ಬೆಂಗಳೂರು: ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸೆಪ್ಟೆಂಬರ 27, ಶುಕ್ರವಾರದಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ವಿರಾಟ್ ವಿಶ್ವಕರ್ಮ ಮಹೋತ್ಸವ, ವಿಶ್ವಕರ್ಮ ಶ್ರೀ, ಮತ್ತು ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಬಿ. ಎಂ. ಉಮೇಶ್ ಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ನಡೆದ ಮಹೋತ್ಸವದ ಆಹ್ವಾನ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.ಈ ಬಾರಿ ಸಮಾರಂಭ ಬಹಳ ವೈವಿಧ್ಯತೆಯಿಂದ ಕೂಡಿದೆ. ಈಗಾಗಲೇ ಸಮಾರಂಭದ ಪೂರ್ವ ತಯಾರಿ ಭರದಿಂದ ಸಾಗಿದ್ದು,ವಿಶ್ವಕರ್ಮ ಸಮುದಾಯದ ಹಾಗೂ ಸರ್ವ ಸಮುದಾಯದ ಯತಿವರೇಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜತಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಣ್ಯ ಸಚಿವರು, ಸಂಸದರು, ಶಾಸಕರು, ಹಲವು ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಪಾಲ್ಗೋಳ್ಳಲಿದ್ದಾರೆ. ಈ ವೇಳೆ ವಿಶ್ವಕರ್ಮ ಶ್ರೀ ಮತ್ತು ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಮುಖ್ಯ ಕಾರ್ಯದರ್ಶಿ ಕೆ. ಚಂದ್ರಶೇಖರ ಆಚಾರಿ, ಶಿಲ್ಪಿ ಹೊನ್ನಪ್ಪ ಚಾರ್,ಮಧುಸೂದನ್ ಡಾ.ಬಿ.ಆರ್.ಹಿರೇಮಠ್, ಚಿತ್ತಾರ ಶಿವಕುಮಾರ್, ಎಸ್. ರವಿ , ಬಾಬು ಪತ್ತಾರ್, ಜಿ.ಶಂಕರ್, ಈಶ್ವರ ಆಚಾರಿ,ಚಳ್ಳಕೆರೆ ಪ್ರಸನ್ನ ಕುಮಾರ್, ಶಿಲ್ಪಿ ನಂಜುಂಡಸ್ವಾಮಿ, ಶ್ರೀ ಚಂದ್ರ ಆಚಾರ್ ಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
