ಮಂಗಳೂರು:ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎ.ಸದಾನಂದ ಶೆಟ್ಟಿ ನೇತೃತ್ವದಲ್ಲಿ 1992ರಲ್ಲಿ ಸ್ಥಾಪನೆಯಾದ ಶ್ರೀದೇವಿ ಇನ್​ಸ್ಟಿ್ಟ ಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ, ಇಂದು ದೇಶದಲ್ಲಿಯೇ ಹೆಸರುವಾಸಿ ಆಗಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ವಿವಿಧ ವೃತ್ತಿಪರ ಶಿಕ್ಷಣಕ್ಕೆ ವಿಪುಲ ಅವಕಾಶ ಕಲ್ಪಿಸಿದೆ. ಶ್ರೀದೇವಿ ಇನ್​ಸ್ಟಿ್ಟ್ಯೂಟ್ ಆಫ್ ಟೆಕ್ನಾಲಜಿಯ ಶ್ರೇಷ್ಠತೆ, ಬೋಧನೆ, ಮೂಲಸೌಕರ್ಯ, ಸಮಗ್ರ ಪ್ರಗತಿ ಗುರುತಿಸಿ 2016ರಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಸಿಎಂಎಐ ಅಸೋಸಿಯೇಷನ್ ನೇತೃತ್ವದಲ್ಲಿ ಆಯೋಜಿಸಲಾದ 2ನೇ ರಾಷ್ಟ್ರೀಯ ಕರ್ನಾಟಕ ಶಿಕ್ಷಣ ಶೃಂಗಸಭೆಯಲ್ಲಿ ಎಕ್ಸಲೆಂಟ್ ಇಂಜಿನಿಯರಿಂಗ್ ಕಾಲೇಜ್ ಇನ್ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರ‍್ಯಾಂಕ್​ ಸಾಧನೆ:2018-19ರಲ್ಲಿ ವಿಟಿಯು ಪರೀಕ್ಷೆಯಲ್ಲಿ ಬಿಇ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ 6ನೇ ರ‍್ಯಾಂಕ್​, ಎಂ.ಟೆಕ್​ನಲ್ಲಿ 6 ಮತ್ತು 9ನೇ ರ‍್ಯಾಂಕ್​, ಎಂಸಿಎ ಯಲ್ಲಿ 1, 2, 3 ಮತ್ತು 6ನೇ ರ‍್ಯಾಂಕ್​, ಎಂಬಿಎಯಲ್ಲಿ 2, 3ನೇ ಮತ್ತು 10ನೇ ರ‍್ಯಾಂಕ್​ ಅನ್ನು ಕಾಲೇಜಿನ ವಿದ್ಯಾರ್ಥಿಗಳು ಪಡೆದಿದ್ದಾರೆ. ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ 2019ನೇ ಸಾಲಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್​ನಲ್ಲಿ ಶೇ.100, ಸಿವಿಲ್ ಇಂಜಿನಿಯರಿಂಗ್- ಶೇ.97, ಕಂಪ್ಯೂಟರ್ ಸೈನ್ಸ್- ಶೇ.100, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್- ಶೇ.98, ಇನ್​ಫಾರ್ವೇಶನ್ ಸೈನ್ಸ್- ಶೇ.100, ಮೆಕಾನಿಕಲ್ ಇಂಜಿನಿಯರಿಂಗ್- ಶೇ.98, ಎಂಬಿಎ, ಎಂಸಿಎ ಮತ್ತು ಎಂಟೆಕ್​ನಲ್ಲಿ ಶೇ.100 ಫಲಿತಾಂಶ ಲಭಿಸಿದೆ.
ಉದ್ಯೋಗ ನೇಮಕಾತಿ:ಕಾಲೇಜಿನ ಪ್ಲೇಸ್​ವೆುಂಟ್ ಸೆಲ್ ವಿವಿಧ ಕಂಪನಿಗಳೊಂದಿಗೆ ಉತ್ತಮ ಸಂಪರ್ಕ ಕಾಯ್ದುಕೊಂಡಿದ್ದು, ಮೂರು ಶ್ಯೆಕ್ಷಣಿಕ ವರ್ಷಗಳಲ್ಲಿ 1500 ಮಂದಿಗೆ ಉದ್ಯೋಗ ನೇಮಕಾತಿ ಮಾಡಿದೆ. ಪ್ರಸಕ್ತ ಸಾಲಿನಲ್ಲಿ 500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
ಸಂಶೋಧನಾ ಒಡಂಬಡಿಕೆ:ಸಂಶೋಧನೆ, ಅಭಿವೃದ್ಧಿ, ತರಬೇತಿ ದೃಷ್ಟಿಯಿಂದ ಅಮೆರಿಕದ ನಾರ್ತ್ ಡಕೋಟಾ ಸ್ಟೇಟ್ ವಿ.ವಿ. ಜತೆ ಶ್ರೀದೇವಿ ಸಂಸ್ಥೆ ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆ ಮಾಡಿಕೊಂಡಿದೆ. ಕಾಲೇಜಿನಲ್ಲಿ ಅತ್ಯಾಧುನಿಕ ಕಟ್ಟಡಗಳು, ಸೆಮಿನಾರ್ ಹಾಲ್, ಸುಸಜ್ಜಿತ ಗ್ರಂಥಾಲಯ, ನವೀನ ಮಾದರಿ ಪ್ರಯೋಗಾಲಯ, ಹೈಸ್ಪೀಡ್ ಇಂಟರ್ನೆಟ್ ಇನ್ನಿತರ ಮೂಲಸೌಕರ್ಯವಿದೆ. ನುರಿತ ಶಿಕ್ಷಕ ವೃಂದ ಉತ್ತಮ ಫಲಿತಾಂಶವನ್ನು ನೀಡುವಲ್ಲಿ ಸಫಲವಾಗಿದೆ. ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆ ಗಳಿಗೂ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ವೃತ್ತಿಪರ ಶಿಕ್ಷಣ ಹಾಗೂ ವಿದ್ಯಾರ್ಥಿವೇತನದ ಸೌಲಭ್ಯ ನೀಡಲಾಗುತ್ತಿದೆ. ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಲಭ್ಯವಿದೆ.
ಶ್ರೀದೇವಿ ವಿದ್ಯಾಸಂಸ್ಥೆಯ ಅಂಗಸಂಸ್ಥೆಗಳಾದ ಶ್ರೀದೇವಿ ಇನ್​ಸ್ಟಿ್ಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಬಿಇ, ಎಂಬಿಎ, ಎಂಸಿಎ, ಎಂಟೆಕ್ ಮತ್ತು ಪಿಎಚ್​ಡಿ, ಶ್ರೀ ದೇವಿ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಬಿ ಫಾರ್ಮ, ಎಂ ಫಾರ್ಮ, ಪಾರ್ಮ ಡಿ ಮತ್ತು ಪಿಎಚ್​ಡಿ, ಶ್ರೀದೇವಿ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ಬಿಪಿಟಿ ಮತ್ತು ಎಂಪಿಟಿ, ಶ್ರೀದೇವಿ ಕಾಲೇಜ್ ಆಫ್ ನರ್ಸಿಂಗ್​ನಲ್ಲಿ ಬಿಎಸ್​ಸಿ ಮತ್ತು ಎಂಎಸ್​ಸಿ ನರ್ಸಿಂಗ್, ಶ್ರೀದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್​ವೆುಂಟ್​ನಲ್ಲಿ ಬಿಎಚ್​ಎಸ್, ಬಿಎಸ್​ಸಿ, ಫುಡ್ ಟೆಕ್ನಾಲಜಿ ಮತ್ತು ಬಿಎಸ್​ಸಿ ಫುಡ್ ನ್ಯೂಟ್ರೀಶಿಯನ್ ಆಂಡ್ ಡಯಟಿಕ್ಸ್, ಶ್ರೀದೇವಿ ಕಾಲೇಜ್ ಆಫ್ ಫ್ಯಾಶನ್ ಡಿಸೈನ್​ನಲ್ಲಿ ಬಿಎಸ್​ಸಿ ಎಫ್​ಡಿ, ಶ್ರೀದೇವಿ ಕಾಲೇಜ್ ಆಫ್ ಇಂಟಿರಿಯರ್ ಡಿಸೈನ್​ನಲ್ಲಿ ಬಿಎಸ್​ಸಿ ಐಡಿ ಆಂಡ್ ಟಿ, ಶ್ರೀದೇವಿ ಕಾಲೇಜ್ ಆಫ್ ಇನ್​ಫಾರ್ವೇಶನ್ ಸೈನ್ಸ್​ನಲ್ಲಿ ಬಿಸಿಎ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡಾಟಾ ಅನಾಲಿಟಿಕ್ಸ್ ಆಂಡ್ ಸೈಬರ್ ಸೆಕ್ಯುರಿಟಿ, ಶ್ರೀದೇವಿ ಕಾಲೇಜ್ ಆಫ್ ಸೋಷಿಯಲ್ ವರ್ಕ್​ನಲ್ಲಿ ಎಂಎಸ್​ಡಬ್ಲ್ಯು, ಶ್ರೀದೇವಿ ಕಾಲೇಜ್​ನಲ್ಲಿ ಬಿಬಿಎ, ಬಿಕಾಂ, ಎವಿಯೇಷನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್​ವೆುಂಟ್, ಲಾಜಿಸ್ಟಿಕ್ ಆಂಡ್ ಸಪ್ಲೈಚೈನ್ ಮ್ಯಾನೇಜ್​ವೆುಂಟ್ ಕೋರ್ಸ್ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್​ಸೈಟ್ ಡಿಡಿಡಿ.ಠಛ್ಚ.ಚ್ಚ.ಜ್ಞಿ ಹಾಗೂ ದೂರವಾಣಿ ಸಂಖ್ಯೆ 0824 2457937, 2456501 ಸಂರ್ಪಕಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 10 =
Remember me
