ಬೆಂಗಳೂರು:ಕಾಯಕತತ್ವವನ್ನು ಸರಿಯಾಗಿ ಅರ್ಥೈಸಿಕೊಂಡು ಅನುಷ್ಟಾನಕ್ಕೆ ತರುವುದರಿಂದ ಸಮಾಜದಲ್ಲಿ ಬಡತನ ನಿರ್ಮೂಲನೆಯಾಗುತ್ತದೆ ಎಂದು ದೇಗುಲಮಠದ ಶ್ರೀಚನ್ನಬಸವ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.ರವೀಂದ್ರ ಕಲಾಕ್ಷೇತ್ರದಲ್ಲಿ ಹೆಚ್‌ಎಎಲ್‌ನ ‘ವಿಮಾನ ಕಾರ್ಖಾನೆ ಬಸವ ಸೇವಾ ಸಮಿತಿ’ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬಸವಣ್ಣನವರ ಕಾಯಕವೇ ಕೈಲಾಸವೆಂಬ ಮಾತು ಇಡೀ ಸಮಾಜದ ನಿಜವಾದ ಶಕ್ತಿಯಾಗಿದೆ.ಕಾಯಕ ತತ್ವವನ್ನು ಅಳವಡಿಸಿಕೊಂಡು ಇಡೀ ಜಗತ್ತಿನ ಗಮನ ಸೆಳೆಯುವಲ್ಲಿ ಹೆಚ್‌ಎಎಲ್ ಸಂಸ್ಥೆ ಯಶಸ್ವಿಯಾಗಿದೆ.ಹೆಚ್‌ಎಎಲ್ ಸಂಸ್ಥೆಯ ತಂತ್ರಜ್ಞಾನ,ಗುಣಮಟ್ಟ,ಆವಿಷ್ಕಾರಗಳ ಬಗ್ಗೆ ಜಗತ್ತಿನ ಹಲವು ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದಕ್ಕೆ ಸಾಕ್ಷಿ ಹೆಚ್‌ಎಎಲ್ ಸಂಸ್ಥೆಯ ಅಭಿವೃದ್ಧಿ.ಇಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಬಸವಣ್ಣನ ಆದರ್ಶಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುತ್ತಿರುವುದರಿಂದ ಪ್ರಾಮಾಣಿಕ ಪ್ರಗತಿಯನ್ನು ಕಾಣಲು ಸಾಧ್ಯವಾಗಿದೆ.ಸಮಯ ನೋಡಿ ಕೆಲಸ ಮಾಡುವವರಿಂದ ಸಾಧನೆ ಸಾಧ್ಯವಿಲ್ಲ.ಸಮಯವನ್ನು ಮೀರಿ ಕೆಲಸ ಮಾಡುವವರಿಂದ ಉನ್ನತ ಸಾಧನೆಯಾಗುತ್ತದೆ.ವ್ಯಕ್ತಿಯ ಉನ್ನತಿಯಲ್ಲಿ ತಂದೆ,ತಾಯಿ,ಗುರು ಮೂವರ ಪಾತ್ರ ಬಹಳ ಹಿರಿದಾಗಿದ್ದು,ಬಸವಣ್ಣನವರು ಎಲ್ಲರ ಬಾಳನ್ನು ಬೆಳಗಿದ ಗುರುವಾಗಿದ್ದಾರೆ.
ಹೆಚ್‌ಎಎಲ್ ಸಂಸ್ಥೆಯ ಕಾರ್ಮಿಕರು40ವರ್ಷಗಳ ಹಿಂದೆ ಬಸವ ಸೇವಾ ಸಮಿತಿಯನ್ನು ಸ್ಥಾಪಿಸಿ ಬಸವ ತತ್ವವನ್ನು ಪ್ರಚಾರ ಮಾಡುತ್ತಾ ಬಂದಿದ್ದಾರೆ.ಬಸವ ತತ್ವವನ್ನು ಮೈಗೂಡಿಸಿಕೊಂಡರೆ ವರ್ಷಕ್ಕೆ ಒಂದು ದಿನದ ಬದಲಾಗಿ ನಿತ್ಯವೂ ಬಸವ ಜಯಂತಿ ಆಗುತ್ತದೆ ಎಂದು ಸ್ವಾಮೀಜಿ ವಿವರಿಸಿದರು.
ಸಮಾರಂಭದಲ್ಲಿ ಖ್ಯಾತ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಗೆ ‘ಬಸವ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹೆಚ್‌ಎಎಲ್ ಸಂಸ್ಥೆಯ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಮಹಿಳೆಯರಿಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಹೆಚ್‌ಎಎಲ್ ಅಧಿಕಾರಿಗಳಾದ ಸಿರಿಶ್ ರಾಜ್‌ರಾಗ,ಎನ್.ಧರಣಿಕುಮಾರ್ ಮಹೇಶ್ ಅಂಗಡಿ,ಉಪನ್ಯಾಸಕ ಡಾ.ವಿ.ಎಸ್.ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.
ಬಿಟ್ಟಿ ಭಾಗ್ಯಗಳಿಗೆ ಜನ ಬಾಯ್ತೆರೆದರೆ ಅದರಿಂದ ರಾಜ್ಯ ಬಿಕಾರಿಯಾಗುತ್ತದೆ.ಪ್ರತಿಯೊಬ್ಬರು ದುಡಿದು ತಿನ್ನಬೇಕೆಂಬ ಬಸವಣ್ಣನವರ ಕಾಯಕಪ್ರಜ್ಞೆಗೆ ಬಿಟ್ಟಿ ಪರಿಕಲ್ಪನೆ ವಿರುದ್ಧವಾಗಿದೆ ಎಂದು ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಹೇಳಿದ್ದಾರೆ.
ಬಸವ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಬಸವ ಸಂದೇಶ ಸಾರ್ವಕಾಲಿಕ ಸತ್ಯವಾಗಿದ್ದು,ಅದನ್ನು ಇಡೀ ಜಗತ್ತು ಒಪ್ಪಿಕೊಂಡಿದೆ.ಆದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಹೀರೋಗಳೆನಿಸಿಕೊಂಡವರು ಝೀರೋಗಳ ಕೆಲಸ ಮಾಡುತ್ತಿರುವುದು ದುರಂತ ಎಂದು ಇತ್ತೀಚಿನ ಕೆಲ ಬೆಳವಣಿಗೆಗಳ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − two =
Remember me
