ಒಮನ್​:ಮೇ 17 ಹಾಗೂ 19ರಂದು ಒಮನ್‌ ದೇಶದ ದೇಶದ ರಾಜಧಾನಿ ಮಸ್ಕತ್‌ ಮತ್ತು ದುಬೈ ನಗರಗಳಲ್ಲಿ ನಡೆಯಲಿರುವ ಬಸವಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆಯಿಂದ ಪ್ರಯಾಣ ಆರಂಭಿಸಿದರು.
ಸಿರಿಗೆರೆಯಿಂದ ಬೆಂಗಳೂರಿಗೆ ದಯಮಾಡಿಸುವ ಪೂರ್ವದಲ್ಲಿ ಐಕ್ಯ ಮಂಟಪಕ್ಕೆ ಆಗಮಿಸಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ, ಲಿಂಗೈಕ್ಯ ಶ್ರೀ ಗುರುಶಾಂತ ದೇಶಿಕೇಂದ್ರ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲ ಜಿ.ಜಿ. ಸೋಮಶೇಖರಪ್ಪ, ಚಿತ್ರದುರ್ಗ ವಿಶ್ವಬಂಧು ಬ್ಯಾಂಕ್‌ ಅಧ್ಯಕ್ಷ ಜಿ.ಬಿ. ತೀರ್ಥಪ್ಪ, ಸಿರಿಗೆರೆ ವ್ಯವಸಾಯ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್‌, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್‌. ಮರುಳಸಿದ್ದಯ್ಯ ಸಿರಿಗೆರೆ ಸುತ್ತ ಮುತ್ತಲಿನ ನೂರಾರು ಗ್ರಾಮಸ್ಥರು ಹಾಜರಿದ್ದರು.
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ರೈತಮುಖಿ, ನ್ಯಾಯಮುಖಿ, ಹೀಗೆ ನೂರಾರು ಸೇವಾಕೈಂಕರ್ಯಗಳು ವಿಶ್ವವ್ಯಾಪಿ ಮನ್ನಣೆಗೆ ಪಾತ್ರವಾಗಿವೆ. ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಜರುಗಿದ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಕ್ರಾಂತಿಯು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಯುಗಪುರುಷ ಬಸವಣ್ಣನವರ ನೇತೃತ್ವದಲ್ಲಿ ರೂಪಗೊಂಡ ಸಮಾಜೋ ಧಾರ್ಮಿಕ ಈ ಆಂದೋಲನದ ಉಪ ಉತ್ಪನ್ನವೇ ವಚನ ಸಾಹಿತ್ಯ. ಈ ವಚನ ಸಾಹಿತ್ಯವು ವಿಶ್ವಸಾಹಿತ್ಯಕ್ಕೆ ಕನ್ನಡ ನೀಡಿದ ಅಪೂರ್ವ ಕೊಡುಗೆ. ಇಂತಹ ವಚನ ಸಾಹಿತ್ಯವನ್ನು 20ನೆಯ ಶತಮಾನದಲ್ಲಿ ಬಹುಮುಖದಲ್ಲಿ ಪ್ರಚುರಪಡಿಸಿದ ಕೀರ್ತಿ ಹಿರಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರದು.
ಪರಮಪೂಜ್ಯರು ವಚನ ಸಾಹಿತ್ಯದ ಪರಿಮಳವನ್ನು ರಂಗಭೂಮಿ, ಉಪನ್ಯಾಸ, ಸಂಗೀತ, ಪುಸ್ತಕ ಪ್ರಕಟಣೆ ಮುಂತಾದ ಬಹುಮಾಧ್ಯಮಗಳ ಮೂಲಕ ನಾಡಿನ ತುಂಬೆಲ್ಲಾ ಪಸರಿಸುವಂತೆ ಮಾಡಿದರು. ವಚನ ಸಾಹಿತ್ಯವನ್ನು ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಿಗೆ ಶ್ರೀಮಠದಿಂದ ಅನುವಾದ ಮಾಡಿಸಿದ್ದು ವಚನ ಸಾಹಿತ್ಯದ ಇತಿಹಾಸದಲ್ಲಿ ದಾಖಲಾರ್ಹವಾದ ಸ್ಮರಣೀಯ ಕೆಲಸ. ಪೂಜ್ಯರು ವಚನ ಸಾಹಿತ್ಯದ ಪ್ರಚಾರದ ಬಗ್ಗೆ ಕಂಡ ಇನ್ನಷ್ಟು ಕನಸುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನನಸು ಮಾಡುತ್ತಿರುವುದು ಪ್ರಸ್ತುತ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಪವಿತ್ರ ಕ್ಷೇತ್ರ ಕೂಡಲ ಸಂಗಮವು ,ಕೃಷ್ಣ ಮೇಲ್ದಂಡೆ ಅಣೆಕಟ್ಟಿನ ಯೋಜನೆಯಲ್ಲಿ ನಿರ್ಮಾಣವಾಗುತ್ತಿದ್ದ ನಾರಾಯಣಪುರ ಅಣೆಕಟ್ಟು ಪೂರ್ಣಗೊಂಡರೆ,ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಮಂಟಪ ,ಕೃಷ್ಣೆಯ ದಡದ ಮೇಲಿರುವ ಸಂಗಮೇಶ್ವರ ದೇವಾಲಯ,ಅದರ ಎದುರು ಅನತಿದೂರದಲ್ಲಿರುವ ನೀಲಮ್ಮನ ಗುಡಿ;ಈ ಎಲ್ಲಾ ಸ್ಮಾರಕಗಳು ಜಲಾಶಯದ ಗರ್ಭದಲ್ಲಿ ಅಡಗಿಹೋಗುವ ಸಂಭವವಿದ್ದಾಗ,ಜಲಾಶಯದ ಅಗತ್ಯ ಮತ್ತು ಅನುಕೂಲಗಳನ್ನು ಒಪ್ಪಿಕೊಂಡರು,ನಮ್ಮ ಮಹತ್ತರವಾದ ಸಂಸ್ಕೃತಿಯ ಸ್ಮಾರಕವೇ ಇಲ್ಲದಾಗುತ್ತದೆಂಬುದನ್ನು ಸುಲಭವಾಗಿ ಒಪ್ಪಿಕೊಳ್ಳದೆ,ವ್ಯಕ್ತಿ ಪ್ರತಿಷ್ಠೆಯಿಂದ ಬಂದ ಅಷ್ಟೂ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ,ತತ್ವ ನಿಷ್ಠವಾದ ಮತ್ತು ವ್ಯಾಪಕ ದೃಷ್ಟಿಯಿಂದ ಪರಿಗಣಿಸಿ ತಜ್ಞರ,ಧಾರ್ಮಿಕ ಮುಖಂಡರ, ವಿಚಾರವಂತರ ನೂರಾರು ಸಭೆ ಸಮಾಲೋಚನೆ ಮಾಡಿಸಿ,ಕೂಲಂಕುಷ ಅಧ್ಯಯನಗೈದು 1980ರಲ್ಲಿ “ಕೂಡಲಸಂಗಮದ ಪುನರುಜ್ಜೀವನ”ಕ್ಕೆ ಅಂದಿನ ರಾಷ್ಟ್ರಪತಿಯವರಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಯೋಜನೆಯ ಲೋಪಗಳನ್ನು ಅಮೂಲಾಗ್ರವಾಗಿ ಮನವರಿಕೆ ಮಾಡಿ ಕೂಡಲ ಸಂಗಮದ ಇಂದಿನ ಉಚ್ಛ್ರಾಯ ಸ್ಥಿತಿಗೆ ಹಗಲಿರುಳು ಶ್ರಮ ಪಟ್ಟು ಕಾರಣವಾದವರು ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಬಸವಣ್ಣನವರ ಸಂಪೂರ್ಣ ವಚನಗಳನ್ನು ಮೂರು ದಶಕಗಳ ಹಿಂದೆಯೇ ಇಂಟರ್ ನೆಟ್ ನಲ್ಲಿ ಅಳವಡಿಸುವ ಮೂಲಕ ವಿಶ್ವಾದ್ಯಂತ ವಚನಗಳು ಮತ್ತು ಅದರ ಸ್ವಾರಸ್ಯಾರ್ಥವನ್ನು ಸರಳವಾಗಿ ವಿಶ್ಲೇಷಿಸಿದ ಕರ್ಮಯೋಗಿಗಳು. ಬಸವಾದಿ ಶರಣರ ತತ್ವ ಪ್ರಸಾರಕ್ಕೆ ನೂರಾರು ಕಾರ್ಯಕ್ರಮಗಳು,ಸಾಹಿತ್ಯ ಕೃತಿಗಳ ರಚನೆ,ಶರಣರ ಸಿದ್ದಾಂತಗಳನ್ನು ನಾಟಕಗಳ ಮೂಲಕ ದೇಶದಲ್ಲಿಯೇ ಮೊದಲ ಪ್ರಯೋಗವೆಂಬಂತೆ ಅಭಿವ್ಯಕ್ತಿಗೊಳಿಸಿದ್ದು ತರಳಬಾಳು ಮಠ.
90ರ ದಶಕದಲ್ಲಿಯೇ ಶ್ರೀ ಜಗದ್ಗುರುಗಳವರು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಇಡೀ ವಚನ ಸಾಹಿತ್ಯವನ್ನು ಬೆರಳತುದಿಯಲ್ಲಿ ನಿಲುಕುವಂತೆ ಮಾಡಿದ ಏಕಮಾತ್ರರು. “ಗಣಕ ಋಷಿ” ಎಂಬ ಬಿರುದಿಗೆ ಭಾಜನರಾದ ಪೂಜ್ಯರು ಭಾರತದಲ್ಲಿ ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ಕಣ್ಣು ಬಿಡುತ್ತಿದ್ದ ಕಾಲ. ಕ್ರಿಸ್ತ ಪೂರ್ವದ ಸಂಸ್ಕೃತದ ವೈಯ್ಯಾಕರಣಿ ಪಾಣಿನಿ ಮಹರ್ಷಿಯ “ಅಷ್ಟಾಧ್ಯಾಯಿ” ಎಂಬ ವ್ಯಾಕರಣ ಗ್ರಂಥವನ್ನು ಮತ್ತು ಬಸವಾದಿ ಶಿವಶರಣರ22000 ವಚನಗಳನ್ನು ಕಂಪ್ಯೂಟರೀಕರಣ ಮಾಡಿ, “ಗಣಕಾಷ್ಟಾಧ್ಯಾಯಿ” ಮತ್ತು “ಗಣಕ ವಚನ” ಸಾಫ್ಟ್ ವೇರ್ ಸಿದ್ಧಪಡಿಸಿದ್ದು ಪೂಜ್ಯರ ತಂತ್ರಜ್ಞಾನದ ಆಸಕ್ತಿಯ ಫಲ.
ಕಂಪ್ಯೂಟರ್ ತಂತ್ರಜ್ಞಾನವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೇಗೆ ಬಳಸಿಕೊಳ್ಳುಬಹುದು ಎಂಬುದನ್ನು ಮೊದಲು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಶ್ರೀ ತರಳಬಾಳು ಜಗದ್ಗುರುಗಳವರದು. ಪೂಜ್ಯರ ಈ ಕೊಡುಗೆಯಿಂದ ಇಂದು ಜಗದಗಲ ಶಿವಶರಣರ ವಚನ ಸಾಹಿತ್ಯ ಮತ್ತು ಪಾಣಿನಿಯ ಅಷ್ಟಾಧ್ಯಾಯಿ ಕ್ಷಣಮಾತ್ರದಲ್ಲಿ ಆಸಕ್ತರಿಗೆ ದೊರಕುವಂತಾಗಿದೆ.ಇದೀಗ ಗಣಕ ವಚನ ಸಾಫ್ಟ್ ವೇರ್ ನ್ನು ಪರಿಷ್ಕರಿಸಿ, ಈ ಕ್ಷಣದ ತಂತ್ರಜ್ಞಾನಕ್ಕೆ ತಕ್ಕಂತೆ ಇನ್ನಷ್ಟು ಆಧುನೀಕರಣಗೊಳಿಸಿ ಮೊಬೈಲ್ ಆ್ಯಪ್ ನಲ್ಲೂ ದೊರಕುವಂತೆ ಮಾಡಲಾಗಿದೆ.
ಸೇವೆಯಿಂದಲೆ ಸುದ್ದಿಯಾಗುವ ಶ್ರೀಜಗದುರುಗಳವರು ಬಸವಾದಿ ಶರಣರ ಸಂಪೂರ್ಣ ವಚನಗಳನ್ನು ಮೂರು ದಶಕಗಳ ಹಿಂದೆಯೇ ಇಂಟರ್ ನೆಟ್ ನಲ್ಲಿ ಅಳವಡಿಸುವ ಮೂಲಕ ವಿಶ್ವಾದ್ಯಂತ ವಚನಗಳು ಮತ್ತು ಅದರ ಸ್ವಾರಸ್ಯಾರ್ಥವನ್ನು ಸರಳವಾಗಿ ವಿಶ್ಲೇಷಿಸಿ ಬಸವಣ್ಣನವರನ್ನು ನಿಜಾರ್ಥದಲ್ಲಿ ವಿಶ್ವಗುರುವಾಗಿಸಿದ ಕರ್ಮಯೋಗಿಗಳು. ಬಸವಣ್ಣನವರ ತತ್ವ ಪ್ರಸಾರಕ್ಕೆ ನೂರಾರು ಕಾರ್ಯಕ್ರಮಗಳು, ಸಾಹಿತ್ಯ ಕೃತಿಗಳ ರಚನೆ, ಶರಣರ ಸಿದ್ದಾಂತಗಳನ್ನು ನಾಟಕಗಳ ಮೂಲಕ ದೇಶದಲ್ಲಿಯೇ ಮೊದಲ ಪ್ರಯೋಗವೆಂಬಂತೆ ಅಭಿವ್ಯಕ್ತಿಗೊಳಿಸಿದ್ದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
