ಮಂಗಳೂರು:ಎಲ್ಲೆಡೆ ಕರೊನಾತಂಕ ದಟ್ಟವಾಗಿದ್ದು, ಮಕ್ಕಳನ್ನು ಶಾಲೆಗೆ ಕಳಿಸೋಕು ಪೋಷಕರಿಗೆ ಧೈರ್ಯವಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ವರ್ಷ ಶಾಲೆಯನ್ನು ಬಂದ್​ ಮಾಡಲು ರಾಜ್ಯದ ವಿದ್ಯಾಸಂಸ್ಥೆಯೊಂದು ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿರಿಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲ ಮಾಧ್ಯಮ ವಿದ್ಯಾಲಯವು ಪಾಲಕರ ಒಪ್ಪಿಗೆ ಮೇರೆಗೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿರಿVideo/ ದಾರೀಲಿ ಒಂಟಿಸಲಗ ಪ್ರತ್ಯಕ್ಷ, ಮಹಿಳೆ ಬಚಾವ್​ ಆಗಿದ್ದೇ ರೋಚಕ!
ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ಸುಮಾರು 350 ವಿದ್ಯಾರ್ಥಿಗಳಿದ್ದಾರೆ. ಎಲ್​ಕೆಜಿಯಿಂದ ಹತ್ತನೇ ತರಗತಿವರೆಗೆ ನಡೆಯುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ 350 ವಿದ್ಯಾರ್ಥಿಗಳ ಪೈಕಿ ಸುಮಾರು 250 ಮಕ್ಕಳು 12 ವರ್ಷ ವಯಸ್ಸಿನೊಳಗಿನವರು. ಹಾಗಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ನಡೆಸುತ್ತಿಲ್ಲ ಎಂದು ಶಿಕ್ಷಣ ಸಂಸ್ಥೆ ಅಧ್ಯಕ್ಷ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿರಿಬಿಎಸ್​ವೈ ಹೆಸರಲ್ಲಿ ಚೌಡಿಗೆ ಕುರಿ-ಕೋಳಿ ಬಲಿ ಕೊಟ್ಟರೇ ಶಾಸಕ?
ಶಾಲೆಯನ್ನು ಈ ವರ್ಷ ಸಂಪೂರ್ಣವಾಗಿ ಬಂದ್​ ಮಾಡುವ ಬಗ್ಗೆ ಮಕ್ಕಳ ಪೋಷಕರ ಅಭಿಪ್ರಾಯ ಪಡೆದೇ ಶಾಲಾ ಆಡಳಿತ ನಿರ್ಧಾರ ಕೈಗೊಂಡಿದೆ. ಈ ವರ್ಷವೂ ತಮ್ಮ ಮಕ್ಕಳ ಶಿಕ್ಷಣ ಮುಂದುವರಿಸಲು ಇಚ್ಛಿಸಿ ಬೇರೆ ಶಾಲೆಗೆ ಸೇರಲು ಬಯಸಿದರೆ ಅವರಿಗೆ ವರ್ಗಾವಣೆ ಪತ್ರವನ್ನೂ ಕೊಡಲಾಗುತ್ತದೆ. ಶಾಲೆ ಸ್ಥಗಿತದ ಬಗ್ಗೆ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದೆ.
https://www.facebook.com/DighvijayNews/videos/624204311535993/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 4 =
Remember me
