ಬಾಗಲಕೋಟೆ:ಪುಣ್ಯಕ್ಷೇತ್ರ ಸಿದ್ಧನಕೊಳ್ಳದ ಸಿದ್ಧೇಶ್ವರ ಮಠದಿಂದ 2023ನೇ ಸಾಲಿನ ‘ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ’ಯನ್ನು ವಿಆರ್​ಎಲ್​ ಸಮೂಹ ಸಂಸ್ಥೆ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು.
ಮೂರು ದಿನಗಳ ಸಿದ್ಧಶ್ರೀ ಉತ್ಸವದಲ್ಲಿ ಎರಡನೇ ದಿನವಾದ ಭಾನುವಾರ ರಾತ್ರಿ ನಡೆದ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಾ.ವಿಜಯ ಸಂಕೇಶ್ವರ ಅವರಿಗೆ ಪ್ರಶಸ್ತಿ ವಿತರಿಸಲಾಯಿತು. “ವಿಜಯಾನಂದ” ಚಿತ್ರಕ್ಕೆ ಅತ್ಯುತ್ತಮ ಬಯೋಪಿಕ್​ ಪ್ರಶಸ್ತಿಯನ್ನೂ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.

ಸಿದ್ಧನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಡಾ. ವಿಜಯ ಸಂಕೇಶ್ವರ ಅವರಿಗೆ ಮೈಸೂರು ಪೇಟ, ಶಾಲು, ಹಾರ ಹಾಕಿ ಪಾರಿತೋಷಕ ಹಾಗೂ ನಗದು ಹಣದೊಂದಿಗೆ ಶ್ರೀ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲೆ, ಕಲಾವಿದರನ್ನು ಪೋತ್ಸಾಹಿಸುವ ಮಠ ಎಂದು ಖ್ಯಾತಿ ಪಡೆದಿರುವ ಸಿದ್ಧನಕೊಳ್ಳದ ಮಠದಿಂದ ಉತ್ಸವ ವೇಳೆ ಚಲನಚಿತ್ರೋತ್ಸವ ನಡೆಯುತ್ತಾ ಬಂದಿದ್ದು, ಈ ವರ್ಷದ ಅತ್ಯುತ್ತಮ ಬಯೋಫಿಕ್​ ಚಿತ್ರ ಎಂದು ವಿಜಯಾನಂದ ಚಿತ್ರಕ್ಕೆ ಶ್ರೀಮಠದಿಂದ ಚಿತ್ರತಂಡದ ಪರವಾಗಿ ಡಾ. ವಿಜಯ ಸಂಕೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾಯಕದಲ್ಲಿ ದೇವರನ್ನು ಕಾಣುವ ಡಾ. ಸಂಕೇಶ್ವರ ಅವರಿಗೆ ಈ ಪ್ರಶಸ್ತಿ ನೀಡಿದ್ದು, ಶ್ರೀಮಠ ಹಾಗೂ ಮಠದ ಭಕ್ತರಿಗೆ ಅಪಾರ ಸಂತೋಷ ತಂದಿದೆ. ಬಿಡುವಿಲ್ಲದ ಕರ್ತವ್ಯದ ಮಧ್ಯೆಯೂ ಸಿದ್ಧನಕೊಳ್ಳಕ್ಕೆ ಆಗಮಿಸಿ ನಮ್ಮ ಗೌರವ ಸ್ವೀಕರಿಸಿದ ಬಗ್ಗೆ ಮಠದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ಸಂತೋಷ ವ್ಯಕ್ತಪಡಿಸಿದರು.
ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಡಾ. ವಿಜಯ ಸಂಕೇಶ್ವರ ಅವರು ಮಠ, ಮಂದಿರ, ಪೂಜ್ಯರ ದರ್ಶನ, ಆಶೀರ್ವಾದ ಪಡೆಯುವುದು ಅನೇಕ ವರ್ಷಗಳಿಂದಲೂ ನಡೆಯುತ್ತಿದೆ. ಇದು ನನ್ನ ಹಿಂದಿನ ಜನ್ಮದ ಪುಣ್ಯ. ಬ್ಯಾಂಕ್​ ಅಕೌಂಟ್​ ಇಲ್ಲ, ಟ್ರಸ್ಟ್​ ಇಲ್ಲ. ಬಂದ ಕಾಣಿಕೆಯನ್ನು ಭಕ್ತರಿಗೆ ಕೊಡುತ್ತಿರುವ ಈ ಮಠದ ಕಾರ್ಯ ಅಚ್ಚರಿ ಹಾಗೂ ಆಶ್ಚರ್ಯ ತಂದಿದೆ. ಈ ಕ್ಷೇತ್ರದ ಮಹಿಮೆ ಅಪಾರವಾಗಿದ್ದು, ಇಲ್ಲಿಗೆ ನಾನು ಪ್ರಥಮ ಸಲ ಬಂದಿದ್ದೇನೆ. ಈ ಸ್ಥಳಕ್ಕೆ ಅನೇಕ ಸಾಧಕರು ಬಂದು ಹೋಗಿದ್ದು, ಇಲ್ಲಿಯ ಮಹಿಮೆ ಅಪಾರ ಎನ್ನುವುದು ಮನವರಿಕೆ ಆಗಿದೆ ಎಂದರು.
ನನಗೆ ಯಾವುದೇ ಪ್ರಶಸ್ತಿ ಬಂದಾಗಲೂ ಹಣವನ್ನು ನಾನು ಪಡೆಯಲ್ಲ. ಬರೀ ಪ್ರಶಸ್ತಿ ಮಾತ್ರ ಪಡೆಯುತ್ತೇನೆ. ಎಂಪಿ, ಎಂಎಲ್ಸಿ ಪೆನ್ಶನ್​ ಸಹ ನಾನು ತೆಗೆದುಕೊಳ್ಳಲ್ಲ. ಇಲ್ಲಿಯೂ ಪ್ರಶಸ್ತಿ ಹಣ ಬೇಡ ಎಂದರೂ ಸ್ವಾಮೀಜಿ ಇದು ಆಶೀರ್ವಾದ ಪಡೆಯಲೇಬೇಕು ಅಂತಿದ್ದಾರೆ. ಈ ಹಣವನ್ನು ಹುಬ್ಬಳ್ಳಿಯಲ್ಲಿ ನಿರ್ಮಾಣ ಮಾಡುತ್ತಿರುವ ದೇವಾಲಯಕ್ಕೆ ನಾಳೆಯೇ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸಿದ್ಧನಕೊಳ್ಳ ಕ್ಷೇತ್ರ ಅಭೂತಪೂರ್ವವಾಗಿ ಬೆಳೆಯಬೇಕು. ಮುಂದಿನ ಪೀಳಿಗೆಗೆ ಇದು ಉಳಿಯಬೇಕು. ಇಲ್ಲಿನ ಶ್ರೀಗಳು ದುಡ್ಡು ತೆಗೆದುಕೊಳ್ಳಲ್ಲ. ಹೀಗಾಗಿ ಮಠದ ಭಕ್ತರು, ಉತ್ಸವಗಳ ಪ್ರಾಯೋಜಕರು ಎಲ್ಲರೂ ಸೇರಿ ಕ್ಷೇತ್ರ ಅಭಿವೃದ್ಧಿಪಡಿಸಿ, ನಾನು ಸಹ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದರು.
ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ, ಬಿಜೆಪಿ ಯುವ ಮುಖಂಡ ಡಾ. ಆರ್​.ಎಸ್​. ರಾಜು, ಮಲ್ಲಿಕಾರ್ಜುನ ಚರಂತಿಮಠ, ಚಿತ್ರ ನಿರ್ಮಾಪಕ ಘನಶಾಮ ಭಾಂಡಗೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲೂಕಿನ ಸಿದ್ಧನಕೊಳ್ಳದಲ್ಲಿ ಭಾನುವಾರ ರಾತ್ರಿ ಸಿದ್ಧೇಶ್ವರ ಮಠದಿಂದ 2023ನೇ ಸಾಲಿನ ಶ್ರೀ ಸಿದ್ಧಶ್ರೀ ಪ್ರಶಸ್ತಿಯನ್ನು ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು. ಶ್ರೀಮಠದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ, ಶಾಸಕ ದೊಡ್ಡನಗೌಡ ಪಾಟೀಲ, ಡಾ. ಆರ್​.ಎಸ್​.ರಾಜು, ಮಲ್ಲಿಕಾರ್ಜುನ ಚರಂತಿಮಠ, ನಶಾಮ ಭಾಂಡಗೆ ಇತರರಿದ್ದರು.
ಚಿಕ್ಕಬಳ್ಳಾಪುರಲ್ಲಿ ಆದಿಯೋಗಿ ಪ್ರತಿಮೆ ಅನಾವರಣ: ಮೈಮರೆಸಿದ ಆದಿಯೋಗಿ ಸಾಕ್ಷಾತ್ಕಾರ, ಆಧ್ಯಾತ್ಮಿಕ ಕಲಾ ಪ್ರದರ್ಶನ

ಈ ಗ್ರಾಮದಲ್ಲಿ ಪೋಸ್ಟ್​ ಬೇಕು ಅಂದರೆ ಪೋಸ್ಟ್​ಮ್ಯಾನ್​ ಮನೆಗೆ ಹೋಗಬೇಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 15 =
Remember me
