ಬೆಂಗಳೂರು:ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಮುಸ್ಲಿಮರಿಗೆ ಆದ್ಯತೆ ನೀಡಿರುವುದನ್ನು ಖಂಡಿಸಿರುವ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಈ ಕೂಡಲೇ ಮುಸ್ಲಿಮರಿಗೆ ನೀಡಿರುವ ಗುತ್ತಿಗೆ ಒಪ್ಪಂದವನ್ನು ರದ್ದು ಮಾಡಿ, ಆ ಜಾಗವನ್ನು ಮತ್ತೆ ಶುದ್ಧೀಕರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಇಂದು ನಗರದ ಪ್ರೆಸ್​ಕ್ಲಬ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಮೋದ್​ ಮುತಾಲಿಕ್​ ಅವರು ಮಾತನಾಡಿದರು. ಈ ವೇಳೆ ಅವರಿಗೆ ಶ್ರೀರಾಮಸೇನೆ ಮುಖಂಡರು ಸಹ ಸಾಥ್​ ನೀಡಿದರು.
ಇದನ್ನೂ ಓದಿ:ಅಸಹಕಾರದ ನಡುವೆ ಅಥ್ಲೆಟಿಕ್ ಆಯೋಜನೆ, ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ ಆಯೋಜಕರು
ಕೇಂದ್ರ ಸರ್ಕಾರ ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಟೆಂಡರ್ ನೀಡಿದೆ. ಇದು ಅತ್ಯಂತ ಖಂಡನೀಯ. ಟೆಂಡರ್​ ನೀಡುವ ಮೂಲಕ ನೂರು ಕೋಟಿ ಹಿಂದುಗಳಿಗೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಮುಸ್ಲಿಂ ಕೆಲಸಗಾರರು ಮತ್ತು ಗುತ್ತಿಗೆದಾರರನ್ನು ಹೊರಗೆ ಹಾಕಬೇಕು. ಅಯೋಧ್ಯೆ ರಾಮ ಮಂದಿರ ಪವಿತ್ರ ಕ್ಷೇತ್ರ. ಈ ಜಾಗ ಹಿಂದುಗಳಿಗೆ ಸೇರಿದೆ ಎಂದು ನ್ಯಾಯಾಲಯ ಹೇಳಿದೆ. ಮೊದಲ ಮನವಿಯನ್ನು ನಿನ್ನೆ ಮೈಸೂರಿನಲ್ಲಿ ಪೂಜ್ಯರ ಗಮನಕ್ಕೆ ತಂದಿದ್ದಿವಿ. ಗುತ್ತಿಗೆಯ ಒಪ್ಪಂದ ರದ್ದು ಮಾಡಬೇಕು ಮತ್ತು ಆ ಜಾಗವನ್ನು ಮತ್ತೆ ಶುದ್ಧೀಕರಿಸಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು.
ಅಯೋಧ್ಯೆ ಭೂಮಿಗಾಗಿ ಕಳೆದ 500 ವರ್ಷಗಳ‌ ನಿರಂತರ ಹೋರಾಟವಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅನೇಕ‌ ಪ್ರಸಂಗಗಳು ನಡೆದಿವೆ. ಸುಪ್ರೀಂಕೋರ್ಟ್​ನಿಂದ ಹಿಂದುಗಳ ಪರವಾಗಿ ತೀರ್ಪು ಬಂದಿದೆ. ಈ ಜಾಗದ ವಿಚಾರದಲ್ಲಿ ಅಡ್ಡಬಂದಿದ್ದು ಇದೇ ಮುಸ್ಲಿಮರು. ಬಾಬರ್​ನ ಮಸೀದಿ ಅಂತಾ ಮುಸ್ಲಿಮರು ಹಠ ಹಿಡಿದಿದ್ದರು. ಕೋರ್ಟ್ ತೀರ್ಪಿನ ನಂತರವೂ ಬಾಬರ್ ಮಸೀದಿ ಪುನರ್ ನಿರ್ಮಾಣದ ಬಗ್ಗೆ ಹೇಳ್ತಾನೇ ಇದಾರೆ. ಉಡುಪಿಯಲ್ಲಿ ಹಿಜಾಬ್ ಪ್ರಕರಣದ ಐವರಲ್ಲಿ ಓರ್ವ ವಿದ್ಯಾರ್ಥಿನಿ ಟ್ವೀಟ್ ಮಾಡಿ ಬಾಬರ್ ಮಸೀದಿ ನಿರ್ಮಾಣದ ಬಗ್ಗೆ ಮಾತಾಡ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಶ್ರೀರಾಮ ಜನ್ಮಭೂಮಿ ಹೆಸರಿನಲ್ಲಿ ಈಗಾಗಲೇ ಟ್ರಸ್ಟ್ ರಚನೆ ಮಾಡಲಾಗಿದೆ. ಆ ಟ್ರಸ್ಟ್​ನಲ್ಲಿ ಪೇಜಾವರ ಶ್ರೀಗಳು ಇದ್ದಾರೆ. ಮುಸ್ಲಿಮರಿಂದ ಅಯೋಧ್ಯೆ ಭೂಮಿಯಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಈಗ ಗರ್ಭಗುಡಿ ನಿರ್ಮಾಣದ ಟೆಂಡರ್ ಮುಸ್ಲಿಮರಿಗೆ ನೀಡಲಾಗಿದೆ. ಇದು ನೂರು ಕೋಟಿ ಹಿಂದೂಗಳಿಗೆ ಆಗಿರೋ ಅವಮಾನ. ಟ್ರಸ್ಟಿಗಳಾದ ಪೇಜಾವರ ಶ್ರೀಗಳಿಗೆ ವಿನಂತಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ನರ್ಸಿಂಗ್ ಮಾಡುವ ಮಹದಾಸೆಯಿಂದ ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿನಿಯ ಬದುಕು ದುರಂತ ಅಂತ್ಯ!
ರಾಜಸ್ತಾನ ಮೂಲದ ಕಂಪನಿಯ ಇಕ್ಬಾಲ್ ಮಿಸ್ತ್ರಿ ಎಂಬಾತನಿಂದ ಅಯೋಧ್ಯೆಯ ಕೆಲಸ ನೀಡಲಾಗಿದೆ. ಅಲ್ಲಾ ಒಬ್ಬನೇ ದೇವರು ಅನ್ನುವವನಿಗೆ ರಾಮನ ಗುಡಿ ನಿರ್ಮಾಣಕ್ಕೆ ಅವಕಾಶ ಹೇಗೆ ನೀಡಿದ್ರಿ? ಗೋಮಾಂಸ ಭಕ್ಷಕರು ಹಾಗೂ ದೇವರನ್ನು ನಂಬದವರಿಗೆ ಹೇಗೆ ಗುತ್ತಿಗೆ ಕೊಟ್ಟಿದ್ದೀರಿ? ಅವರನ್ನು ಕೂಡಲೇ ವಾಪಸ್ ಕಳುಹಿಸಬೇಕು. ನಿಮ್ಮ ಈ ನಿರ್ಧಾರ ಇಡೀ ವಿಶ್ವ ಕರ್ಮ ಸಮಾಜಕ್ಕೆ ಮಾಡಿದ ಅಪಮಾನ ಎಂದು ಮುತಾಲಿಕ್​ ಅವರು ತಿಳಿಸಿದರು.
ಒಂದು ವೇಳೆ ಟೆಂಡರ್ ರದ್ದಾಗದಿದ್ರೆ ಆದೋಲನ ಶುರುವಾಗುತ್ತದೆ. ಈಗಾಗಲೇ ಈ ಬಗ್ಗೆ 12 ರಾಜ್ಯಗಳ ಜೊತೆ ಚರ್ಚಿಸಿದ್ದೇವೆ. 12 ರಾಜ್ಯದವರು ನಮಗೆ ಬೆಂಬಲ ಸೂಚಿಸಿದ್ದಾರೆ. ಟೆಂಡರ್ ರದ್ದು ಮಾಡದಿದ್ರೆ ರಾಮಮಂದಿರ ಉದ್ಘಾಟನೆ ಆಗಲು ಬಿಡಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.(ದಿಗ್ವಿಜಯ ನ್ಯೂಸ್​)
ಸ್ಟುಡಿಯೋದಲ್ಲಿ ಮೃತದೇಹವಾಗಿ ಪತ್ತೆಯಾದ ಬಾಲಿವುಡ್​​ನ ಖ್ಯಾತ ಕಲಾ ನಿರ್ದೇಶಕ

ಈ ಅಜ್ಜಿಗಿದೆ ಸೂಪರ್​ ಪವರ್! ದಿನವೂ ಜಿಮ್​ಗೆ ತೆರಳಿ ಯುವಕರನ್ನು ನಾಚಿಸುವಂತೆ ಮಾಡ್ತಾರೆ ವ್ಯಾಯಾಮ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 14 =
Remember me
