಹಾನಿಕಾರಕ ಎಂದು ಹೇಳಿದೆ.
ಇದನ್ನೂ ಓದಿ;ಕೋತಿಗಳ ಮೇಲೆ ಯಶಸ್ವಿಯಾಯ್ತು ಕರೊನಾ ಲಸಿಕೆ…!
ಮನುಷ್ಯರ ಮೇಲೂ ಪ್ರಯೋಗಿಸುವಂತಿಲ್ಲ: ಇತ್ತೀಚೆಗೆ ಬಿಎಂಟಿಸಿ ಹಾಗೂ ಕೆಲವು ಇಲಾಖೆಗಳು ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಸೋಂಕು ನಿವಾರಕದ ಮಳೆಯನ್ನೇ ಸುರಿಸುವ ವಾಹನ ಹಾಗೂ ಸುರಂಗವನ್ನು ಸಿದ್ಧಪಡಿಸಿದ್ದವು. ಆದರೆ, ಕ್ರಿಮಿನಾಶಕವನ್ನು ದೇಹದ ಸಿಂಪಡಿಸುವುದು ಕೂಡ ಅಪಾಯಕಾರಿ. ಅದನ್ನು ದೇಹಕ್ಕೆ ಲೇಪಿಸಲೇ ಬೇಕಾಗಿದ್ದರೆ, ಬಟ್ಟೆ ಅಥವಾ ಇತರ ಟಿಶ್ಯೂ ಬಳಸಿ ಸವರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಕರೊನಾ ವೈರಸ್​ ವಿವಿಧ ಮೇಲ್ಮೈ ಮೇಲೆ ವಿವಿಧ ಕಾಲಾವಧಿಯವರೆಗೆ ಇರುತ್ತದೆ ಎನ್ನುವುದು ಪ್ರಯೋಗಾಲಯದ ಪರಿಸರದಲ್ಲಿ ಕಂಡುಕೊಂಡಿದ್ದಾಗಿದೆ. ವಾಸ್ತವವಾಗಿ ಇದನ್ನು ಅನ್ವಯಿಸುವುದಾದರೆ ಭಾರಿ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ತಜ್ಞರು ಸೂಚಿಸಿದ್ದಾರೆ.

ಸಿಬ್ಬಂದಿಗೆ ಸಂಬಳ ನೀಡಲು ಜಮೀನು ಮಾರಾಟಕ್ಕೆ ಮುಂದಾದ ತಿರುಪತಿ ದೇಗುಲ ಮಂಡಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
