ಹುಬ್ಬಳ್ಳಿ:ಶ್ರೀ ವಿಶ್ವೇಶತೀರ್ಥ ಗುರುಗಳು ತಮ್ಮ ಜೀವನದ ಪ್ರತಿ ಗಳಿಗೆಯಲ್ಲೂ ಕೃಷ್ಣ ಮತ್ತು ಮಧ್ವಾಚಾರ್ಯರ ಸಂದೇಶವನ್ನು ತಪ್ಪದೇ ಪಾಲಿಸಿದರು. ತಮ್ಮ ಇಡೀ ಜೀವನವನ್ನು ಆಧ್ಯಾತ್ಮ ಗ್ರಂಥಗಳ ಪಾಠ-ಪ್ರವಚನದಲ್ಲಿಯೇ ಕಳೆದರು. ಸನ್ಮಾರ್ಗದಲ್ಲಿ ಬದುಕುವ ರೀತಿಯನ್ನು ತಿಳಿಸಿಕೊಟ್ಟರು. ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಶ್ರೀ ವಿಶ್ವೇಶತೀರ್ಥ ಸೇವಾ ಸಂಘದ ವತಿಯಿಂದ ವಾದಿರಾಜ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ವಿದ್ಯಾನಗರದ ಎಬಿಎಂಎಂ ಹಾಸ್ಟೇಲ್​ನಲ್ಲಿ ಗುರುವಾರ ಜರುಗಿದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರಥಮ ಸಮಾರಾಧನೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಆಚಾರ್ಯ ಮಧ್ವರಂತೆ ಶ್ರೀಪಾದರಲ್ಲೂ ಅಸಾಧಾರಣ ಗುಣ ಗಳಿವೆ. ಸದಾಕಾಲ ಹುಬ್ಬಳ್ಳಿ ಜನರನ್ನು ಅವರು ಸ್ಮರಿಸುತ್ತಿದ್ದರು. ಅವರಿಗೆ ನೀಡಿದ ಸಹಕಾರವನ್ನೇ ನಮ್ಮ ಕಾಲದಲ್ಲಿಯೂ ಅಪೇಕ್ಷಿಸುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.
ವಿದ್ವಾಂಸ ಶ್ರೀಕಾಂತ ಬಾಯರಿ ಆಚಾರ್ಯರು ಮಾತನಾಡಿ, ಗುರುಗಳು, ಬುದ್ಧಿಜೀವಿಗಳು, ಅಧ್ಯಾತ್ಮ ಬಂಧುಗಳಿಗೆ ಕೊಂಡಿಯಂತಿದ್ದರು. ತಮ್ಮ ಸಿದ್ಧಾಂತ ಪ್ರತಿಪಾದನೆಯಲ್ಲಿ ಎಂದಿಗೂ ಸೋಲದ ಶ್ರೀಗಳು ಹಲವು ಸಲ ಬುದ್ಧಿಜೀವಿಗಳ ಬಾಯಿಯಿಂದಲೇ ‘ನಾನು ಹಿಂದು’ ಎಂದು ಹೇಳಿಸಿದ್ದರು ಎಂದು ಸ್ಮರಿಸಿದರು.
ವಿದ್ವಾಂಸ ವಿಠೋಬ ಆಚಾರ್ಯ ಮಾತನಾಡಿ, ಗುರುಗಳು ಹರಿಜನಕೇರಿ ಪ್ರವೇಶ ಮಾಡಿ ಎಲ್ಲ ದಲಿತರನ್ನು ಒಗ್ಗೂಡಿಸಿ ನಾವೆಲ್ಲರೂ ಹಿಂದುಗಳು ಎಂಬ ಭಾವನೆ ಬಿತ್ತುವ ಮೂಲಕ ಧರ್ಮದ ರಕ್ಷಣೆಗೆ ಕಾರಣೀಭೂತರಾಗಿದ್ದರು ಎಂದು ನೆನಪಿಸಿಕೊಂಡರು. ಪೂರ್ಣಪ್ರಜ್ಞ ವಿದ್ಯಾಪೀಠದ ನರಸಿಂಹಾಚಾರ್ಯ ಕಟ್ಟಿ ಮಾತನಾಡಿದರು. ಪ್ರಮುಖರಾದ ಕೃಷ್ಣಮೂರ್ತಿ ಆಚಾರ್ಯ, ಶ್ರೀಕಾಂತ ಕೆಮ್ತೂರ, ಗೋಪಾಲ ಕುಲಕರ್ಣಿ, ಗುರುರಾಜ ಬಾಗಲಕೋಟೆ, ಗೋವಿಂದ ಮೈಸೂರು, ಮತ್ತಿತರರು ಉಪಸ್ಥಿತರಿದ್ದರು. ಸತ್ಯಮೂರ್ತಿ ಆಚಾರ್ಯ ನಿರೂಪಿಸಿದರು.
ದೇಣಿಗೆ ಸಂಗ್ರಹ ಅಭಿಯಾನ 15ರಿಂದ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಜ.15ರಿಂದ 45 ದಿನಗಳ ಕಾಲ ಮನೆ- ಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವ ಅಭಿಯಾನ ಆರಂಭಿಸಲಿದ್ದಾರೆ ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಎಚ್​ಪಿ ಪಡೆ ದೊಡ್ಡದಿರುವ ಕಾರಣ ದೇಣಿಗೆ ಸಂಗ್ರಹ ಜವಾಬ್ದಾರಿ ಅವರಿಗೆ ನೀಡಲಾಗಿದೆ. ಮಂದಿರ ನಿರ್ವಣಕ್ಕೆ ಎಲ್ಲರೂ ಕೈಜೋಡಿಸಬೇಕು. ಕನಿಷ್ಠ 10 ರೂ.ನಿಂದ ಎಷ್ಟು ಬೇಕಾದರೂ ಕೊಡಬಹುದು. 2,000ರೂ. ಮೇಲ್ಪಟ್ಟು ನೀಡಿದರೆ ರಸೀದಿ ನೀಡಲಾಗುವುದು ಎಂದರು. ಗೋಹತ್ಯೆ ನಿಷೇಧ ಕಾಯ್ದೆ ಅಗತ್ಯವಾಗಿ ನಿಷೇಧಿಸಬೇಕು ಎಂಬುದು ನಮ್ಮ ಆಶಯವಾಗಿತ್ತು. ಅದನ್ನು ಸಕಾರಾಗೊಳಿಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − twelve =
Remember me
