ನವದೆಹಲಿ:ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉಸೇನ್​ ಬೋಲ್ಟ್​ಗಿಂತ ವೇಗವಾಗಿ ಕೆಸರು ಗದ್ದೆಯಲ್ಲಿ ಓಡಿದ ವ್ಯಕ್ತಿಯೊಬ್ಬನ ಫೋಟೋ ವೈರಲ್​ ಆಗಿತ್ತು. ಆ ಸುದ್ದಿ ಇದೀಗ ಕ್ರೀಡಾ ಸಚಿವಾಲಯದ ರಾಜ್ಯ ಸಚಿವರವರೆಗೆ ತಲುಪಿದ್ದು, ಆ ವ್ಯಕ್ತಿಯನ್ನು ತಾನು ಭೇಟಿ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಪ್ರಸಿದ್ಧ ಜಾನಪದ ಕ್ರೀಡೆಯಾಗಿರುವ ಕಂಬಳದಲ್ಲಿ ಶ್ರೀನಿವಾಸ್​ ಗೌಡ ಹೆಸರಿನ ವ್ಯಕ್ತಿ ಓಡಿದ್ದು ಹೊಸ ದಾಖಲೆಯೊಂದನ್ನು ಬರೆದಿತ್ತು. 142 ಮೀಟರ್​ ಅಂತರವನ್ನು ಶ್ರೀನಿವಾಸ್​ ಕೇವಲ 13.42 ಸೆಕೆಂಡ್​ಗಳಲ್ಲಿ ಓಡಿದ್ದರು. 100 ಮೀಟರ್​ ಓಟಕ್ಕೆ ಇವರು ತೆಗೆದುಕೊಂಡ ಸಮಯ ಕೇವಲ 9.55 ಸೆಕೆಂಡ್​. ಕರ್ನಾಟಕದಲ್ಲಿ ಮಾತ್ರವೇ ಇರುವ ಕಂಬಳ ಕ್ರೀಡೆಯಲ್ಲಿ ಇದು ದಾಖಲೆಯಾಗುವುದರ ಜತೆ ವಿಶ್ವ ಮಟ್ಟದಲ್ಲಿಯೂ ದಾಖಲೆ ಬರೆದಂತಾಗಿತ್ತು. ವಿಶ್ವದ ಅತ್ಯಂತ ವೇಗದ ಓಟಗಾರ ಎಂದು ಕರೆಸಿಕೊಂಡಿರುವ ಉಸೇನ್​ ಬೋಲ್ಟ್​ 100 ಮೀಟರ್​ ಓಡಲು 9.58 ಸೆಕೆಂಡ್​ ಸಮಯ ತೆಗೆದುಕೊಳ್ಳುತ್ತಾರೆ. ಇದೀಗ ಬೋಲ್ಟ್​ನ ದಾಖಲೆಯನ್ನು 28 ವರ್ಷದ ಶ್ರೀನಿವಾಸ್​ ಮುರಿದಿದ್ದಾರೆ.
ಇದನ್ನೂ ಓದಿ:ಕಂಬಳದ ‘ರನ್’ವೀರ ಶ್ರೀನಿವಾಸ ಗೌಡ
ಸಾಮಾಜಿಕ ಜಾಲತಾಣಗಳಲ್ಲಿ ಶ್ರೀನಿವಾಸ್​ನ ಈ ದಾಖಲೆಯ ಕುರಿತಾಗಿ ಜನ ಮಾತನಾಡಿಕೊಳ್ಳುತ್ತಿರುವಾಗಲೇ ಈ ಸುದ್ದಿ ಕೇಂದ್ರದವರೆಗೂ ಹೋಗಿ ತಲುಪಿದೆ. ಕೇಂದ್ರ ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ಕಿರೆನ್​ ರಿಜಿಜು ಅವರಿಗೆ ಈ ವಿಷಯ ತಿಳಿದುಬಂದಿದೆ. ಶ್ರೀನಿವಾಸ್​ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಕಿರೆನ್​, ಶ್ರೀನಿವಾಸರನ್ನು ತಾವು ದೆಹಲಿಗೆ ಕರೆಸಿಕೊಳ್ಳುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಎದುರಿಗೆ ಶ್ರೀನಿವಾಸ್​ನ ಓಟದ ವೇಗವನ್ನು ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
ಶ್ರೀನಿವಾಸ್​ರನ್ನು ಒಲಿಂಪಿಕ್ಸ್​ಗೆ ಕಳುಹಿಸಬೇಕು ಎಂದು ಸಾಮಾಜಿಕ ಜಾಲತಾಣಗಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಮಾತನಾಡಿರುವ ಸಚಿವರು, “ನಮ್ಮ ಜನರಿಗೆ ಒಲಿಂಪಿಕ್ಸ್​ನ ನೀತಿ ನಿಯಮಗಳು ಸರಿಯಾಗಿ ತಿಳಿದಿಲ್ಲ. ಒಲಿಂಪಿಕ್ಸ್​ನಲ್ಲಿ ಅಂತಿಮವಾಗಿ ಮನುಷ್ಯನ ಶಕ್ತಿ ಮತ್ತು ಸಾಮರ್ಥ್ಯವೇ ಗೆಲ್ಲುತ್ತದೆ. ಭಾರತದ ಯಾವುದೇ ಪ್ರತಿಭೆಯು ಅವಕಾಶದಿಂದ ವಂಚಿತರಾಗಲು ನಾವು ಬಿಡುವುದಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ತುಳುನಾಡಿನ ಕಂಬಳದ ‘ರನ್’ವೀರ ಶ್ರೀನಿವಾಸ ಗೌಡ
ಸಾಮಾಜಿಕ ಜಾಲತಾಣಗಳಲ್ಲಿ ಉಸೇನ್​ ಬೋಲ್ಟ್​ಗೆ ಹೋಲಿಕೆ ಮಾಡುತ್ತಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ಶ್ರೀನಿವಾಸ್​, “ಜನರು ನನ್ನನ್ನು ಉಸೇನ್​ ಬೋಲ್ಟ್​ಗೆ ಹೋಲಿಸುತ್ತಿದ್ದಾರೆ. ಆತ ಅಂತಾರಾಷ್ಟ್ರೀಯ ಕ್ರೀಡಾಪಟು. ನಾನು ಸಾಮಾನ್ಯ ಮನುಷ್ಯ. ಅವರೆಲ್ಲಿ ನಾನೆಲ್ಲಿ” ಎಂದು ಹೇಳಿದ್ದಾರೆ.
ಕಳೆದ ವರ್ಷ ಮಧ್ಯಪ್ರದೇಶದ ಒಬ್ಬ ವ್ಯಕ್ತಿಯು 11 ಸೆಕೆಂಡುಗಳಲ್ಲಿ 100 ಮೀಟರ್​ ಓಡುತ್ತಾನೆ ಎನ್ನುವುದು ಸುದ್ದಿಯಾಗಿದ್ದಾಗಲೂ ಸಹ ಕಿರೆನ್​ ಆತನನ್ನು ಭೇಟಿಯಾಗಿದ್ದರು.(ಏಜೆನ್ಸೀಸ್​)
I'll call Karnataka's Srinivasa Gowda for trials by top SAI Coaches. There's lack of knowledge in masses about the standards of Olympics especially in athletics where ultimate human strength & endurance are surpassed. I'll ensure that no talents in India is left out untested.https://t.co/ohCLQ1YNK0
— Kiren Rijiju (@KirenRijiju)February 15, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
