ಕೊಲಂಬೋ:ಕೆಲವೊಮ್ಮೆ ವೈದ್ಯಕೀಯ ಲೋಕದಲ್ಲಿ ವಿಚಿತ್ರ ಮತ್ತು ವಿಭಿನ್ನವಾದ ಸಂಗತಿಗಳು ಸುದ್ದಿಯಾಗುತ್ತವೆ. ಸತ್ತವರು ಬದುಕಿ ಬಂದಿರುವುದು ಹಾಗೂ ವಾಸಿಯಾಗದೇ ಇರುವ ಕಾಯಿಲೆ ವಾಸಿಯಾಗಿರುವುದು ಹೀಗೆ ಸುದ್ದಿಯಾಗುತ್ತವೆ. ಹೀಗೆ ಪ್ರಪಂಚದ ಅತಿ ದೊಡ್ಡ ಕಿಡ್ನಿ ಸ್ಟೋನ್‌ ಹೊರತೆಗೆಯುವ ಮೂಲಕ ಶ್ರೀಲಂಕಾ ಸೇನಾ ವೈದ್ಯರು ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್‌ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಮೂಲಕ 13 ಸೆ.ಮೀ ಗಾತ್ರದ ಕಿಡ್ನಿ ಸ್ಟೋನ್‌ ಅನ್ನು ವೈದ್ಯರು ಹೊರತೆಗೆದಿದ್ದಾರೆ. ಪ್ರಪಂಚದಲ್ಲಿ ಈವರೆಗೆ ಓರ್ವ ವ್ಯಕ್ತಿಯ ಮೂತ್ರಪಿಂಡದಿಂದ ಹೊರತೆಗೆಯಲಾದ ಅತಿ ದೊಡ್ಡ ಕಿಡ್ನಿ ಸ್ಟೋನ್‌ ಇದಾಗಿದೆ. ಜೂನ್ 1 ರಂದು ಕೊಲಂಮೋ ಆರ್ಮಿ ಆಸ್ಪತ್ರೆಯಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಯ ಮೂಲಕ ವಿಶ್ವದ ಅತಿದೊಡ್ಡ ಮತ್ತು ಭಾರವಾದ ಮೂತ್ರಪಿಂಡದ ಕಲ್ಲನ್ನು ತೆಗೆದುಹಾಕಲಾಯಿತು.
ಇದನ್ನೂ ಓದಿ: ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕನ‌ ಲವ್ವಿ ಡವ್ವಿ; ಕಾಲೇಜಿನ ಮುಂದೆ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸುಮಾರು 801 ಗ್ರಾಂ ತೂಕವಿರುವ 13.372 ಸೆ.ಮೀ (5.264 ಇಂಚು) ಉದ್ದವಿರುವ ಕಿಡ್ನಿ ಸ್ಟೋನ್‌ ಹೊರತೆಗೆಯಲಾಗಿದೆ.ಮಾಜಿ ಸರ್ಜೆಂಟ್ ಕ್ಯಾನಿಸ್ಟಸ್ ಕೂಂಗೆ ಅವರಿಂದ ತೆಗೆದ ಮೂತ್ರಪಿಂಡದ ಕಲ್ಲು ಸುಮಾರು 801 ಗ್ರಾಂ ತೂಕವಿರುವ 13.372 ಸೆ.ಮೀ (5.264 ಇಂಚು) ಉದ್ದವಿದೆ. ಸರಾಸರಿ ಪುರುಷ ಮೂತ್ರಪಿಂಡದ ತೂಕಕ್ಕಿಂತ ಐದು ಪಟ್ಟು ಹೆಚ್ಚು ಇದೆ.
2008 ರಲ್ಲಿ ಪಾಕಿಸ್ತಾನದ ರೋಗಿಯೊಬ್ಬರಲ್ಲಿ 620 ಗ್ರಾಂಗಳಷ್ಟು ತೂಕದ ಮೂತ್ರಪಿಂಡ ಕಲ್ಲು ಪತ್ತೆಯಾಗಿತ್ತು. ಇದು ಸಹ ಗಿನ್ನೆಸ್‌ ದಾಖಲೆ ಪುಟಕ್ಕೆ ಸೇರಿತ್ತು.
ಕೋಟ್ಯಧೀಶರ ವಲಸೆಪರ್ವ: ಈ ವರ್ಷ 6,500 ಜನರು ವಿದೇಶಕ್ಕೆ ಹಾರುವ ನಿರೀಕ್ಷೆ; ತೆರಿಗೆ, ಕಾನೂನು ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
