ಚಿಕ್ಕಮಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ರಾಜ್ಯದಲ್ಲಿ ಮುಂದಿನ ಬಾರಿಯೂ ಅಧಿಕಾರಕ್ಕೆ ಬರಬೇಕೆಂಬ ಆಸೆ ನಿಮಗಿದ್ದರೆ ಕೂಡಲೇ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಿ. ನ.13ರ ರೊಳಗೆ ಹಿಂದು ಅರ್ಚಕರನ್ನು ನೇಮಕ ಮಾಡಿ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಗ್ರಹಿಸಿದ್ದಾರೆ.
ದತ್ತಮಾಲಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗಾಧರ ಕುಲಕರ್ಣಿ, ಧರ್ಮದ ವಿಚಾರದಲ್ಲಿ ನಾಟಕ ಮಾಡುವ ಅವಶ್ಯವಿಲ್ಲ. ನ.13ರಂದು ದತ್ತಪೀಠದಲ್ಲಿ ಸಮಾರೋಪ ಕಾರ್ಯಕ್ರಮವಿದೆ. ಅಷ್ಟರೊಳಗೆ ಹಿಂದು ಅರ್ಚಕರ ನೇಮಕ ಮಾಡಬೇಕು. ಶ್ರೀರಾಮ ಸೇನೆ ಕಾರ್ಯಕರ್ತರ ಆಕ್ರೋಶದ ಕಟ್ಟೆ ಒಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ದತ್ತ ಮಾಲಾ ಅಭಿಯಾನಕ್ಕೆ ಪ್ರತಿವರ್ಷ ಇಲ್ಲಿಗೆ ಬಂದು ಗೋರಿಗಳನ್ನು ನೋಡಿ ವಾಪಸ್​ ಹೋಗುವಂತಾಗಿ ಬೇಸರವಾಗಿದೆ. ಇದಕ್ಕೆ ಅಂತ್ಯ ಹಾಡಬೇಕೆಂಬುದು ದತ್ತಭಕ್ತರ ಒತ್ತಾಯ. ಈಗಾಗಲೇ ಬಿಜೆಪಿಯ ಕೆಲವರು ಸಾಕಷ್ಟು ವರ್ಷದಿಂದ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಕೋರ್ಟ್​ನಲ್ಲೂ ನಮ್ಮ ಪರವಾಗಿ ಹಲವು ನಿರ್ದೇಶನಗಳನ್ನು ನೀಡಿದರೂ ಸರ್ಕಾರ ಆ ಬಗ್ಗೆ ಗಮನಹರಿಸಿ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭಕ್ತರಿಂದ ದತ್ತ ಮಾಲಾಧಾರಣೆ:ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ನ.13ರಂದು ಶ್ರೀರಾಮ ಸೇನೆ ಹಮ್ಮಿಕೊಂಡಿರುವ 18ನೇ ವರ್ಷದ ದತ್ತಮಾಲೆ ಅಭಿಯಾನಕ್ಕೆ ಸೋಮವಾರ ಚಾಲನೆ ದೊರೆತಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ 200ಕ್ಕೂ ಅಧಿಕ ಭಕ್ತರು ಮಾಲಾಧಾರಣೆ ಮಾಡಿದರು. ನಗರದ ಬಸವನಹಳ್ಳಿ ಶ್ರೀ ಶಂಕರ ಮಠದಲ್ಲಿ ಬೆಳಗ್ಗೆ ದತ್ತಾತ್ರೇಯರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ದತ್ತನಾಮ ಸ್ಮರಣೆ, ಜಪ ತಪಗಳೊಂದಿಗೆ ಭಜನೆ ಮಾಡಿದರು.
ಚಂದ್ರು ಸಾವಿನ ಪ್ರಕರಣ: ಗೌರಿಗದ್ದೆ ಆಶ್ರಮಕ್ಕೆ ತನಿಖಾ ತಂಡ ಭೇಟಿ, ವಿನಯ್​ ಗುರೂಜಿಯನ್ನೂ ವಿಚಾರಣೆ ನಡೆಸಿದ ಪೊಲೀಸರು

ಶಿವಮೊಗ್ಗದಲ್ಲಿ ಭೀಕರ ಅಪಘಾತ: ಅತ್ತೆ-ಸೊಸೆ-ಮೊಮ್ಮಗಳು ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
