ಕರೊನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಲಾಕ್​ಡೌನ್ ಅವಧಿ ಚಾಲ್ತಿಯಲ್ಲಿದೆ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಅನೇಕರು ಚಾಚೂ ತಪ್ಪದೆ ಪಾಲಿಸ್ತಿದ್ದಾರೆ. ಆದಾಗ್ಯೂ, ಮನೆಯಲ್ಲಿ ಇರುವವರನ್ನು ಲವಲವಿಕೆಯೊಂದಿಗೆ ಇರುವುದಕ್ಕೆ ಬೇಕಾದ ಚಿಂತನೆ/ ಪ್ರೇರಣೆಯನ್ನು ಒದಗಿಸುವ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಇದೇ ರೀತಿ ದಿಗ್ವಿಜಯ ನ್ಯೂಸ್ ಚಾನೆಲ್ ಮೂಲಕ ನಿತ್ಯವೂ ಲಾಕ್​ಡೌನ್​ ನಿಯಮ ಮತ್ತು ನಿತ್ಯಜೀವನದ ಪರಿಪಾಠವನ್ನು ಸಮೀಕರಿಸಿ ಪ್ರವಚನ ನೀಡುತ್ತಿದ್ದಾರೆ ಮೈಸೂರಿನ ಶ್ರೀಸಚ್ಚಿದಾನಂದ ಗಣಪತಿ ಸ್ವಾಮೀಜಿಯವರು. ಇಂದು ಕೂಡ ನಾವು ಪಾಲಿಸಬೇಕಾದ ಧರ್ಮ ಹೇಗಿದೆ, ಅದನ್ನು ಪಾಲಿಸುವುದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಅದರ ಸಾರ ಹೀಗಿದೆ-
ಎರಡು ದಿನಗಳಿಂದ ನಾವು ಪಾಲಿಸಬೇಕಾದ ಧರ್ಮದ ಕುರಿತ ವಿವರಣೆಯನ್ನು ಕೊಟ್ಟಿದ್ದೇವೆ. ಇಂದು ಕೂಡ ಅದೇ ಧರ್ಮದ ಕುರಿತು ಇನ್ನಷ್ಟು ತಿಳಿಯೋಣ. ಸದ್ಯ ನಾವು ಮನೆಯನ್ನೇ ದೇವಾಲಯ ಅಂದುಕೊಳ್ಳಬೇಕಾದ್ದು ಧರ್ಮ. ಅದೇ ರೀತಿ ಮನಸ್ಸನ್ನೆ ಪರಮಾತ್ಮ ಎಂದೂ, ಮನೆಯಲ್ಲಿ ಇರುವುದೇ ಧರ್ಮ ಎಂದು ತಿಳಿದುಕೊಳ್ಳಬೇಕು. ಕರೊನಾ ಸೋಂಕು ಗೆಲ್ಲುವುದೇ ಪರಮಾತ್ಮನ ಅನುಗ್ರಹವೆಂದೇ ಭಾವಿಸಬೇಕು.
ಸಮಯ ಸಂದರ್ಭಾನುಸಾರ ಧರ್ಮದ ವ್ಯಾಖ್ಯೆ, ವಿವರಣೆಗಳು ಬದಲಾಗುತ್ತದೆ. ಸದ್ಯದ ಮಟ್ಟಿಗೆ ದೇಶದ, ಜನರ ಒಳಿತಿಗಾಗಿ ನಾವು ಮೊಂಡುತನ ಪ್ರದರ್ಶಿಸಬಾರದು. ಧರ್ಮದ ಹೆಸರಿನಲ್ಲಿ ಬೀದಿಗೂ ಇಳಿಯಬಾರದು. ಧರ್ಮ ಸೂಕ್ಷ್ಮಗಳು ಅನೇಕ ಇವೆ. ಈಗ ಸರ್ಕಾರ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಬೇಕು. ಬಡವರಿಗೆ ಕೈಲಾದಷ್ಟು ಸಹಾಯ ಮಾಡಿ. ಸಮಾಜದ ಒಳಿತೆಗೆ ಶ್ರಮಿಸೋಣ ಎಂದು ಸ್ವಾಮೀಜಿ ಹೇಳಿದ್ದಾರೆ. ಅವರ ಪ್ರವಚನದ ಸಂಪೂರ್ಣ ಪಾಠಕ್ಕೆ ಈ ಕೆಳಗಿನ ವಿಡಿಯೋ ಲಿಂಕ್​ಗಳನ್ನು ಗಮನಿಸಬಹುದು.
https://www.facebook.com/VVani4U/videos/164621978193945/
VIDEO: ಕರೊನಾ ಕಷ್ಟಕಾಲದಲ್ಲಿ ಉತ್ತಮರಾಗುತ್ತೀರೋ, ಮಧ್ಯಮರಾಗುತ್ತೀರೋ ಅಥವಾ ಅಧಮರಾಗುತ್ತೀರೋ- ಆಯ್ಕೆ ನಿಮ್ಮದು ಎನ್ನುತ್ತದೆ ಶ್ರೀಗುರುವಾಣಿ

https://www.instagram.com/tv/B_WpVHMn8hV/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 8 =
Remember me
